ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಆನೆ ದಾಳಿಗೊಳಗಾದ ಕಾರ್ಮಿಕರ ಯೋಗಕ್ಷೇಮ ವಿಚಾರಿಸಿದ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ
ಮಡಿಕೇರಿ : ಕೊಡಗಿನ ವಿರಾಜಪೇಟೆ ತಾಲೂಕು ವ್ಯಾಪ್ತಿಯ ಕರಡಿಗೋಡು ಗ್ರಾಮದಲ್ಲಿ ಕಾಡಾನೆ ದಾಳಿಗೊಳಗಾಗಿ ಗಾಯಗೊಂಡ ಕಾರ್ಮಿಕರನ್ನು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ, ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.
ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಸಮೀಪದ ಕರಡಿಗೋಡು ಕಾಫಿ ತೋಟ ದಲ್ಲಿ ಕೆಲಸ ನಿರ್ವಹಿಸುತ್ತಿದಾ ಸಾಬುಅಲ್ಲಿ (60) ಹಾಗೂ ಕಣ್ಣನ್ನ್ (49) ಎಂಬ ಕಾರ್ಮಿಕ ರ ಮೇಲೆ ಕಾಡನೆ ದಾಳಿ ಮಾಡಿದ್ದು ಪ್ರಾಣಪಾಯದಿಂದ ಪಾರಗಿದ್ದಾರೆ, ಗಾಯಗೊಂಡ ಕಾರ್ಮಿಕರನ್ನು ಸಿದ್ದಾಪುರ ಸರಕಾರಿ ಆಸ್ಪತ್ರೆಯ ಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಗಾಗಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ, ಮಡಿಕೇರಿ ಜಿಲ್ಲಾ ಆಸ್ಷತ್ರೆಗೆ ಭೇಟಿ ಮಾಡಿದ ಕರ್ನಾಟಕದ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಮೇರಿಯಂಡ ಸಂಕೇತ್ ಪೂವಯ್ಯ ಕಾಡನೆ ದಾಳಿಗೆ ಒಳಗಾದ ಕಾರ್ಮಿಕ ರ ಆರೋಗ್ಯ ವಿಚಾರಿಸಿದರು, ತದನಂತರ ಮಾತನಾಡಿದ ಅವರು ಕಾಡನೆ ದಾಳಿಗೆ ಒಳಗಾದ ಕಾರ್ಮಿಕ ರಿಗೆ ಉತ್ತಮ ಚಿಕಿತ್ಸೆ ನೀಡಲಾಗುವುದು, ಕರಡಿಗೋಡು ಭಾಗಗಳಲ್ಲಿ ಕಾಡನೆ ಗಳ ಸಮಸ್ಯೆ ಇದ್ದು ಇದಕ್ಕೆ ಶಾಶ್ವತ ಪರಿಹಾರಕಾಗಿ ವಿರಾಜಪೇಟೆ ಶಾಸಕರಾದ ಎ ಎಸ್ ಪೊನ್ನಣ್ಣ ರವರು ಅ ಭಾಗಗಳಲ್ಲಿ ಅನೆ ಕಂದಕ ಗಳ ನಿರ್ಮಾಣ ಮಾಡಲು ಆದೇಶ ಮಾಡಿದ್ದಾರೆ. ಮತ್ತು ಇದಕ್ಕಾಗಿ ಅನುದಾನ ವನ್ನು ಸಹ ಬಿಡುಗಡೆ ಮಾಡಲಾಗಿದೆ. ಈ ಭಾಗಗಳಲ್ಲಿ ಸಾರ್ವಜನಿಕರು ಬೆಳಗ್ಗಿನ ಜಾವ ಮತ್ತು ರಾತ್ರಿ ವೇಳೆ ಜಾಗೃತ ವಾಗಿ ಸಂಚಾರಿಸ ಬೇಕು ಎಂದು ಮನವಿ ಮಾಡಿದ್ದರು ಈ ಸಂಧರ್ಭ ವಲಯ ಅರಣ್ಯಾಧಿಕಾರಿ ಶಿವರಾಂ ಹಾಗೂ ಡಿ ಆರ್ ಎಫ್ ಸಂಜೀತ್ ಸೋಮಯ್ಯ ಮತ್ತು ಸಿಬ್ಬಂದಿಗಳು ಹಾಜರಿದ್ದರು.








