Breaking News :

ಕಾರ್ಕಳ; ಅತ್ಯಾಚಾರ ಪ್ರಕರಣದಲ್ಲಿ ಬಂಧಿತ 3ನೇ ಆರೋಪಿ ಬಿಜೆಪಿ ಕಾರ್ಯಕರ್ತ!

ಕಾರ್ಕಳ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ಮೂರನೇ ಆರೋಪಿ ಕಾರ್ಕಳ ತೆಲ್ಲರು ನಿವಾಸಿ ಅಭಯ್ ನನ್ನು ಬಂಧಿಸಲಾಗಿದೆ. ಈತ ಬಿಜೆಪಿ ಮತ್ತು ಭಜರಂಗದಳದ ಕಾರ್ಯಕರ್ತ ಎಂದು ವರದಿಯಾಗಿದೆ. ಅಭಯ್ ಕಾಪುವಿನ ವ್ಯಕ್ತಿಯೊಂದಿಗೆ ಸೇರಿಕೊಂಡು ಟಿಪ್ಪರ್ ಖರೀದಿಸಿದ್ದ ಆದರೆ ಲೋನ್ ಕಂತು ಬಾಕಿ ಇರಿಸಿದ್ದ ಕಾರಣ ಆತನ ವಾಹನವನ್ನು ಫೈನಾನ್ಸ್ ಕಂಪನಿ ಮುಟ್ಟುಗೋಲು ಹಾಕಿಕೊಂಡ ನಂತರ ಬೆಂಗಳೂರಿನಲ್ಲಿ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಅಲ್ತಾಫ್ ಹಾಗೂ ಅಭಯ್ ಇಬ್ಬರೂ ಕಾರ್ಕಳ ಜೋಡುರಸ್ತೆ ಬಳಿ ಟಿಪ್ಪರ್ ನಿಲ್ಲಿಸುತ್ತಿದ್ದರು. […]

ಅನ್ಯಕೋಮಿನ ಜೋಡಿ ಬೈಕ್ ನಲ್ಲಿ ತೆರಳುವಾಗ ತಡೆದು ಪ್ರಶ್ನಿಸಿದ ಗುಂಪು

ಅನ್ಯಕೋಮಿನ ಜೋಡಿ ಬೈಕ್ ನಲ್ಲಿ ಹೋಗುವಾಗ ಅಡ್ಡಗಟ್ಟಿ ಜನರು ಪ್ರಶ್ನಿಸಿರುವ ಘಟನೆ ಕೋಲಾರ ನಗರದ ಅಂತರಗಂಗೆ ರಸ್ತೆಯಲ್ಲಿ ನಿನ್ನೆ ಘಟನೆ ನಡೆದಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಮಹಿಳೆ ಹಾಗೂ ಆಕೆಯ ಮಗುವನ್ನು ಬೈಕ್‌ನಲ್ಲಿ ಕೆರದುಕೊಂಡು ಹೋಗುತ್ತಿದ್ದ ಯುವಕನ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಯುವಕನಿಂದ ಬೆದರಿಕೆ ಹಾಕಿರುವ ಕುರಿತು ದೂರು ಪಡೆದಿದ್ದಾರೆ. ಜಿಲ್ಲೆಯ ಮಾಲೂರು ತಾಲ್ಲೂಕು ಶಿವಾರಪಟ್ಟಣದ ವಿಷ್ಣು ಎಂಬ ಯುವಕ ಅದೇ ಗ್ರಾಮದ ಸಮೀನಾ ತಾಜ್ ಎಂಬ ಮಹಿಳೆಯನ್ನು […]

ಕಾರ್ಕಳ ಯುವತಿ ಮೇಲೆ ಅತ್ಯಾಚಾರ ಪ್ರಕರಣ: ಮತ್ತೋರ್ವ ಆರೋಪಿ ಬಂಧನ

ಕಾರ್ಕಳ ಯುವತಿ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತನನ್ನು ಕಾರ್ಕಳದ ಅಭಯ್(23) ಎಂದು ಗುರುತಿಸಲಾಗಿದೆ. ಅಭಯ್, ಅಲ್ತಾಫ್‌ಗೆ ಮಾದಕ ವಸ್ತು ನೀಡಿರುವುದು ತನಿಖೆಯ ವೇಳೆ ಬಯಲಾಗಿದೆ. ಕೃತ್ಯ ಎಸಗಿದ ಮೇಲೆ ಅಲ್ತಾಫ್ ತಪ್ಪಿಸಿ ಕೊಳ್ಳಲು ಅಭಯ್ ಸಹಕಾರ ನೀಡಲು ಪ್ರಯತ್ನಿಸಿರುವುದು ಕೂಡ ತನಿಖೆ ವೇಳೆ ತಿಳಿದು ಬಂದಿದೆ. ಬಂಧಿತ ಅಭಯ್‌ನನ್ನು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಕಸ್ಟಡಿಗೆ ಪಡೆದುಕೊಂಡು, ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.

ತಾಯಿಯ ಆಸ್ತಿಯನ್ನು ಕಬಳಿಸಿ ಊಟ ಹಾಕದ ಮಕ್ಕಳು; ಠಾಣೆಯ ಮೆಟ್ಟಿಲೇರಿದ ವೃದ್ಧೆ ತಾಯಿ

ತಾಯಿಯ ಅಸ್ತಿಯನ್ನು ಕಬಳಿಸಿ, ಸರಿಯಾಗಿ ಊಟ ನೀಡದೆ ರಾಕ್ಷಸಿ ವರ್ತನೆಯನ್ನು ತೋರಿರುವ ಮಕ್ಕಳ ವಿರುದ್ಧ ವೃದ್ಧೆ ತಾಯಿಯೋರ್ವಳು ನಾಲ್ವರು ಪುತ್ರರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತೆಲಂಗಾಣದ ಕರೀಂನಗರ ಜಿಲ್ಲೆಯ ತಿಮ್ಮಾಪುರ ಮಂಡಲದ ಅಳುಗುನೂರು ಗ್ರಾಮದಲ್ಲಿ ನಡೆದಿದ್ದು, ಮಕ್ಕಳು ಸರಿಯಾಗಿ ಊಟ ಕೊಡುತ್ತಿಲ್ಲವೆಂದು ವೃದ್ಧ ತಾಯಿ ಪುತ್ರರ ವಿರುದ್ಧ ಠಾಣೆ ಮೆಟ್ಟಿಲೇರಿದ್ದಾರೆ. ನನಗೆ ನಾಲ್ವರು ಪುತ್ರರಿದ್ದು ಅವರಿಗೆಲ್ಲಾ ಮದುವೆ ಮಾಡಿ, ನನ್ನ ಆಸ್ತಿಯನ್ನೆಲ್ಲಾ ಅವರ ಹೆಸರಿಗೆ ಬರೆದುಕೊಟ್ಟಿದ್ದೇನೆ. ಆದರೆ ಅವರು ನನ್ನನ್ನು ಪುಟ್ಟ ಗುಡಿಸಲಿನಲ್ಲಿಟ್ಟು ಸರಿಯಾಗಿ ಊಟ […]

ಉಡುಪಿ; ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

ಕೆರೆಗೆ ಈಜಲು ಹೋದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಉಡುಪಿಯ ಕರಂಬಳಿಯಲ್ಲಿ ನಡೆದಿದೆ. ಮೃತನನ್ನು ಇಂದ್ರಾಳಿ ನಿವಾಸಿ ಸಿದ್ದಾರ್ಥ್ ಶೆಟ್ಟಿ (17) ಎಂದು ಗುರುತಿಸಲಾಗಿದೆ. ಈತ ಮಣಿಪಾಲದ ಕಾಲೇಜೊಂದರ ವಿದ್ಯಾರ್ಥಿಯಾಗಿದ್ದ. ಸಿದ್ದಾರ್ಥ್ ನಿನ್ನೆ ಇಬ್ಬರು ಸ್ನೇಹಿತರೊಂದಿಗೆ ಉಡುಪಿಯ ಕರಂಬಳಿ ಕೆರೆಗೆ ಈಜಲು ತೆರಳಿದ್ದನು. ಈ ವೇಳೆ ಈಜಲು ನೀರಿಗಿಳಿದಿದ್ದು, ಈಜಲು ಆಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಇನ್ನಿಬ್ಬರು ಸ್ನೇಹಿತರು ನೀರಿಗೆ ಇಳಿದಿರಲಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.

ಕಡಬ; ಭೀಕರ ಅಪಘಾತ; ಬೈಕ್ ಸವಾರ ಮೃತ್ಯು

ಖಾಸಗಿ ಬಸ್ಸನ್ನು ಓವರ್‌ಟೇಕ್ ಮಾಡುವ ಭರದಲ್ಲಿ ಬೈಕೊಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಸುಬ್ರಹ್ಮಣ್ಯ-ಧರ್ಮಸ್ಥಳ ರಾಜ್ಯ ಹೆದ್ದಾರಿಯ ಇಚಿಲಂಪಾಡಿ ಸಮೀಪದ ನೂಜಿಬಾಳ್ತಿಲ ಎಂಬಲ್ಲಿ ನಡೆದಿದೆ. ಮೃತ ಸವಾರನನ್ನು ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿ ಗ್ರಾಮದ ಗುತ್ಯಪ್ಪ ಎಂಬವರ ಪುತ್ರ ದೇವರಾಜ್(22) ಎಂದು ಗುರುತಿಸಲಾಗಿದೆ. ದೇವರಾಜ್ ತನ್ನ ಸ್ನೇಹಿತರೊಂದಿಗೆ ಬೈಕಿನಲ್ಲಿ ಧರ್ಮಸ್ಥಳ ಯಾತ್ರೆ ಮುಗಿಸಿ ಸುಬ್ರಹ್ಮಣ್ಯಕ್ಕೆ‌ ತೆರಳುತ್ತಿದ್ದ ವೇಳೆ ನೂಜಿಬಾಳ್ತಿಲ ಬೆಥನಿ‌ ಕಾಲೇಜಿನ ಮುಂಭಾಗದಲ್ಲಿ ಎದುರಿನಿಂದ ತೆರಳುತ್ತಿದ್ದ ಖಾಸಗಿ ಬಸ್ಸನ್ನು ಓವರ್‌ಟೇಕ್ ಮಾಡುವ ಸಂದರ್ಭದಲ್ಲಿ […]

ಪ್ರೀತಿಗೆ ಪೋಷಕರು ವಿರೋಧ; ಪ್ರೇಮಿಗಳಿಬ್ಬರು ನೇಣಿಗೆ ಶರಣು

ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮನನೊಂದು ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಡೆಂಕಣಿಕೋಟೆಯ ಕೆಳಮಂಗಲ ಸಮೀಪದ ಗೌತಾಲಂ ಗ್ರಾಮದಲ್ಲಿ ನಡೆದಿದೆ. ಗೌತಾಲಂ ಗ್ರಾಮದ ನರಸಿಂಹಮೂರ್ತಿ(22), ಬಾಚನಪ್ಪಟ್ಟಿ ಗ್ರಾಮದ ಯುವಶ್ರೀ(17) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ನರಸಿಂಹಮೂರ್ತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದನು. ಯುವಶ್ರೀ ಕೃಷ್ಣಗಿರಿಯ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ನರಸಿಂಹ ಮೂರ್ತಿ ಹಾಗೂ ಯುವಶ್ರೀ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಯುವಶ್ರೀ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ನರಸಿಂಹಮೂರ್ತಿ […]

ಉದ್ಘಾಟನೆ ಭಾಗ್ಯವಿಲ್ಲದೆ ಭೂತ ಬಂಗಲೆಯಂತಾದ ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಿಸಿದ ಸಮುದಾಯ ಭವನ

ಬಡವರು,ಮಧ್ಯಮವರ್ಗದ ಜನರ ಕಾರ್ಯಕ್ರಮಗಳಿಗೆ ಅಂತಾ ಕೋಟಿ ಕೋಟಿ ರೂ.ವೆಚ್ಚದಲ್ಲಿ ಜಯನಗರದಲ್ಲಿ ನಿರ್ಮಿಸಿರುವ ಬಿಬಿಎಂಪಿಯ (BBMP) ಸಮುದಾಯಭವನ ಉದ್ಘಾಟನೆ ಭಾಗ್ಯ ಸಿಗದೇ ಗಬ್ಬೆದ್ದುನಾರುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ‌. ಭೂತಬಂಗಲೆಯಂತಾದ ಬಿಬಿಎಂಪಿಯ ಸಮುದಾಯ ಭವನ ಜಯನಗರದಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿತ್ತು. ಈ ಕಟ್ಟಡ 2020ರಲ್ಲೇ ಉದ್ಘಾಟನೆಯಾಗಬೇಕಿತ್ತು, ಆದರೆ ಮಾಜಿ ಶಾಸಕಿ ಸೌಮ್ಯರೆಡ್ಡಿ ಹಾಗೂ ಹಾಲಿ ಶಾಸಕ ಸಿ.ಕೆ.ರಾಮಮೂರ್ತಿ ಜಿದ್ದಾಜಿದ್ದಿನಿಂದ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಸಿಗದೆ ಭೂತಬಂಗಲೆಯಂತಾಗಿದೆ ಎಂದು ವರದಿಯಾಗಿದೆ. ಜಯನಗರ ಸುತ್ತಮುತ್ತಲಿನ ಜನರಿಗೆ ಕಾರ್ಯಕ್ರಮಗಳು, ಸಮಾರಂಭ ನಡೆಸೋಕೆ […]

ಹೇಮಾ ಸಮಿತಿ ವರದಿಯ ಬೆನ್ನಲ್ಲೇ ಮಲಯಾಳಂ ಚಿತ್ರರಂಗದಲ್ಲಿ ಬಿರುಗಾಳಿ: ನಾಲ್ವರು ನಟರ ವಿರುದ್ಧ ಕೇಳಿ ಬಂದ ಲೈಂಗಿಕ ದೌರ್ಜನ್ಯ ಆರೋಪ

ಹೇಮಾ ಸಮಿತಿ ವರದಿಯ ಬೆನ್ನಲ್ಲೇ ಮಾಲಯಾಳಂ ಚಿತ್ರರಂಗದಲ್ಲಿ ಮಹಿಳಾ ಕಲಾವಿದರ ಮೇಲೆ ನಡೆದಿದ್ದ ಒಂದೊಂದೇ ಕೃತ್ಯಗಳು ಬೆಳಕಿಗೆ ಬರುತ್ತಿದೆ. ಈ ಹಿಂದೆ ತಮ್ಮ ಮೇಲಾದ ಕಿರುಕುಳ ಹಾಗೂ ದೌರ್ಜನ್ಯದ ಬಗ್ಗೆ ನಟಿಯರು ಬಹಿರಂಗವಾಗಿ ಹೇಳಿಕೆಯನ್ನು ನೀಡಿ, ಆರೋಪವನ್ನು ಮಾಡುತ್ತಿದ್ದಾರೆ. ಮಲಯಾಳಂ ನಿರ್ದೇಶಕ ರಂಜಿತ್, ಹಿರಿಯ ನಟ ಸಿದ್ದೀಕ್, ನಟ ರಿಯಾಜ್ ಖಾನ್ ವಿರುದ್ಧ ಅಸಭ್ಯ ವರ್ತನೆ ಹಾಗೂ ಕಿರುಕುಳದ ಆರೋಪ ಮಾಡಲಾಗಿದೆ. ಮಲಯಾಳಂ ನಟಿ ಮಿನು ಮುನೀರ್ ತನ್ನ ಸಹ ನಟರು ಮತ್ತು ತಂತ್ರಜ್ಞರ ವಿರುದ್ಧ ಆರೋಪಗಳನ್ನು […]

ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಸುದ್ದಿ; ಕುಮಾರಸ್ವಾಮಿ ಹೇಳಿದ್ದೇನು ಗೊತ್ತಾ?

ಬೆಂಗಳೂರಿನ ಸೆಂಟ್ರಲ್ ಪರಪ್ಪನ ಅಗ್ರಹಾರದಲ್ಲಿರುವ ಖೈದಿಗಳಿಗೆ ಪಂಚತಾರ ಹೋಟೆಲ್‌ನ ವ್ಯವಸ್ಥೆ ಇದೆ. ದುಡ್ಡು ಕೊಟ್ಟರೆ ಏನು ಬೇಕಾದರೂ ಕೊಂಡುಕೊಳ್ಳಬಹುದು ಎಂಬುದು ಈಗ ದರ್ಶನ್ ವಿಚಾರದಲ್ಲಿ ಅದು ಪ್ರಚಾರಕ್ಕೆ ಬಂದಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಮಂಡ್ಯದಲ್ಲಿ ಸೋಮವಾರ ಮಾಧ್ಯಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಜೈಲಿನಲ್ಲಿನ ಅವ್ಯವಸ್ಥೆ ಹೊಸದಾಗಿ ಆಗಿಲ್ಲ, ಹಿಂದಿನಿಂದಲೂ ನಡೆಯುತ್ತಾ ಇದೆ. ಹಿಂದೆ ಡಿಜಿ ಮತ್ತು ಡಿಸಿಪಿ ನಡುವೆ ದೊಡ್ಡ ಗಲಾಟೆ ಆಗಿತ್ತು. ತನಿಖೆ ನಡೆಯಬೇಕು ಎಂದು ಗಲಾಟೆ ಆಗಿತ್ತು. ಪರಪ್ಪನ ಅಗ್ರಹಾರದಲ್ಲಿರುವ […]