Breaking News :

ಜಿಲ್ಲೆಯ ಜನತೆಗೂ ತಟ್ಟಿದ ಸಾರಿಗೆ ನೌಕರರ ಮುಷ್ಕರ ಬಿಸಿ

 


ಜಿಲ್ಲೆಯ ಜನತೆಗೂ ತಟ್ಟಿದ ಸಾರಿಗೆ ನೌಕರರ ಮುಷ್ಕರ ಬಿಸಿ


ಮಡಿಕೇರಿ : ಇಂದು ಬೆಳಗ್ಗೆಯಿಂದ ರಾಜ್ಯದಾದ್ಯಂತ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಮುಷ್ಕರದ ಬಿಸಿ ಕೊಡಗಿನ ಜನತೆಗೂ ತಟ್ಟಿದೆ. ಮುಷ್ಕರ ಹಿನ್ನೆಲೆ ಜಿಲ್ಲೆಯಲೂ KSRTC ಬಸ್ಸುಗಳು ರಸ್ತೆಗಿಳಿಯದೆ ನಿಲ್ದಾಣಗಳಲ್ಲೇ ನಿಂತಿದ್ದವು.

ಹತ್ತು ಗಂಟೆಯಾದರು ಶಾಲೆಗೆ ಹೋಗಲಾರದೆ ವಿದ್ಯಾರ್ಥಿಗಳು ಪರದಾಡಿದರು. ಸಾರಿಗೆ ಬಸ್ ಗಳಿಲ್ಲದೆ ಪರದಾಡಿದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಖಾಸಗಿ ಸೇವೆಗಳತ್ತ ಮುಖ ಮಾಡಿದ ಪ್ರಸಂಗ ಕಂಡುಬಂತು.

ಸರಕಾರಿ ಬಸ್ ನೌಕರರು ಮುಷ್ಕರ ಕೈಗೊಂಡು, ಬಸ್ಗಳು ರಸ್ತೆಗಿಳಿಯದೆ ಇರುವುದನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಹಾಗೂ ಕಾರುಗಳು ಮಂಗಳೂರು, ಸುಳ್ಯ, ಕುಶಾಲನಗರ,ಹಾಸನ, ಮೈಸೂರಿನತ್ತ ಸೇವೆ ಆರಂಭಿಸಿವೆ.

ಇನ್ನೂ ಉಳಿದಂತೆ ಖಾಸಗಿ ಬಸ್ ಸೇವೆಗಳಿರುವ ಊರುಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಯಾವುದೇ ಅಡ್ಡಿ ಇರಲಿಲ್ಲ.

 

 

 

Share this article

ಟಾಪ್ ನ್ಯೂಸ್

More News