Breaking News :

ನಾಪೊಕ್ಲು ಬ್ಲಾಕ್ ವ್ಯಾಪ್ತಿಯ ನೂತನ ವಲಯ ಕಾಂಗ್ರೆಸ್ ಅಧ್ಯಕ್ಷರ ನೇಮಕ

 

 


ಜನವಾಹಿನಿ NEWS ಮಡಿಕೇರಿ : ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ನಾಪೊಕ್ಲು ಬ್ಲಾಕ್ ನ ಹದಿನೆಂಟು ವಲಯಗಳಿಗೆ ನೂತನ ವಲಯ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿ ಪತ್ರವನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪನವರು ಕೊಡಗು ಜಿಲ್ಲಾ ಕಾಂಗ್ರೆಸ್ ಕಛೇರಿ ಮಡಿಕೇರಿಯಲ್ಲಿ ವಿತರಿಸಿದರು.

ನಾಪೊಕ್ಲು ಮಾಚೆಟ್ಟಿರ ಕುಶು ಕುಶಾಲಪ್ಪ. ಬಲ್ಲಮಾವಟಿ ಮಂಡಿರ ದಯಾ ಚಿಣ್ಣಪ್ಪ,ಬೆಟ್ಟಗೇರಿ ಕೊಡಗನ ತೀರ್ಥ ಪ್ರಸಾದ್,ಎಮ್ಮೆಮಾಡು ಕೂರಳಿಕಾರಂಡ ಕೆ.ಎಂ.ಮೂಸಾ,ನರಿಯಂದಡ ಕೋಡಿರ ವಿನೋದ್ ನಾಣಯ್ಯ,ಮೇಕೆರಿ ಹೆಚ್.ಸಿ.ಪೊನ್ನಪ್ಪ,

ಮದೆನಾಡು ಮಜ್ಜಿಗೆಮನೆ ದೀಪಕ್,ಪಾರಾಣೆ ಬೊಳ್ಳಂಡ ದಿಲೀಪ್,ಕಕ್ಕಬ್ಬೆ ಕಲಿಯಂಡ ಸಂಪನ್ ಅಯ್ಯಪ್ಪ,ಹಾಕತ್ತೂರು ಬಿ.ಕೆ.ನಾರಾಯಣ,ಅಯ್ಯಂಗೇರಿ ಅಬ್ದುಲ್ ರೆಹಮಾನ್ ಬಿ.ಎ,ಪೆರಾಜೆ ಜಯರಾಮ್ ಕೆ. ಪೆರುಮಂಡ ,ಕರಿಕೆ ಬೇಕಲ್ ಹರಿಪ್ರಸಾದ್, ಕುಂದಚೇರಿ ಕೀರ್ತಿ ಉತ್ತಪ್ಪ, ಭಾಗಮಂಡಲ ಕೆ.ಸಿ. ವೆಂಕಟೇಶ್, ಚೇರಂಬಾಣೆ ಕೆ.ರಮೇಶ್ , ಚೆಂಬು ಹೊಸೂರು ರವಿರಾಜ್,ಹಾಗೂ ಸಂಪಾಜೆ ವಲಯಕ್ಕೆ ಕನ್ಯಾನ ವಿಜಯ್ ಕುಮಾರ್ ರವರು ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದಿನ ಅವಧಿಯವರೆಗೆ ನೇಮಕ ಗೊಂಡಿದ್ದಾರೆ.

ನೇಮಕಾತಿ ಪತ್ರ ವಿತರಿಸಿ ಮಾತನಾಡಿದ ಧರ್ಮಜ ಉತ್ತಪ್ಪನವರು ವಲಯ ಕಾಂಗ್ರೆಸ್ ಅಧ್ಯಕ್ಷರು ತಮ್ಮ ವ್ಯಾಪ್ತಿಯ ಮುಖಂಡರು ಹಾಗೂ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಪಕ್ಷ ಸಂಘಟನೆಗೆ ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ನಾಪೊಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಇಸ್ಮಾಯಿಲ್ ರವರು ವೈಯುಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದು ಅದು ಅಂಗೀಕಾರ ಗೊಂಡ ಹಿನ್ನಲೆಯಲ್ಲಿ ಹಿರಿಯ ಮುಖಂಡರಾದ ಸೌಕತ್ ಆಲಿ ರವರನ್ನು ನಾಪೊಕ್ಲು ಬ್ಲಾಕ್ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿ ಪೂರ್ಣ ಪ್ರಮಾಣದ ಅಧಿಕಾರ ನೀಡಲಾಗಿದೆ ಎಂದು ತಿಳಿಸಿದರು.

ಪ್ರಚಾರ ಸಮಿತಿ ಅಧ್ಯಕ್ಷರಾದ ಟಿ.ಪಿ.ರಮೇಶ್ ರವರು ಮಾತನಾಡಿ ವಲಯ ಕಾಂಗ್ರೆಸ್ ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಿ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜುಗೊಳ್ಳುವಂತೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಸೌಕತ್ ಆಲಿಯವರು ಎಲ್ಲಾ ವಲಯ ಕಾಂಗ್ರೆಸ್ ಅಧ್ಯಕ್ಷರು,ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷ ಸಂಘಟನೆಗೆ ನೆರವು ನೀಡುವಂತೆ ಕೋರಿದರು.

ಇತ್ತೀಚೆಗೆ ನಿಧನರಾದ ಚೆಂಬು ಭಾಗದ ಕಾಂಗ್ರೆಸ್ ಮುಖಂಡರು ಹಾಗೂ ಸಮಾಜಸೇವಕರಾದ ಆದಂ ಕುಂಞವರವರ ಆತ್ಮಕ್ಕೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಪುಷ್ಪಲತಾ,ವಾರ್ ರೂಂ ಅಧ್ಯಕ್ಷರಾದ ತೆನ್ನಿರ ಮೈನಾ, ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಹೊಸೂರು ಸೂರಜ್,ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್,

ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ,ನಗರ ಮಹಿಳಾ ಅಧ್ಯಕ್ಷೆ ಶಶಿಕಲಾ,ಫ್ಯಾನ್ಸಿ ಪಾರ್ವತಿ,ಬೊಳ್ಯಂಡ ಗಣೇಶ್ ಸ್ವರ್ಣಲತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share this article

ಟಾಪ್ ನ್ಯೂಸ್

More News