ಜನವಾಹಿನಿ NEWS ಸಿದ್ದಾಪುರ : ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ (ಎಸ್.ಎನ್.ಡಿ.ಪಿ). ಕೊಡಗು ಯೂನಿಯನ್, ಜಯಂತಿ ಆಚರಣಾ ಸಮಿತಿ, ಹಾಗೂ ಎಸ್.ಎನ್.ಡಿ.ಪಿ. ಶಾಖೆಗಳ ಸಂಯುಕ್ತ ಆಶ್ರಯದಲ್ಲಿ ಸಿದ್ದಾಪುರದಲ್ಲಿ 171ನೇ ಬ್ರಹ್ಮರ್ಷಿ ಶ್ರೀ ನಾರಾಯಣ ಗುರು ಜಯಂತಿಯನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಎಸ್ಎನ್ಡಿಪಿ ಕೊಡಗು ಯೂನಿಯನ್ ಜಿಲ್ಲಾಧ್ಯಕ್ಷ ವಿ.ಕೆ.ಲೋಕೇಶ್ ತಿಳಿಸಿದ್ದಾರೆ
ಎಸ್ ಎನ್ ಡಿ ಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದಲೂ ಶ್ರೀ ನಾರಾಯಣ ಗುರು ಜಯಂತಿಯನ್ನ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು 171ನೇ ಜಯಂತಿ ಆಚರಣೆಗೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಸೆಪ್ಟೆಂಬರ್ 7ರಂದು ಬೆಳಿಗ್ಗೆ 9:30ಕ್ಕೆ ಗುರು ಪೂಜಾ ನಡೆಯಲಿದ್ದು 10ಗಂಟೆಗೆ ಎಸ್ ಎನ್ ಡಿ ಪಿ ಮಾಜಿ ಕಾರ್ಯದರ್ಶಿ ಶಿವ ಪ್ರಸಾದ್ ಧ್ವಜಾರೋಹಣ ನೆರವೇರಿಸಲಿದ್ದಾರೆ.
10.30ಕ್ಕೆ ಮೆರವಣಿಗೆಯನ್ನ ಬಿ.ಎಸ್.ಎನ್.ಎಸ್.ಸಿ.ಸಿ
ಉಪಾಧ್ಯಕ್ಷ ಎಂ.ವಿ. ಸಜೀವ ಉದ್ಘಾಟನೆ ಮಾಡಲಿದ್ದಾರೆ.
ನಂತರ ಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ವಾದ್ಯ ಮೇಳಗಳೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಆರಂಭಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಯೊಂದಿಗೆ ಶ್ರೀ ನಾರಾಯಣ ಸಭಾಂಗಣ (ಸ್ವರ್ಣಮಾಲ ಕಲ್ಯಾಣ ಮಂಟಪ)ಕ್ಕೆ ಬರಲಾಗುವುದು.
ಮೆರವಣಿಗೆಯಲ್ಲಿ ಜಿಲ್ಲೆ ಹಾಗೂ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಳ್ಳಲಿದ್ದಾರೆ.
ಪೂರ್ವಾಹ್ನ 11.45 ಗಂಟೆಗೆ ಎಸ್ಎನ್ಡಿಪಿ ಕೊಡಗು ಯೂನಿಯನ್ ಕಾರ್ಯದರ್ಶಿ ಪ್ರೇಮಾನಂದ ಅವರ
ಸ್ವಾಗತ ನುಡಿಯೊಂದಿಗೆ ಅರಮೇರಿ ಕಳಂಚೇರಿ ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ ಎಸ್ಎನ್ಡಿಪಿ, ಕೊಡಗು ಯೂನಿಯನ್ ಜಿಲ್ಲಾಧ್ಯಕ್ಷ ವಿ ಕೆ ಲೋಕೇಶ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ, ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ರಾಜ್ಯ ಒಕ್ಕಲಿಗರ ಸಂಘ,ನಿರ್ದೆಶಕ ಹರಪಳ್ಳಿ ರವೀಂದ್ರ, ಆರಂಜ್ ಕೌಂಟಿ ರೆಸಾರ್ಟ್ಸ್ ಸಂಸ್ಥೆಯ ಚೇರ್ಮನ್ ಇಮ್ಯಾನುವಲ್ ಟಿ. ರಾಮಪುರಂ, ಹಿಂದು ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ. ವಿಜಯನ್, ಬಿಲ್ಲವ ಸಮಾಜ ಅಧ್ಯಕ್ಷ ಬಿ.ಆರ್. ಲಿಂಗಪ್ಪ,ಕೊಡವ ಕಲ್ಬರಲ್ ಅಸೋಸಿಯೇಷನ್ ಅಧ್ಯಕ್ಷ ಕುಕ್ಕೇರ ಉತ್ತಪ್ಪ, ಪ್ಯಾಡಿಂಗ್ಟನ್ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಟಿ.ಎಲ್. ಪ್ರವೀಣ್,ಲಿಟಲ್ ಕಾಲರ್ಸ್ ಅಕಾಡೆಮಿಯ ಪೂಜಾ ಸಜೇಶ್ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ
ಸಾಧಕರಿಗೆ ಸನ್ಮಾನ ::
2024-25ನೇ ಸಾಲಿನ ದ್ವಿತೀಯ ಪಿ.ಯು.ಸಿ. ಮತ್ತು ಎಸ್.ಎಸ್.ಎಲ್.ಸಿ.ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ಸಾಧಕರಿಗೆ
ಗೌರವ ಸಮರ್ಪಣೆ ನಡೆಯಲಿದೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಲಿದೆ ಎಂದು ಹೇಳಿದರು
ಎಸ್.ಎನ್.ಡಿ.ಪಿ ಕಾರ್ಯದರ್ಶಿ ಪ್ರೇಮಾನಂದ, ವನಿತಾ ಯೂನಿಯನ್ ಅಧ್ಯಕ್ಷೆ ರೀಶ ಸುರೇಂದ್ರನ್, ಆಚರಣೆ ಸಮಿತಿಯ ಅಧ್ಯಕ್ಷ ಎಂ.ಜಿ. ರಾಜು, ಕಾರ್ಯದರ್ಶಿ ರಜಿತ್ ಕುಮಾರ್, ಪ್ರಮುಖರಾದ ಗಿರೀಶ್ ಮಟ್ಟಂ, ಎಂ.ಎ.ಆನಂದ, ಪಾಪಯ್ಯ ಸುದ್ದಿಗೋಷ್ಠಿಯಲ್ಲಿದ್ದರು








