Breaking News :

ಸಿದ್ದಾಪುರ ಮಾರ್ಗ ಮಧ್ಯೆ ಮಣ್ಣುಗುಡ್ಡೆ ವಾಹನ ಸಂಚಾರಕ್ಕೆ ಅಡ್ಡಿ  

 


ಜನವಾಹಿನಿ NEWS ಸಿದ್ದಾಪುರ : ಪಟ್ಟಣದ ಪ್ರಮುಖ ರಸ್ತೆ ಮಾರ್ಗವಾದ ಸಿದ್ದಾಪುರ – ವಿರಾಜಪೇಟೆ ರಸ್ತೆ ಮಧ್ಯೆ ಜಯಲಕ್ಷ್ಮಿ ಬೇಕರಿ ಎದುರು ಚರಂಡಿ ಹೂಳೆತ್ತಲಾಗಿದ್ದು, ತ್ಯಾಜ್ಯಮಿಶ್ರಿತ ಮಣ್ಣು ಗುಡ್ಡೆಯನ್ನು ಅಲ್ಲೇ ಹಾಕಲಾಗಿದೆ ಇದರಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿ ಟ್ರಾಪಿಕ್ ಜಾಮ್ ಸಮಸ್ಯೆ ಏರ್ಪಟ್ಟಿದ್ದು, ಸಾರ್ವಜನಿಕರಿಗೆ ಕಿರಿಕಿರಿ ಅನುಭವಿಸುವಂತಾಗಿದೆ.

ಮೊದಲೇ ಕಿರಿದಾಗಿರುವ ಈ ರಸ್ತೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಣ್ಣು ರಾಶಿ ಹಾಗೆಯೇ ಇರುವುದರಿಂದ ಈ ಸಮಸ್ಯೆ ಎದುರಾಗಿದೆ. ಸ್ಥಳೀಯ ಪಂಚಾಯತಿ ನಿರ್ಲಕ್ಯವೇ ಇದಕ್ಕೆ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು ಹಾಗೂ ವಾಹನ ಸವಾರರು ಕೂಡಲೇ ಈ ಗುಡ್ಡೆಯನ್ನು ತೆರವು ಗೊಳಿಸುವ ಮೂಲಕ ಸ್ಥಳೀಯ ಆಡಳಿತ ಸುಗಮ ಸಂಚಾರಕ್ಕೆ ಅನುವು ಮಾಡಬೇಕೆಂದು ಒತ್ತಾಯಿಸಿದ್ದಾರೆ.

Share this article

ಟಾಪ್ ನ್ಯೂಸ್

More News