Breaking News :

ಮಡಿಕೇರಿ ಹೈಟೆಕ್ ಬಸ್ ನಿಲ್ದಾಣಕ್ಕೆ ಡಾ ಮಂತರ್ ಗೌಡ ರವರಿಂದ 15 ಲಕ್ಷ ರೂಗಳ ಅನುದಾನ

 

 


ಜನವಾಹಿನಿ News ಮಡಿಕೇರಿ : ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದ ಬಳಿ ಮೈಸೂರು ರಸ್ತೆಯಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು 15 ಲಕ್ಷ ರೂಗಳ ಅನುದಾನವನ್ನು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ನಿಧಿಯಿಂದ ಒದಗಿಸಿದ್ದು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಮಡಿಕೇರಿ ರವರಿಂದ ಕಾಮಗಾರಿ ನಡೆಯಲಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ತೆನ್ನಿರ ಮೈನಾ ಮಾಹಿತಿ ನೀಡಿದ್ದಾರೆ.

ಸುಸಜ್ಜಿತ ಆಸನದ ವ್ಯವಸ್ಥೆ ಹಾಗೂ ಆಧುನಿಕ ಶೌಚಾಲಯ ಒಳಗೊಂಡ ಬಸ್ ನಿಲ್ದಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಲಿದ್ದು ಇದೊಂದು ಬೇಡಿಕೆ ಕೊಡಗಿನ

ಜನರ ಬಹುಕಾಲದ ಬೇಡಿಕೆಯಾಗಿತ್ತು ಜನರಲ್ ತಿಮ್ಮಯ್ಯ ವೃತ್ತ( ಟೋಲ್ ಗೇಟ್ ) ಜಿಲ್ಲೆಯ ಕೇಂದ್ರ ಸ್ಥಾನವಾಗಿದ್ದು

ಬೆಂಗಳೂರು, ಮೈಸೂರಿಗೆ ಪ್ರಯಾಣಿಸುವ ಜನರು ಮತ್ತು ಕೊಡಗು ಜಿಲ್ಲಾಸ್ಪತ್ರೆಗೆ ಭೇಟಿ ನೀಡುವವರು ಸೇರಿದಂತೆ ಸಾವಿರಾರು ಜನರು ಪ್ರತಿನಿತ್ಯ ಓಡಾಡುವ ಸ್ಥಳವಾಗಿದ್ದು ಉತ್ತಮವಾದ ಶೌಚಾಲಯ ವ್ಯವಸ್ಥೆ ಇಲ್ಲಿರಲಿಲ್ಲ. ಜನರ ಸಮಸ್ಯೆಯನ್ನು ಅರ್ಥೈಸಿಕೊಂಡು ಡಾ ಮಂತರ್ ಗೌಡ ರವರು ಜನೋಪಯೋಗಿ

ಕೊಡುಗೆ ನೀಡಿದ್ದಾರೆ ಎಂದು ಎಂದು ತೆನ್ನಿರ ಮೈನಾ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Share this article

ಟಾಪ್ ನ್ಯೂಸ್

More News