Breaking News :

ಹಾಕತ್ತೂರು :  50 ಲಕ್ಷ ವೆಚ್ಚದ ತಡೆಗೋಡೆ ಕಾಮಗಾರಿಗೆ ಎ.ಎಸ್.ಪೊನ್ನಣ್ಣ ಚಾಲನೆ

 


ಜನವಾಹಿನಿ News ಮಡಿಕೇರಿ : ಮಡಿಕೇರಿ ತಾಲೂಕಿನ ಹಾಕತ್ತೂರು ಪಂಚಾಯತ್ ವ್ಯಾಪ್ತಿಯ ಚೂರಿಕಾಡು ಬಳಿ ಭೂ ಕುಸಿತ ತಡೆಯುವ ಹಿನ್ನಲೆಯಲ್ಲಿ 50 ಲಕ್ಷ ರೂ ವೆಚ್ಚದ ತಡೆಗೋಡೆ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ನವರು ಇಂದು ಚಾಲನೆ ನೀಡಿದರು.

2002 ರಿಂದಲೇ ಈ ಭಾಗದಲ್ಲಿ ಭೂ ಕುಸಿತವಾಗಿ ಕೃಷಿ ಜಮೀನು ನಾಶವಾಗುವುದಲ್ಲದೆ ಸನಿಹದಲ್ಲಿ ಇರುವ ರಸ್ತೆ ಕೂಡ ಹಾಳಾಗುತ್ತಿದ್ದು ತಡೆಗೋಡೆ ನಿರ್ಮಾಣದ ಮೂಲಕ ರಕ್ಷಣೆ ಮಾಡುವಂತೆ ಸ್ಥಳೀಯರು ಸರ್ಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದರು.ಕಳೆದ ವಿಧಾನ ಸಭಾ ಚುನಾವಣೆ ಸಂಧರ್ಭದಲ್ಲಿ ಎ.ಎಸ್.ಪೊನ್ನಣ್ಣ ನವರು ಪ್ರಚಾರಕ್ಕೆ ಬಂದಾಗ ಅಲ್ಲಿನ ನಿವಾಸಿಗಳು ತಡೆಗೋಡೆ ನಿರ್ಮಾಣಕ್ಕೆ ಕೋರಿಕೆ ಸಲ್ಲಿಸಿದ್ದರು.

ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಎ.ಎಸ್.ಪೊನ್ನಣ್ಣನವರು ಗ್ರಾಮಸ್ಥರು ಸಲ್ಲಿಸಿದ ಕೋರಿಕೆಯನ್ನು ಈಡೇರಿಸುವ ಭರವಸೆಯನ್ನು ತಾವು ನೀಡಿದ್ದು ಕೃಷಿ ಭೂಮಿ ರಕ್ಷಣಾ ತಡೆಗೋಡೆ ನಿರ್ಮಾಣಕ್ಕೆ 1 ಕೋಟಿ 60 ಲಕ್ಷರೂಗಳ ವಿಶೇಷ ಅನುದಾನವನ್ನು ಸಣ್ಣ ನೀರಾವರಿ ಇಲಾಖೆಯಿಂದ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜ್ ರವರು ಒದಗಿಸಿದ್ದು ಅದರಲ್ಲಿ 50 ಲಕ್ಷ ರೂಗಳನ್ನು ಸದರಿ ಕಾಮಗಾರಿಗೆ ನೀಡಲಾಗಿದೆ ಎಂದು ವಿವರಿಸಿದರು.ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸಿದ್ದು ತಮಗೆ ಸಂತೃಪ್ತಿ ತಂದಿದೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯಿಲ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ, ಸಾಮಾಜಿಕ ಜಾಲತಾಣದ ಮುಖ್ಯಸ್ಥರಾದ ಹೊಸೂರು ಸೂರಜ್,ತಾ.ಪಂ.ಮಾಜಿ ಸದಸ್ಯರಾದ ಅಪ್ರು ರವೀಂದ್ರ,

ಸ್ಥಳೀಯ ಮುಖಂಡರಾದ ಪಿಯೂಸ್ ಫೆರೆರಾ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಯತೀಶ್, ಗ್ರಾ.ಪಂ ಮಾಜಿ ಸದಸ್ಯೆ ಶೈನಿ, ಪ್ರಮುಖರಾದ ನಾರಾಯಣ್, ಸಣ್ಣ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಕುಮಾರ ಸ್ವಾಮಿ ಸೇರಿದಂತೆ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

Share this article

ಟಾಪ್ ನ್ಯೂಸ್

More News