Breaking News :

ಪ್ರಕೃತ್ತಿ ವಿಕೋಪ ನಿರ್ವಹಣೆ ಉಸ್ತುವಾರಿ ಸಚಿವರಾಗಿ ಕೊಡಗಿಗೆ ಯುಟಿ ಖಾದರ್ ನೇಮಕ 

  ಜನವಾಹಿನಿ NEWS ಮಡಿಕೇರಿ : ಮುಂಗಾರು ಹಿನ್ನಲೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಪ್ರಕೃತಿ ವಿಕೋಪ ನಿರ್ವಹಣೆಗೆ ಸಚಿವರ ನೇಮಕ ಮಾಡಲಾಗಿದ್ದು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ನಿರ್ಗಮಿತ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.

ಶ್ರೀ ಕ್ಷೇತ್ರ ಕಾರಿಂಜದಲ್ಲಿ ಸಂಸದ ಕ್ಯಾ. ಚೌಟ ನೇತೃತ್ವದ ೩ನೇ ಆವೃತ್ತಿಯ ʼಯೋಗ ವಿದ್‌ ಯೋಧʼ ಕಾರ್ಯಕ್ರಮ : ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ವಿತರಣೆ

  ಜನವಾಹಿನಿ NEWS ಬಂಟ್ವಾಳ : ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಭೂಕೈಲಾಸವೆಂದೇ ಪ್ರಸಿದ್ಧವಾದ ಐತಿಹಾಸಿಕ ಶ್ರೀ ಕ್ಷೇತ್ರ ಕಾರಿಂಜೇಶ್ವರ ಬೆಟ್ಟದ ಆವರಣದಲ್ಲಿ 3ನೇ ಆವೃತ್ತಿಯ ’ಯೋಗ ವಿದ್ ಯೋಧ’ ಬೃಹತ್ ಯೋಗಾಭ್ಯಾಸ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಪ್ರಕೃತಿ ಹಾಗೂ ದೈವಿಕತೆಯ ಮಡಿಲಲ್ಲಿ ಮನಸ್ಸನ್ನು ಶಾಂತಗೊಳಿಸಿ, ದೇಹವನ್ನು ಹತೋಟಿಗೆ ತರುವ ಈ ಅಪೂರ್ವ ಯೋಗಾಭ್ಯಾಸಕ್ಕೆ ಪ್ರಕೃತಿ ರುದ್ರ ರಮಣೀಯ ಕೊಡ್ಯಾಮಲೆ ಬೆಟ್ಟಗಳ ಶ್ರೇಣಿ ಸಾಕ್ಷಿಯಾಯಿತು. ದ.ಕ. ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ […]

ಮನೆಯ ಸಮೀಪದಲ್ಲಿದ್ದ ಕೆರೆಗೆ ಬಿದ್ದು ಅವಳಿ ಮಕ್ಕಳು ಮೃತ್ಯು  

  ಜನವಾಹಿನಿ NEWS ಸುಳ್ಯ : ಮುರುಳ್ಯ ಗ್ರಾಮದ ಕಡೀರ ಎಂಬಲ್ಲಿ ಮನೆಯ ಸಮೀಪದ ಕೆರೆಗೆ ಬಿದ್ದು ಅವಳಿ ಮಕ್ಕಳು ಮೃತಪಟ್ಟ ದಾರುಣ ಘಟನೆ ಸೋಮವಾರ ಸಂಜೆ ನಡೆದಿದೆ. ಕಡೀರ ನಿವಾಸಿ , ವೆಲ್ಡಿಂಗ್ ಕೆಲಸ‌ ಮಾಡುವ ವಸಂತ ಎಂಬವರ ಮಕ್ಕಳಾದ ಜಶ್ವಿನ್ ಹಾಗೂ ಜಶ್ವಿತ್ ( ಐದೂವರೆ ವರ್ಷ ) ಮೃತರು. ಸಂಜೆ ಆಟವಾಡುತ್ತಿದ್ದಾಗ ಮನೆಯ ಸಮೀಪವೇ ಇದ್ದ ಕೆರೆಗೆ ಆಕಸ್ಮಿಕವಾಗಿ ಬಿದ್ದರೆಂದು ತಿಳಿದು ಬಂದಿದೆ. ಸುಳ್ಯದಿಂದ ಅಗ್ನಿ ಶಾಮಕದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಬಂದ ಬಳಿಕ […]

ಕೆರೆಮೂಲೆ ಯುವಕ ಆತ್ಮಹತ್ಯೆ

  ಜನವಾಹಿನಿ NEWS ಪುತ್ತೂರು : ಯುವಕನೋರ್ವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಕೆರೆಮೂಲೆ ನಿವಾಸಿ ಶೇಖರ ಎಂಬವರ ಪುತ್ರ ಜಗದೀಶ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಪೈಂಟಿಂಗ್ ಕೆಲಸ ಮಾಡುತ್ತಿದ್ದ ಜಗದೀಶ ಅವರು ಮನೆಯ ಪಕ್ಕದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತರು ತಂದೆ, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ. ಪುತ್ತೂರು ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ಹರೇಕಳ ಹಾಜಬ್ಬ ಸೇರಿ ಮೂವರಿಗೆ ಗೌರವ ಡಾಕ್ಟರೇಟ್

  ಜನವಾಹಿನಿ News ಮಂಗಳೂರು : ಅಕ್ಷರ ಸಂತ ಹರೇಕಳ ಹಾಜಬ್ಬ , ಇತ್ತೀಚೆಗೆ ನಿಧನರಾದ ಯಕ್ಷಗಾನ ದಿಗ್ಗಜ‌ ಸೂರಿಕುಮೇರು ಗೋವಿಂದ ಭಟ್ (ಮರಣೋತ್ತರ), ದೈವ‌ ನರ್ತಕ ರವೀಶ್ ಪಡುಮಲೆ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದವು ಗೌರವ ಡಾಕ್ಟರೇಟ್ ಘೋಷಿಸಿದೆ. ಮಾ.28ರಂದು ಬೆಳಿಗ್ಗೆ 11ಕ್ಕೆ‌ ಮಂಗಳ ಸಭಾಂಗಣದಲ್ಲಿ ನಡೆಯುವ ವಿವಿಯ 44ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಉನ್ನತ ಶಿಕ್ಷಣ ಸಚಿವ ಡಾ.‌ಎಂ.ಸಿ. ಸುಧಾಕರ ಭಾಗವಹಿಸುವರು.‌ ಸಂಸದ‌ ಕ್ಯಾ. ಬ್ರಿಜೇಶ್ ಚೌಟ […]

ಕಲೆ ಸಾಹಿತ್ಯಗಳು ನಾಡಿನ ಶ್ರೀಮಂತಿಕೆಯ ಪ್ರತೀಕ-ಗೋಪಾಲಕೃಷ್ಣ ಭಟ್

  ಜನವಾಹಿನಿ News ಪುತ್ತೂರು : ಸಂಗೀತ ನೃತ್ಯ ಸಾಹಿತ್ಯ ಮುಂತಾದ ಶಾಸ್ತ್ರೀಯ ಕಲೆಗಳು ನಾಡಿನ ಶ್ರೀಮಂತಿಕೆಯ ಪ್ರತೀಕ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯ ಮೂಲಕ ನಮ್ಮ ಉತ್ಕೃಷ್ಟತೆಯ ಅಂಶಗಳನ್ನು ಸಮಾಜಕ್ಕೆ ತೋರಿಸಿಕೊಟ್ಟಂತಾಗುತ್ತದೆ ಎಂದು ದ್ವಾರಕಾ ಕಾರ್ಪೋರೇಷನ್ ಮುಖ್ಯಸ್ಥ ಗೋಪಾಲಕೃಷ್ಣ ಭಟ್ ಹೇಳಿದರು. ಪುತ್ತೂರು ಸಮೀಪದ ಮುರದ ಶಿವಸದನ ಹಿರಿಯ ನಾಗರಿಕರ ವಸತಿ ನಿಲಯದಲ್ಲಿ ಜರುಗಿದ ಸಂಗೀತ ಕಲಾವಿದ ಆಗಮ ಪೆರ್ಲ ಅವರ ಸಂಗೀತ ಕಚೇರಿಯನ್ನು ಉದ್ಘಾಟಿಸಿ ಅವರು ಮಾತಾಡಿದರು. ಕಲಾವಿದ ಆಗಮ ಪೆರ್ಲ ಓರ್ವ ಪ್ರತಿಭಾವಂತ […]

ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡೀಪಾರು ನೋಟೀಸ್..!

  ಜನವಾಹಿನಿ News ಬೆಳ್ತಂಗಡಿ : ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಮೂರನೇ ಬಾರಿಗೆ ಹೊರ ಜಿಲ್ಲೆ ಗೆ ಗಡಿಪಾರು ಮಾಡಲಾಗಿದೆ. ಅವರನ್ನು ಮಾ.16 ರಿಂದ ಸೆ.19ರ ತನಕ 6 ತಿಂಗಳ ಕಾಲ ರಾಯಚೂರು ಜಿಲ್ಲೆಯ ಮಾನ್ವಿಗೆ ಗಡಿಪಾರು ಮಾಡಿ ನೋಟೀಸ್ ಜಾರಿಗೊಳಿಸಲಾಗಿದೆ. ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಗಡೀಪಾರು ಆದೇಶ ಜಾರಿಗೊಳಿಸಿದ್ದಾರೆ. ಕೆಲ ಸಮಯದ ಹಿಂದೆ ಎರಡನೇ ಬಾರಿ ದ.ಕ ಜಿಲ್ಲೆಯಿಂದ ತಿಮರೋಡಿ ಅವರನ್ಮು ಎಸಿ ಅವರು ಗಡೀಪಾರು ಮಾಡಿದ್ದರು. […]

ಬಿ.ಎಸ್.ಸಿ ಇನ್ ಫ್ಯಾಷನ್ ಡಿಸೈನ್ ಪದವಿಯಲ್ಲಿ ಡಿವೀನ ಸಲ್ದಾನಗೆ ಚಿನ್ನದ ಪದಕ

  ಜನವಾಹಿನಿ News ಮಡಿಕೇರಿ : ಮಂಗಳೂರು ವಿಶ್ವವಿದ್ಯಾನಿಲಯದ 2024-25 ನೇ ಸಾಲಿನ ಅಂತಿಮ ಪದವಿ ಪರೀಕ್ಷೆಯಲ್ಲಿ ಡೀವಿನ ಸಲ್ಡಾನ ಚಿನ್ನದ ಪದಕ ಪಡೆದು ಕೊಂಡಿದ್ದಾರೆ. ಶ್ರೀದೇವಿ ಕಾಲೇಜ್ ಆಫ್ ಫ್ಯಾಷನ್ ಡಿಸೈನ್, ಬಲ್ಲಾಳ್ ಭಾಗ್, ಮಂಗಳೂರುನಲ್ಲಿ ಬಿ.ಎಸ್.ಸಿ ಇನ್ ಫ್ಯಾಷನ್ ಡಿಸೈನ್ ವ್ಯಾಸಂಗ ಮಾಡಿದ ಇವರು ಫ್ಯಾಷನ್ ಡಿಸೈನ್ ಪದವಿ ವಿಭಾಗದಲ್ಲಿ ಅತಿ ಹೆಚ್ಚು ಅಂಕಗಳಿಸಿ ಮೊದಲ ರ್ಯಾಂಕ್ ನೊಂದಿಗೆ ಚಿನ್ನದ ಪದಕ ಪಡೆದು ಕೊಂಡಿದ್ದಾರೆ. ಡಿವೀನ ಸಲ್ದಾನ ಮೂಲತಹ ವಿರಾಜಪೇಟೆ ತಾಲೂಕಿನ ಅಪ್ಪಯ್ಯ ಸ್ವಾಮಿ […]

2025 ನೇ ಸಾಲಿನ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ : ಮಡಿಕೇರಿಯ ಕಟ್ರತನ ಲಲಿತ ಅಯ್ಯಣ್ಣ  ಸೇರಿದಂತೆ ಮೂವರಿಗೆ ಪ್ರಶಸ್ತಿ

  ಜನವಾಹಿನಿ News ಮಡಿಕೇರಿ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು 2025 ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟಿಸಲಾಗಿದೆ. ಇದೇ ಮಾರ್ಚ್ 14 ರಂದು ಮಂಗಳೂರಿನ ಊರ್ವ ಸ್ಟೋರ್ ಸಮೀಪದಲ್ಲಿರುವ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು 50 ಸಾವಿರ ರೂ.ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ ಅವರು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ […]

ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ : ಭಾಷೆ ಉಳಿಯಬೇಕಾದರೆ ಸಾಹಿತ್ಯ ಬೆಳೆಯಬೇಕು : ಡಾ.ಕೆ. ವಿ .ಚಿದಾನಂದ

  ಜನವಾಹಿನಿ News ಸುಳ್ಯ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ ಫೆ. 24ರಂದು ಕಾಲೇಜಿನ ಕೆವಿಜಿ ಷಷ್ಟ್ಯಬ್ದ ರಂಗಮಂದಿರದಲ್ಲಿ ನಡೆಯಿತು. ಉದ್ಘಾಟನೆಯನ್ನು ನೆರವೇರಿಸಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌‌ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಮಾತನಾಡುತ್ತಾ, ಭಾಷೆಗಳು ಉಳಿಯಬೇಕಾದರೆ ಅದನ್ನು ಹೆಚ್ಚೆಚ್ಚು ಬಳಸಬೇಕು, ಮುಂದಿನ ತಲೆಮಾರಿಗೆ ಪಸರಿಸುವ ಕೆಲಸ ಆಗಬೇಕು. ಆಧುನೀಕರಣದಿಂದ ಭಾಷೆ ನಾಶ […]