ಜನವಾಹಿನಿ NEWS ಸಿದ್ದಾಪುರ : ಸಂಚಾರಿ ನಿಯಮ ಉಲ್ಲಂಘನೆ ಹಾಗೂ ಹೆಲ್ಮೆಟ್ ರಹಿತ ಚಾಲನೆಗೆ ದಂಡ ವಿಧಿಸುವ ಮೂಲಕ ಸಿದ್ದಾಪುರ ಪಿಎಸ್ಐ ಮಂಜುನಾಥ್ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಿದ್ದಾರೆ.
ರಸ್ತೆ ಅಪಘಾತಗಳಲ್ಲಿ ಆಗುವ ಪ್ರಾಣಹಾನಿಯನ್ನು ತಡೆಯಲು ಮತ್ತು ಸುರಕ್ಷಿತ ಚಾಲನೆಯನ್ನು ಪ್ರೋತ್ಸಾಹಿಸಲು ಈ ವಿಶೇಷ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ಸವಾರರನ್ನು ತಡೆದು ಮೋಟಾರು ವಾಹನ ಕಾಯ್ದೆಯಡಿ ದಂಡ ವಿಧಿಸಲಾಯಿತು.
ದಾಖಲೆಗಳ ಪರಿಶೀಲನೆ : ಆರ್‌ಸಿ ಬುಕ್, ಚಾಲನಾ ಪರವಾನಗಿ (DL), ವಿಮೆ (Insurance) ಮತ್ತು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು ಪರಿಶೀಲಿಸಲನೆ ನಡೆಸಿದರು.
ಸಾರ್ವಜನಿಕರಿಗೆ ಪೊಲೀಸರ ಮನವಿ
ಅಪಘಾತ ಸಂಭವಿಸಿದಾಗ ತಲೆಗೆ ಆಗುವ ಗಂಭೀರ ಗಾಯಗಳಿಂದ ಬದುಕುಳಿಯಲು ಹೆಲ್ಮೆಟ್ ಏಕೈಕ ಕವಚವಾಗಿದೆ. ಪೊಲೀಸರ ಭಯಕ್ಕಾಗಿ ಅಥವಾ ದಂಡದಿಂದ ಪಾರಾಗಲು ಹೆಲ್ಮೆಟ್ ಧರಿಸಬೇಡಿ; ನಿಮ್ಮ ಸ್ವಂತ ಜೀವ ಮತ್ತು ಕುಟುಂಬದ ರಕ್ಷಣೆಗಾಗಿ “ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ, ಸಂಚಾರಿ ನಿಯಮಗಳನ್ನು ಪಾಲಿಸಿ” ಎಂದು ಇದೇ ಸಂದರ್ಭ ಮಂಜುನಾಥ್ ಹೇಳಿದರು.
ಈ ವೇಳೆ ಪ್ರೊಬೇಷನರಿ ಎಎಸ್ಐ ಚೈತ್ರ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.







