Breaking News :

ಅಕ್ರಮ ಗಾಂಜಾ ಸಾಗಾಟ ಇಬ್ಬರ ಬಂಧನ : 7ಕೆಜಿಗೂ ಅಧಿಕ ಗಾಂಜಾ ವಶ


ಅಕ್ರಮ ಗಾಂಜಾ ಸಾಗಾಟ ಇಬ್ಬರ ಬಂಧನ : 7ಕೆಜಿಗೂ ಅಧಿಕ ಗಾಂಜಾ ವಶ


ಮಡಿಕೇರಿ :  ಜಿಲ್ಲೆಯಿಂದ ಕೇರಳಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ವಿರಾಜಪೇಟೆ ನಗರ ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಇಬ್ಬರನ್ನು ಬಂಧಿಸಿದ್ದಾರೆ. ವಿರಾಜಪೇಟೆ ಠಾಣಾ ವ್ಯಾಪ್ತಿಗೆ ಒಳಪಡುವ ಆರ್ಜಿ ಗ್ರಾಮದಲ್ಲಿ ಗಾಂಜಾ ವಸ್ತುಗಳನ್ನು ಕೇರಳಕ್ಕೆ ಮಾರಾಟ ಮಾಡಲು ಯತ್ನಿಸಿದ ಹುಣಸೂರಿನ ವಿಜಯನಗರದ ಅನೀಸ್ ಅಹಮದ್( 45 )ಮತ್ತು ಹುಣಸೂರು ಪಟ್ಟಣದ ಸ್ಕೋರ್ ಬೀದಿ ನಿವಾಸಿ ಚೇತನ್ (40) ಬಂಧಿತಾರಾಗಿದ್ದು, ಬಂಧಿತರಿಂದ ಸ್ವಿಫ್ಟ್ ಕಾರು, 7 ಕೆಜಿ 872 ಗ್ರಾಂ ತೂಕದ (2,50,000) ಮೌಲ್ಯದ ಗಾಂಜಾ ಪದಾರ್ಥ ನಾಲ್ಕು ಗಾಂಜಾ ಪ್ಯಾಕೆಟ್ ಮತ್ತು ಒಂದು ಮೊಬೈಲ್ ಅನ್ನು ವಶ ಪಡಿಸಲಾಗಿದೆ.

Share this article

ಟಾಪ್ ನ್ಯೂಸ್

More News