- ಬಂಟ್ವಾಳ: ತಾಲೂಕಿನಾದ್ಯಂತ ಇಂದು ಮಳೆಯ ಆರ್ಭಟ ಜೋರಾಗಿದ್ದು, ಹಲವೆಡೆಗಳಲ್ಲಿ ಹಾನಿ ಸಂಭವಿಸಿದೆ.
- ಪುದು ಗ್ರಾಮದ ಸುಜೀರು ಎಂಬಲ್ಲಿ ಸುಶೀಲ ಎಂಬವರ ಮನೆ ಹತ್ತಿರದ ಬಂಡೆ ಕಲ್ಲು ಕುಸಿದು ಬಿದ್ದಿದ್ದು ಮನೆಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
- ವೀರಕಂಭ ಗ್ರಾಮದ ಮಜಿ ಎಂಬಲ್ಲಿ ಯೋಗಿನಿ ಎಂಬವರ ಮನೆಗೆ ಭಾಗಶ: ಹಾನಿಯಾಗಿರುತ್ತದೆ. ಕಾವಳಪಡೂರು ಗ್ರಾಮದ ಮಧ್ವ ಎಂಬಲ್ಲಿ ಪ್ರಮೀಳಾ ಕೋಂದಿ ಸುರೇಂದ್ರಶೆಟ್ಟಿಯವರ ಪಕ್ಕಾಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿದೆ.
- ಕರಿಯಂಗಳ ಗ್ರಾಮದ ಪೊಳಲಿ ಜನಾರ್ಧನ ದೇವಾಡಿಗ ರವರ ಮನೆಯ ಸೀಟು ಗಾಳಿಗೆ ಹಾರಿ ಹೋಗಿದ್ದು ಮನೆಯ ಸಾಮಾಗ್ರಿಗಳು ಹಾನಿಗೊಂಡಿರುತ್ತದೆ ಎಂದು ಕಂದಾಯ ಇಲಾಖೆ ಮಾಹಿತಿ ತಿಳಿಸಿದೆ.
ಬಂಟ್ವಾಳ: ಮುಂದುವರಿದ ಮಳೆ, ವಿವಿಧೆಡೆ ಹಾನಿ
Share this article
ಟಾಪ್ ನ್ಯೂಸ್
More News


ಶಿಕ್ಷಣ ಪಡೆದು ಮುಖ್ಯವಾಹಿನಿಗೆ ಬರಲು ಶ್ರಮಿಸಬೇಕು : ಡಾ. ಮಂತರ್ ಗೌಡ
April 14, 2026


ಪ್ರೆಸ್ಕ್ಲಬ್ ನಾಮನಿರ್ದೇಶಕರಾಗಿ ಎಚ್.ಆರ್.ಸಿಂಗಿಸತೀಶ್ ಆಯ್ಕೆ
April 14, 2026



ಮಡಿಕೇರಿಯಲ್ಲಿ ಇಂದು ಮಿನಿ ಉದ್ಯೋಗ ಮೇಳ
April 8, 2026
