Breaking News :

ಹರೇಕಳ ಹಾಜಬ್ಬ ಸೇರಿ ಮೂವರಿಗೆ ಗೌರವ ಡಾಕ್ಟರೇಟ್

 


ಜನವಾಹಿನಿ News ಮಂಗಳೂರು : ಅಕ್ಷರ ಸಂತ ಹರೇಕಳ ಹಾಜಬ್ಬ , ಇತ್ತೀಚೆಗೆ ನಿಧನರಾದ ಯಕ್ಷಗಾನ ದಿಗ್ಗಜ‌ ಸೂರಿಕುಮೇರು ಗೋವಿಂದ ಭಟ್ (ಮರಣೋತ್ತರ), ದೈವ‌ ನರ್ತಕ ರವೀಶ್ ಪಡುಮಲೆ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದವು ಗೌರವ ಡಾಕ್ಟರೇಟ್ ಘೋಷಿಸಿದೆ.

ಮಾ.28ರಂದು ಬೆಳಿಗ್ಗೆ 11ಕ್ಕೆ‌ ಮಂಗಳ ಸಭಾಂಗಣದಲ್ಲಿ ನಡೆಯುವ ವಿವಿಯ 44ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಉನ್ನತ ಶಿಕ್ಷಣ ಸಚಿವ ಡಾ.‌ಎಂ.ಸಿ. ಸುಧಾಕರ ಭಾಗವಹಿಸುವರು.‌ ಸಂಸದ‌ ಕ್ಯಾ. ಬ್ರಿಜೇಶ್ ಚೌಟ ಘಟಿಕೋತ್ಸವ ಭಾಷಣ ಮಾಡುವರು ಎಂದು ಕುಲಪತಿ ಪ್ರೊ. ಪಿ.ಎಲ್.‌ಧರ್ಮ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಘಟಿಕೋತ್ಸವದಲ್ಲಿ ಕಲಾ ನಿಕಾಯದ 40, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ 92, ವಾಣಿಜ್ಯ ನಿಕಾಯದ 25, ಶಿಕ್ಷಣ ನಿಕಾಯದ ಐವರು ಸೇರಿ ಒಟ್ಟು 162 ಸಂಶೋಧನಾ ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ‌ಪದವಿ ನೀಡಲಾಗುವುದು. ಅವರಲ್ಲಿ 74 ಮಹಿಳೆಯರು, 88 ಪುರುಷರು, 11 ಅಂತರರಾಷ್ಟ್ರೀಯ ವಿದ್ಯಾರ್ಥಿಗಳು ಒಳಗೊಂಡಿದ್ದಾರೆ ಎಂದು ಹೇಳಿದರು.

56 ಚಿನ್ನದ ಪದಕ, 57 ನಗದು ಬಹುಮಾನಗಳಿವೆ. ಸ್ನಾತಕ, ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳ ಒಟ್ಟು 147 ರ‌್ಯಾಂಕ್ ಗಳಲ್ಲಿ ಪ್ರಥಮ ರ‌್ಯಾಂಕ್ ಅನ್ನು 69 ವಿದ್ಯಾರ್ಥಿಗಳು ಪಡೆದಿದ್ದಾರೆ. ಅವರಲ್ಲಿ ಕಲಾ‌ ನಿಕಾಯದ 17, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ 40, ವಾಣಿಜ್ಯ ನಿಕಾಯದ 8, ಶಿಕ್ಷಣ ನಿಕಾಯದ 4 ವಿದ್ಯಾರ್ಥಿಗಳು ಇದ್ದಾರೆ ಎಂದು ಹೇಳಿದರು.

Share this article

ಟಾಪ್ ನ್ಯೂಸ್

More News