ಆ.೧ಕ್ಕೆ ಕನ್ನಡದ ಎಲ್ಟು ಮುತ್ತಾ ಚಿತ್ರ ಬಿಡುಗಡೆ

ಆ.೧ಕ್ಕೆ ಕನ್ನಡದ ಎಲ್ಟು ಮುತ್ತಾ ಚಿತ್ರ ಬಿಡುಗಡೆ ಮಡಿಕೇರಿ : ಹೈ೫ ಸ್ಟುಡಿಯೋಸ್ ಹಾಗೂ ಎಸಿಇ ೨೨ ಪ್ರೊಡಕ್ಷನ್ಸ್ ಸಂಸ್ಥೆಯಡಿ ನಿರ್ಮಾಣವಾಗಿರುವ ಕನ್ನಡದ ಎಲ್ಟು ಮುತ್ತಾ ಚಿತ್ರ ಆ.೧ಕ್ಕೆ ತೆರೆಕಾಣಲಿದೆ ಎಂದು ಚಿತ್ರದ ನಿರ್ಮಾಪಕ ಸತ್ಯ ಶ್ರೀನಿವಾಸನ್ ತಿಳಿಸಿದ್ದಾರೆ. ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲತಃ ಕೊಡಗಿನವರಾದ ರಾ.ಸೂರ್ಯ ನಿರ್ದೇಶನದ ಚಿತ್ರ ಪೂರ್ಣ ಪ್ರಮಾಣದಲ್ಲಿ ಕೊಡಗಿನ ಸೊಗಡನ್ನೇ ಇಟ್ಟುಕೊಂಡು ನಿರ್ಮಾಣವಾಗಿದೆ. ಕನ್ನಡದ ಮಟ್ಟಿಗೆ ಮೊದಲ ಪ್ರಯತ್ನ ಇದಾಗಿದ್ದು, ಸದ್ಯಕ್ಕೆ ಕನ್ನಡ ಭಾಷೆಯಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರಕ್ಕೆ ಪ್ರಸನ್ನ […]
ದುಬೈನಲ್ಲಿ 16 ಕೋಟಿ ಲಾಟರಿ ಗೆದ್ದ ಇಬ್ಬರು ಮಲಯಾಳಿಗಳು

ಮಿಲೇನಿಯಂ ಮಿಲಿಯನೇರ್ ಡ್ರಾದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಲ್ಲಿರುವ ಕೇರಳ ಮೂಲದ ಇಬ್ಬರಿಗೆ ಬುಧವಾರದಂದು 16 ಕೋಟಿ ರೂ ಬಹುಮಾನ ಬಂದಿದೆ. ಬಹುಮಾನ ಗೆದ್ದ ಮೊದಲ ಗುಂಪಿನಲ್ಲಿ ಮಲಯಾಳಿ ಅಬ್ದುಲ್ ಅಜೀಜ್ ಹೆಸರಿನಲ್ಲಿ ಖರೀದಿಸಿದ ಚೀಟಿಗೆ ಬಹುಮಾನ ಲಭಿಸಿದೆ. 38 ವರ್ಷದ ಅಬ್ದುಲ್ ಅಜೀಜ್ ಅವರು ಆಗಸ್ಟ್ 31 ರಂದು ಖರೀದಿಸಿದ ಟಿಕೆಟ್ ಸಂಖ್ಯೆ 3361 ನೊಂದಿಗೆ ಮಿಲೇನಿಯಂ ಮಿಲಿಯನೇರ್ ಸರಣಿ 472 ರಲ್ಲಿ ವಿಜೇತರಾದರು. ತನ್ನ ಸಹೋದರ ಮತ್ತು ಸ್ನೇಹಿತರೊಂದಿಗೆ ಅಜೀಜ್ ಬಹುಮಾನ ವಿಜೇತ […]
ಒಮಾನ್ ನಲ್ಲಿ ಭೀಕರ ಅಪಘಾತ; ಒಂದೇ ಕುಟುಂಬದ ನಾಲ್ವರು ಕನ್ನಡಿಗರು ದುರ್ಮರಣ

ಒಮಾನ್ ನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಳಗಾವಿ ಮೂಲದ ಒಂದೇ ಕುಟುಂಬದ ನಾಲ್ವರು ಕನ್ನಡಿಗರು ಸಜೀವ ದಹನವಾಗಿದ್ದಾರೆ. ಹೈಮಾ ಪ್ರದೇಶದಲ್ಲಿ ಕಾರಿಗೆ ಲಾರಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಜಯಾ ತಹಶಿಲ್ದಾರ, ಪೂಜಾ, ಪವನ್ ಕುಮಾರ, ಆದಿಶೇಷ ಮೃತರು ಎಂದು ಗುರುತಿಸಲಾಗಿದೆ ಕಾರ್ ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ನಾಲ್ವರು ಸಜೀವ ದಹನವಾಗಿದ್ದಾರೆ. ಮೃತರ ಶವಗಳನ್ನು ಭಾರತಕ್ಕೆ ತರಲು ಸಹಾಯ ಮಾಡುವಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ವಿದೇಶಾಂಗ […]
ಸೌದಿ ಅರೇಬಿಯಾದ ಮರುಭೂಮಿಯಲ್ಲಿ ಸಿಲುಕಿ ಅನ್ನ, ನೀರಿಲ್ಲದೆ ಭಾರತೀಯ ಸೇರಿ ಇಬ್ಬರು ಮೃತ್ಯು: ಆಘಾತಕಾರಿ ಘಟನೆ ವರದಿ

ಸೌದಿ ಅರೇಬಿಯಾದ ರುಬ್ ಅಲ್ ಖಲಿ ಮರುಭೂಮಿಯಲ್ಲಿ ತೆಲಂಗಾಣ ಮೂಲದ 27 ವರ್ಷದ ಯುವಕ ನಿರ್ಜಲೀಕರಣ ಮತ್ತು ಬಳಲಿಕೆಯಿಂದ ಸಾವನ್ನಪ್ಪಿದ್ದಾನೆ. ಸೌದಿ ಅರೇಬಿಯಾದಲ್ಲಿ ದೂರಸಂಪರ್ಕ ಕಂಪನಿಯೊಂದರಲ್ಲಿ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕರೀಂನಗರ ನಿವಾಸಿ ಮೊಹಮ್ಮದ್ ಶೆಹಜಾದ್ ಖಾನ್ ಮರುಭೂಮಿಯ ನಿರ್ಜನ ಮತ್ತು ಅಪಾಯಕಾರಿ ಖಾಲಿ ಕ್ವಾರ್ಟರ್ ಭಾಗದಲ್ಲಿ ಸಿಲುಕಿಕೊಂಡಿದ್ದರು. 650 ಕಿಲೋಮೀಟರ್ ಗಿಂತಲೂ ಹೆಚ್ಚು ವ್ಯಾಪಿಸಿರುವ ರುಬ್ ಅಲ್ ಖಲಿ ತನ್ನ ಕಠಿಣ ಪರಿಸ್ಥಿತಿಗಳಿಗೆ ಕುಖ್ಯಾತವಾಗಿದೆ ಮತ್ತು ಸೌದಿ ಅರೇಬಿಯಾದ ದಕ್ಷಿಣ ಪ್ರದೇಶಗಳು ಮತ್ತು ನೆರೆಯ […]
ಮಂಗಳೂರಿನ ಯುವಕ ಅಬುಧಾಬಿಯಲ್ಲಿ ಕಟ್ಟಡದಿಂದ ಬಿದ್ದು ಮೃತ್ಯು

ಕೊಣಾಜೆ ಗ್ರಾಮದ ನಡುಪದವಿನ ಯುವಕನೋರ್ವ ಅಬುಧಾಬಿಯಲ್ಲಿ ಕಟ್ಟಡದಿಂದ ಬಿದ್ದು ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ. ಮೃತಪಟ್ಟ ಯುವಕನನ್ನು ಉಮ್ಮರ್ ಎಂಬವರ ಪುತ್ರ ನೌಫಲ್(25) ಎಂದು ಗುರುತಿಸಲಾಗಿದೆ. ಅಬುಧಾಬಿಯಲ್ಲಿ ಎ.ಸಿ ಮೆಕ್ಯಾನಿಕ್ ಆಗಿ ಕೆಲಸಮಾಡುತ್ತಿದ್ದ ನೌಫಲ್ ಕಟ್ಟಡವೊಂದರಲ್ಲಿ ಕೆಲಸ ಮಾಡುವಾಗ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಸೌದಿ ಅರೇಬಿಯಾ; ಹವಾಂತರ ಸೃಷ್ಟಿಸಿದ ಮಳೆ; 9 ಮಂದಿ ಮೃತ್ಯು

ಜೆದ್ದಾ: ಸೌದಿ ಅರೇಬಿಯಾದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಹಕ್ಕೆ ಸಿಲುಕಿ 9 ಮಂದಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ನೈಋತ್ಯ ಪ್ರದೇಶದ ಜೀಝಾನ್ ನಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹದಲ್ಲಿ ಇಬ್ಬರು ಮಕ್ಕಳು ಮುಳುಗಿ ಸಾವನ್ನಪ್ಪಿದ್ದಾರೆ. ಜಸ್ಸಾನ್ ನ ಸಬಿಯಾ ಮತ್ತು ಅಬು ಅರಿಶ್ ಪ್ರದೇಶಗಳನ್ನು ಸಂಪರ್ಕಿಸುವ ಸೇತುವೆ ಭಾಗಶಃ ಕುಸಿದ ಪರಿಣಾಮ ದಂಪತಿ ಸಾವನ್ನಪ್ಪಿದ್ದಾರೆ. ಈಗೆ ಸೌದಿ ಅರೇಬಿಯಾದ ವಿವಿಧೆಡೆ ಇಂದು ಸುರಿದ ಭಾರೀ ಮಳೆಗೆ 9 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಕುವೈಟ್ ನಲ್ಲಿ ಭೀಕರ ಅಗ್ನಿ ಅವಘಡ; ಕೇರಳದ ದಂಪತಿ & ಇಬ್ಬರು ಮಕ್ಕಳು ಮೃತ್ಯು

ಕುವೈಟ್ ನ ಮನೆಯೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿ ಕೇರಳ ಮೂಲದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ. ಕೇರಳದ ಮ್ಯಾಥ್ಯೂ ಮುಲಕಲ್, ಅವರ ಪತ್ನಿ ಲಿನಿ ಅಬ್ರಹಾಂ ಮತ್ತು ಮಕ್ಕಳಾದ ಐಸಾಕ್ ಮತ್ತು ಐರಿನ್ ಅವಘಡದಲ್ಲಿ ಸಾವನ್ನಪ್ಪಿದ್ದಾರೆ. ಮ್ಯಾಥ್ಯೂ ಕುವೈತ್‌ನಲ್ಲಿ ಉದ್ಯೋಗದಲ್ಲಿದ್ದು, ಅಬ್ಬಾಸಿಯಾದಲ್ಲಿ ಕಳೆದ 15 ವರ್ಷದಿಂದ ಕುಟುಂಬದೊಂದಿಗೆ ನೆಲೆಸಿದ್ದರು. ಶುಕ್ರವಾರ ರಾತ್ರಿ ಮನೆಯಲ್ಲಿ ಎ.ಸಿ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದೆ. ಕೊಚ್ಚಿ ನೆಡುಂಬಸ್ಸರಿ ಮೂಲದವರಾದ ಮ್ಯಾಥ್ಯೂ ಮುಲಕಲ್ ಅವರು ತಾಯಿ ಹಾಗೂ […]