ಕಡಂಗದಲ್ಲಿ ಅಸ್ಮಾಹುಲ್ ಹುಸ್ನಾ ಮಜ್ಲಿಸ್ ಹಾಗೂ ಸ್ವಲಾತ್ ಸಮರ್ಪಣೆ
ಜನವಾಹಿನಿ NEWS ಚೆಯ್ಯಂಡಾಣೆ : ಸಮುದಾಯದ ಜನರು ಧಾರ್ಮಿಕ ಚೌಕಟ್ಟಿನೊಳಗೆ ಸಮಾಜಮುಖಿ ಕೆಲಸ ಕಾರ್ಯ ಗಳು ಮಾಡುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ಸರ್ಕಾರದ ಕನಿಷ್ಠ ವೇತನ ಸಲಹಾ ಸಮಿತಿಯ ಅಧ್ಯಕ್ಷರು,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಾಹೀದ್ ತೆಕ್ಕಿಲ್ ಹೇಳಿದರು.
ಇವರು ಕಡಂಗ ಬದ್ರಿಯಾ ಮಸೀದಿಯ ಸಮೀಪದಲ್ಲಿ ಆಯೋಜಿಸಿದ ಅಸ್ಮಾಹುಲ್ ಹುಸ್ನಾ ಮಜ್ಲಿಸ್ ಹಾಗೂ ಸ್ವಲಾತ್ ಸಮರ್ಪಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಕಳೆದ 5 ವರ್ಷದಿಂದ ಈ ಪ್ರದೇಶದಲ್ಲಿ ಬೆರೆತು ಕಷ್ಟ ಕಾರ್ಪಣ್ಯಗಳಿಗೆ ಪರಿಹಾರ ಕಂಡು ಕಂಡುಕೊಳ್ಳುವಂತಹ ಪ್ರಯತ್ನಿಕ್ಕೆ ಸಫಲರಾಗಿದ್ದು ನಾನು ಅರಿತಿದ್ದೇನೆ ಹಲವಾರು ರೋಗಗಳಿಗೆ ನಮ್ಮಲ್ಲಿರತ್ತಕಂತಹ ವಿಶ್ವಾಸ ಮತ್ತು ದೃಢಶಕ್ತಿ ದೊಡ್ಡ ಪ್ರೇರಣೆಯಾಗುತ್ತದೆ, ನಮ್ಮ ಸಮುದಾಯದ ಹಲವಾರು ರೀತಿಯ ಯುವಕರು ವಿದ್ಯಾರ್ಥಿಗಳು ಮತ್ತು ಸಮುದಾಯದ ಜನರು ಸಮಾಜಮುಖಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ, ನಮ್ಮ ಸಹೋದರಿಯರು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿಯುತ್ತಿದ್ದಾರೆ ಮುಂದಿನ ದಿನಗಳಲ್ಲಿ ನಮ್ಮ ಸಮುದಾಯದ ಸಹೋದರರು ಉನ್ನತ ಹುದ್ದೆಯಲ್ಲಿ ಸೇರಿ ಸಮಾಜದ ವಿವಿಧ ಕ್ಷೇತ್ರದಲ್ಲಿ ದುಡಿದಾಗ ಮಾತ್ರ ನಮ್ಮ ಸಮುದಾಯಕ್ಕೆ ಹೆಸರು ಬರಲು ಸಾಧ್ಯ ಎಂದ ಅವರು ಇಸ್ಲಾಮಿನ ಆಚಾರ,ವಿಚಾರ,ಸಂಸ್ಕೃತಿ ಪರಂಪರೆಗಳನ್ನು ಉಳಿಸಿ ಬೆಳೆಸಬೇಕೆಂದು ಕರೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಬದ್ರಿಯಾ ಮಸೀದಿಯ ಮುದರ್ರಿಸ್ ಮೊಹಮ್ಮದ್ ಸ್ವಾದಿಕ್ ಸಖಾಫಿ ಸುರೈಜಿ ಉದ್ಘಾಟಿಸಿ ಮಾತನಾಡಿದರು.
ಮೊಯ್ಯದ್ದೀನ್ ಜುಮಾ ಮಸೀದಿಯ ಖತೀಬ್ ಇರ್ಷಾದ್ ಇರ್ಫಾನಿ ಕೊಲ್ಲಂ ಪ್ರಾಸ್ತವಿಕವಾಗಿ ಮಾತನಾಡಿದರು.
ರಹೀಂ ಅಹ್ಸನಿ ತಾನಹೂರ್ ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತನಾಡಿದರು.
ಇದೆ ಸಂದರ್ಭ ಶಾಹಿದ್ ತೆಕ್ಕಿಲ್ ರವರನ್ನು ಮೊಯ್ಯದ್ದೀನ್ ಉಸ್ತಾದರ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಅಸ್ಮಾಹುಲ್ ಹುಸ್ನಾ ಮಜ್ಲಿಸ್ ಗೆ ಮೊಯ್ಯದ್ದೀನ್ ಮುಸ್ಲಿಯಾರ್ ಕಡಂಗ ನೇತೃತ್ವ ನೀಡಿದರು.
ನೆರದಿದ್ದ ಸಾವಿರಾರು ಮಂದಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನೆರವೇರಿತು.
ಈ ಸಂದರ್ಭ ಬದ್ರಿಯಾ ಮಸೀದಿಯ ಅಧ್ಯಕ್ಷ ಉಸ್ಮಾನ್ ಹಾಜಿ,ಮೊಯ್ಯದ್ದೀನ್ ಮಸೀದಿಯ ಅಧ್ಯಕ್ಷ ಕುಂಞ ಅಬ್ದುಲ್ಲ,ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಮೈಸಿ,ಮಾಜಿ ಗ್ರಾ.ಪಂ.ಸದಸ್ಯ ಸುಬೈರ್,ಫತಾಯಿ,ಶಾಫಿ ಎಡಪಾಲ,ಷಹಜಹಾನ್ ಸಖಾಫಿ,ಹನೀಫ್ ಸಖಾಫಿ,ಅಝಿಝ್ ಸಖಾಫಿ ಕೊಂಡಂಗೇರಿ,ಕೊಂಡಂಗೇರಿ ಮುದರ್ರಿಸ್ ಮೊಯಿದ್ದೀನ್ ಫಾಳಿಲಿ,ಉಮ್ಮರ್ ಸಖಾಫಿ ಎಡಪಾಲ,ಅಬ್ದುಲ್ ಸತ್ತಾರ್ ಅಹ್ಸನಿ,ಹುಸೈನಾರ್ ಸಅದಿ,ಉಮ್ಮರ್ ಮುಸ್ಲಿಯಾರ್,ಮತ್ತಿತರರು ಉಪಸ್ಥಿತರಿದ್ದರು. ಬಷೀರ್ ಸಖಾಫಿ ಸ್ವಾಗತಿಸಿ,ಸರ್ವರನ್ನು ವಂದಿಸಿದರು.







