ಜನವಾಹಿನಿ News ಗೋಣಿಕೊಪ್ಪ : ಕಾರು ಮತ್ತು ಎರಡು ಬೈಕ್ ಗಳ ನಡುವೆ ಭೀಕರ ಅಪಘಾತ ಸಂಭವಿಸಿ ಎರಡು ಬೈಕ್ ಗಳ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಗೋಣಿಕೊಪ್ಪ-ತಿತಿಮತಿ ರಸ್ತೆಯಲ್ಲಿ ನಡೆದಿದೆ.
ನಂಜನಗೂಡು ನಿವಾಸಿ ಶಿವಕುಮಾರ್(25) ಹಾಗೂ ಕೇರಳ ರಾಜ್ಯದ ಪಾಲಕ್ಕಾಡ್ ನಿವಾಸಿ ಮೊಹಮದ್ ಶಿಹಾಬ್(27) ಮೃತ ಯುವಕರೆಂದು ಗುರುತಿಸಲಾಗಿದೆ.
ಅಪಘಾತದ ತೀವ್ರತೆಗೆ ಮೂರು ವಾಹನಗಳು ತೀವ್ರ ಜಖಂಗೊಂಡಿದ್ದು,ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







