Breaking News :

ಜಾಮೀನಿನಲ್ಲಿ ಹೊರಬಂದ ವ್ಯಕ್ತಿಯಿಂದ ಜಾಲತಾಣದಲ್ಲಿ ಪ್ರಚೋದನಕಾರಿ ಹೇಳಿಕೆ : ಪೊಲೀಸ್ ಇಲಾಖೆಯಿಂದ ಕ್ರಮ 

 


ಜನವಾಹಿನಿ News ಮಡಿಕೇರಿ : ಇತ್ತೀಚೆಗೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಜಾಮೀನು ಪಡೆದು ಹೊರ ಬಂದ ನಾಪೋಕ್ಲು ವ್ಯಾಪ್ತಿಯ ವ್ಯಕ್ತಿಯಿಂದ ಸಾಮಾಜಿಕ ಜಾಲತಾಣದಲ್ಲಿ ಪ್ರಚೋಧನಕಾರಿ ಹೇಳಿಕೆ ನೀಡಿರುವ ಆರೋಪ ಕೇಳಿ ಬಂದಿದ್ದ ಹಿನ್ನೆಲೆ ಪರಿಶೀಲನೆ ನಡೆಸಿದ್ದು, ರೀಲ್ಸ್ ವೀಡಿಯೋ ಮತ್ತು ಆಡಿಯೋ ಮೂಲಕ ಪ್ರಚೋಧನಕಾರಿ ಹೇಳಿಕೆ ಪ್ರಸಾರ ಮಾಡಿರುವುದು ಇಲಾಖೆ ಗಮನಕ್ಕೆ ಬಂದಿದೆ.

ಈ ಹಿನ್ನೆಲೆ ಸಮಾಜದಲ್ಲಿ ಅಶಾಂತಿ, ಸಾರ್ವಜನಿಕ ಸೌಹಾರ್ಧತೆಗೆ ಧಕ್ಕೆ ತರಲು ಪ್ರಯತ್ನ ಮಾಡಲಾಗಿದೆ ಎಂದು ಪರಿಗಣಿಸಿ ಪ್ರತ್ಯೇಕ ಪ್ರಕರಣ ದಾಖಲು, ಜಾಮೀನು ರದ್ದುಪಡಿಸುವಂತೆ ನ್ಯಾಯಾಲಯಕ್ಕೆ ನಿವೇದನೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ಜನಾಂಗದ ಮಧ್ಯೆ, ಧರ್ಮಗಳ ನಡುವೆ ಹಿಂಸೆ ಅಥವಾ ಅಶಾಂತಿಯನ್ನು ಪ್ರಚೋದಿಸುವ ಯಾವುದೇ ರೀತಿಯ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ನೀಡುವುದು/ಪೋಸ್ಟ್ ಹಂಚುವುದು ಕಾನೂನುಬಾಹಿರ, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಅವರು ತಿಳಿಸಿದ್ದಾರೆ.

Share this article

ಟಾಪ್ ನ್ಯೂಸ್

More News