Breaking News :

ಕುಟ್ಟ ಸರ್ಕಾರಿ ಆಸ್ಪತ್ರೆಗೆ ಶಾಸಕ ಪೊನ್ನಣ್ಣ ದಿಢೀರ್ ಭೇಟಿ, ಪರಿಶೀಲನೆ. 

 

 

 


ಜನವಾಹಿನಿ News ಪೊನ್ನಂಪೇಟೆ : ಕೇರಳ ಚುನಾವಣಾ ಪ್ರಚಾರದ ಜವಾಬ್ದಾರಿ ನಡುವೆ, ಇಂದು ಕ್ಷೇತ್ರಕ್ಕೆ ಆಗಮಿಸಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ , ಕುಟ್ಟ ಸಾರ್ವಜನಿಕ ಆಸ್ಪತ್ರೆಗೆ ದಿಡೀರ್ ಭೇಟಿ ನೀಡಿದರು.

ಕುಟ್ಟ ಆಸ್ಪತ್ರೆಯಲ್ಲಿದ್ದ ವೈದ್ಯರ ಕೊರತೆ ಹಾಗೂ ಸೌಲಭ್ಯಗಳ ಕೊರತೆಯನ್ನು ಗಮನಿಸಿದ ಶಾಸಕರು, ಅಲ್ಲಿಂದಲೇ ಉನ್ನತ ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ಕೂಡಲೇ ಇಲ್ಲಿನ ಆಸ್ಪತ್ರೆಗೆ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರಲ್ಲದೆ ಅಲ್ಲೆ ಇದ್ದ ರೋಗಿಗಳನ್ನು ಮಾತನಾಡಿಸಿದ ಮಾನ್ಯ ಶಾಸಕರು ಅವರಿಂದ ಚಿಕಿತ್ಸೆಯ ಬಗ್ಗೆ ವಿವರಗಳನ್ನು ಪಡೆದರು.

ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು ಕಾಳಿಮಾಡ ಪ್ರಶಾಂತ್, ಕುಟ್ಟ ವಲಯ ಅಧ್ಯಕ್ಷರು ರಾಮಕೃಷ್ಣ, ಮಾಜಿ ಪಂಚಾಯಿತಿ ಸದಸ್ಯರು ಹಾಗೂ ಮಾಜಿ ವಲಯ ಅಧ್ಯಕ್ಷರು ಮುಕಟ್ಟೀರ ನವೀನ್, ಶ್ರೀಮಂಗಲ ವಲಯ ಅಧ್ಯಕ್ಷರು ಪಾಲ್ವಿನ್, ತಿತೀರ ಮಂದಣ್ಣ, ಡಿಸಿಸಿ ಸದಸ್ಯರು ಪೆಮ್ಮಂಡ ರಾಜ, ಮಚ್ಚಮಾಡ ಮನು, ಸಿದ್ದು ನಾಚಪ್ಪ, ಯುವ ಕಾಂಗ್ರೆಸ್ ಫಾರ್ದಿನ್,ಅಶ್ರಫ್, ಮಜೀದ್, ಹಾಗೂ ಪ್ತಮುಖರು ಉಪಸ್ಥಿತರಿದ್ದರು.

Share this article

ಟಾಪ್ ನ್ಯೂಸ್

More News