ಅಂತಾರಾಷ್ಟ್ರೀಯ ಮಟ್ಟದ ಬಾಸ್ಕೆಟ್ ಬಾಲ್ ಟೂರ್ನಮೆಂಟ್ : ಕೊಡಗಿನ ಆಟಗಾರರ ತಂಡಕ್ಕೆ ಮೂರು ಚಿನ್ನದ ಪದಕ
ವಿರಾಜಪೇಟೆ : ಕೇರಳದ ತಿರುವನಂತಪುರದಲ್ಲಿ ಸ್ಟೀಫನ್ ಜಾಕೋಬ್ ಕೋಶಿ ಅಂತಾರಾಷ್ಟ್ರೀಯ ಮಟ್ಟದ ಮಾಸ್ಟರ್ಸ್ ಬಾಸ್ಕೆಟ್ ಬಾಲ್ ಪಂದ್ಯಾಟವು ಅಲ್ಲಿನ ಗ್ರೀನ್ ಫೀಲ್ಡ್ ಸ್ಟೇಡಿಯಂ ನಲ್ಲಿ ಜರುಗಿತು. ಭಾರತೀಯ ಟೆಕ್ ಸಿಲ್ಕೋ ತಂಡವನ್ನು ಕೊಡಗಿನ ಹಿರಿಯ ಬಾಸ್ಕೆಟ್ ಬಾಲ್ ಆಟಗಾರರು ಪ್ರತಿನಿಧಿಸಿ ಮೂರು ಚಿನ್ನದ ಪದಕಗಳನ್ನು ಗಳಿಸುವುದರೊಂದಿಗೆ ಸಾಧನೆಯನ್ನು ಮೆರೆದಿರುತ್ತಾರೆ. 55 ವರ್ಷ ಮೇಲ್ಪಟ್ಟವರ ಪಂದ್ಯಾಟದಲ್ಲಿ ಒಂದು ಚಿನ್ನದ ಪದಕ, 60 ವರ್ಷ ಮೇಲ್ಪಟ್ಟವರ ಪಂದ್ಯಾಟದಲ್ಲಿ ಒಂದು ಚಿನ್ನದ ಪದಕ ಹಾಗೂ 65 ವರ್ಷ ಮೇಲ್ಪಟ್ಟ ಆಟಗಾರರ ಪಂದ್ಯಾವಳಿಯಲ್ಲಿ ಒಂದು ಚಿನ್ನದ ಪದಕಗಳನ್ನು ಪಡೆಯುದರೊಂದಿಗೆ ಜಿಲ್ಲಾ ತಂಡವು ಸಾಧನೆಯನ್ನು ಮಾಡಿದೆ. ತಂಡದಲ್ಲಿ ಒಟ್ಟು 16 ಜನರು ಕೊಡಗಿನ ಆಟಗಾರರು ಪಾಲ್ಗೊಂಡಿದ್ದರು.ಹಿರಿಯ ಅಂತಾರಾಷ್ಟ್ರೀಯ ಆಟಗಾರ್ತಿ ಡಾ. ಮಂಡೇಪಂಡ ಪುಷ್ಪ ಕುಟ್ಟಣ್ಣ, ಮತ್ತೋರ್ವ ಹಿರಿಯ ಅಂತಾರಾಷ್ಟ್ರೀಯ ಆಟಗಾರ್ತಿ ಕಾಡ್ಯಮಾಡ ದೇಚಮ್ಮ ಪೂಣಚ್ಚ, ಪಳ0ಗಂಡ ವಾಣಿ ಚೆಂಗಪ್ಪ, ಕೊಲ್ಲಿಮಾಡ ರಶ್ಮಿ ಅಯ್ಯಪ್ಪ, ಬಲ್ಯಮೀದೇರೀರ ಆಶಾ ಶಂಕರ್, ತಾತಂಡ ಜ್ಯೋತಿ ಪ್ರಕಾಶ್, ಐನಂಡ ಜಮುನಾ ಚಂಗಪ್ಪ, ಕೋಣೆರೀರ ಶಿಲ್ಪಾ ಪೆಮ್ಮಯ್ಯ, ಚೋವಂಡ ಜಮುನಾ ಸುರೇಶ್, ತೀತರಮಾಡ ಕಾವೇರಿ ಅಚ್ಚಯ್ಯ, ಬಾಕಿಲನ ವನಿತಾ ವಿಜಯಕುಮಾರ್, ಕೊದೆಂಗಡ ರೇಷ್ಮಾ ನಂಜಪ್ಪ, ಕಾಂಡೇರ ಜಲಜ ಗೋಪಾಲ್, ಮಾಳೇಟಿರ ರಶ್ಮಿ ಉತ್ತಪ್ಪ, ಕೊಂಪುಳಿರ ಪ್ರೀತ್ ಪಳಂಗಪ್ಪ, ಸರಿತಾ ಸುಕುಮಾರನ್ ರವರು ಪಾಲ್ಗೊಂಡಿದ್ದರು. ಕೊಡಗಿನ ಆಟಗಾರರ ಈ ಸಾಧನೆ ಪ್ರಶಂಸನೆಗೆ ಪಾತ್ರವಾಗಿದೆ.








