ಡಾಲರ್ ವಿರುದ್ಧ ಭಾರತೀಯ ರೂಪಾಯಿ ಮೌಲ್ಯ ಗುರುವಾರ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ.
ಗುರುವಾರ ವ್ಯವಹಾರದ ಕೊನೆಯಲ್ಲಿ ಡಾಲರ್ ವಿರುದ್ಧದ ರೂಪಾಯಿ ಮೌಲ್ಯ 83.6500 ಆಗಿತ್ತು. ನಿನ್ನೆ ಬುಧವಾರ ವ್ಯವಹಾರದಲ್ಲಿ ಅದು 83.5825ರಲ್ಲಿ ನೆಲೆಗೊಂಡಿತ್ತು. ಜೂನ್ 20ರಂದು ಅದು ಸಾರ್ವಕಾಲಿಕ ಕನಿಷ್ಠ ಮಟ್ಟ 83.6650 ಇಳಿದಿತ್ತು.
ಡಾಲರ್ ಮತ್ತು ಅಮೆರಿಕ ಬಾಂಡ್ ಉತ್ಪತ್ತಿಯಲ್ಲಿ ವ್ಯಾಪಕ ಕುಸಿತ ಕಂಡು ಬಂದ ಹೊರತಾಗಿಯೂ ಭಾರತದ ಕರೆನ್ಸಿಯು ಅವುಗಳ ವಿರುದ್ಧ ಕುಸಿತ ಕಂಡಿದೆ. ಹಿಂದಿನ ಅವಧಿಯ ವ್ಯವಹಾರದಲ್ಲಿ ನಾಲ್ಕು ತಿಂಗಳ ಕನಿಷ್ಠ ಮಟ್ಟ 103.6ಕ್ಕೆ ಇಳಿದ ಬಳಿಕ ಡಾಲರ್ ಸೂಚ್ಯಾಂಕ ಕೊಂಚ ಏರಿಕೆಯಾಗಿದೆ.







