ಜನವಾಹಿನಿ NEWS ಸಿದ್ದಾಪುರ : ಚಾಲಕನ ಅಜಾಗರೂಕತೆಯಿಂದ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಕಾರುಗಳು ಜಖಂಗೊಂಡ ಘಟನೆ ಸಿದ್ದಾಪುರ ರಿವರ್ ಸೈಡ್ ಎಸ್ಟೇಟ್ ಸಮೀಪ ಮಂಗಳವಾರ ನಡೆದಿದೆ.
ವಿರಾಜಪೇಟೆ ಕಡೆಯಿಂದ ಪ್ರವಾಸಿಗರನ್ನು ಕರೆತರುತ್ತಿದ್ದ ಮಾರುತಿ ಸುಜುಕಿ ಕಂಪನಿಗೆ ಸೇರಿದ ಎರ್ಟಿಗಾ ಕಾರಿಗೆ ನೆಲ್ಯಹುದಿಕೇರಿ ಕಡೆಯಿಂದ ಸಿದ್ದಾಪುರ ಕಡೆಗೆ ಬರುತ್ತಿದ್ದ ಎರ್ಟಿಗಾ ಕಾರು ಡಿಕ್ಕಿ ಪಡಿಸಿದೆ ಪರಿಣಾಮ ಘಟನೆಯಲ್ಲಿ ಎರಡು ಕಾರುಗಳು ಜಖಾಂಗೊಂಡಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಗೆ ನೆಲ್ಯಹುದಿಕೇರಿ ಕಡೆಯಿಂದ ಬರುತ್ತಿದ್ದ ಎರ್ಟಿಗಾ ಕಾರಿನ ಚಾಲಕನ ಅಜಾಗರೂಕತೆಯೇ ಕಾರಣ ಎನ್ನಲಾಗಿದ್ದು, ಘಟನಾ ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಘಟನೆಯಿಂದ ಕೆಲಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಬಳಿಕ ಪೊಲೀಸರು ವಾಹನ ದಟ್ಟಣೆಯನ್ನು ನಿಯಂತ್ರಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.






