Breaking News :

ಆದಿವಾಸಿ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಕಾಂಗ್ರೆಸ್ ಸರಕಾರದ ಕೊಡುಗೆ ಅಪಾರ : ಶಾಸಕ ಪೊನ್ನಣ್ಣ


ಆದಿವಾಸಿ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ಕಾಂಗ್ರೆಸ್ ಸರಕಾರದ ಕೊಡುಗೆ ಅಪಾರ : ಶಾಸಕ ಪೊನ್ನಣ್ಣ


ಮಡಿಕೇರಿ : ಅಂತರರಾಷ್ಟ್ರೀಯ ಆದಿವಾಸಿ ಬುಡಕಟ್ಟು ದಿನಾಚರಣೆಯ ಪ್ರಯುಕ್ತ, ಪೊನ್ನಂಪೇಟೆ ತಾಲೂಕಿನ ನಾಣಚಿ ಭಾಗಕ್ಕೆ ಭೇಟಿ ನೀಡಿದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಆದಿವಾಸಿ ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ಕಾಂಗ್ರೆಸ್ ಸರಕಾರ ನೀಡಿರುವ ಕೊಡುಗೆಗಳನ್ನು ನೆನಪಿಸಿದರು.

ಇದೇ ಸಂದರ್ಭ ಹಾಡಿಯ ನಿವಾಸಿಗಳು ನೀಡಿದ ಹಲವು ಬೇಡಿಕೆಗಳಿದ್ದ ಮನವಿಯನ್ನು ಸ್ವೀಕರಿಸಿ, ಎಲ್ಲಾ ಆದಿವಾಸಿ ಬುಡಕಟ್ಟು ಜನಾಂಗದ ಬಾಂಧವರಿಗೆ ಶುಭ ಹಾರೈಸಿದ ಶಾಸಕರು ಬಳಿಕ ಮಾತನಾಡಿ ಸಂವಿಧಾನ ಬದ್ಧವಾಗಿ ತಾವುಗಳು ನೀಡಿರುವ ಮನವಿಯನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ತಾನು ಪ್ರಯತ್ನಿಸಿ ಈಗಾಗಲೇ ಆದಿವಾಸಿ ಬುಡಕಟ್ಟು ಜನಾಂಗದವರಿಗೆ ಕಳೆದ ಎರಡು ವರ್ಷದಲ್ಲಿ ಕಲ್ಪಿಸಿದ ಹತ್ತಾರು ಸೌಲಭ್ಯಗಳ ಬಗ್ಗೆ ನೆನಪಿಸಿದರು. ಕಳೆದ ಎರಡು ವರ್ಷಗಳ ಅವಧಿಯಲ್ಲಿ 16ಕ್ಕೂ ಅಧಿಕ ಹಾಡಿಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿದನ್ನು ನೆನಪಿಸಿದ ಮಾನ್ಯ ಶಾಸಕರು, ಬಹುತೇಕ ಎಲ್ಲಾ ಆದಿವಾಸಿ-ಬುಡಕಟ್ಟು ಜನಾಂಗದವರು ವಾಸಿಸುವ ಕಡೆ ರಸ್ತೆಗಳನ್ನು, ಕುಡಿಯುವ ನೀರನ್ನು, ಹಕ್ಕು ಪತ್ರಗಳನ್ನು ಒದಗಿಸಿದ್ದನ್ನು ಸ್ಮರಿಸಿದರು. ಆದಿವಾಸಿ ಮಕ್ಕಳ ಅಭಿವೃದ್ಧಿಗಾಗಿ ಶಾಲೆಯನ್ನು ತೆರೆಯುವುದರೊಂದಿಗೆ, ಚಾಲ್ತಿಯಲ್ಲಿರುವ ಶಾಲೆಯ ಸೌಲಭ್ಯಗಳ ಉನ್ನತೀಕರಣ, ಮಕ್ಕಳಿಗೆ ಶಾಲಾ ಮೈದಾನ, ಕ್ರೀಡಾಪೋತ್ಸಹ ಈ ಹಿಂದೆ ಅಧಿಕಾರದಲ್ಲಿದ್ದ ಯಾರು ನೀಡದೆ ಇದ್ದು ತಾನು ಅಧಿಕಾರಕ್ಕೆ ಬಂದ ಬಳಿಕ ಎಲ್ಲಾ ಸವಲತ್ತುಗಳನ್ನು ನೀಡಿರುವುದನ್ನು ನೆನಪಿಸಿಕೊಳ್ಳುವಂತೆ ಮನವಿ ಮಾಡಿದರು. ಕೇಂದ್ರದಲ್ಲಿ ಯುಪಿಎ ಸರಕಾರ ಇದ್ದ ಸಂದರ್ಭದಲ್ಲಿ, ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ರವರು, ಆದಿವಾಸಿ-ಬುಡಕಟ್ಟು ಜನಾಂಗದವರ ಏಳಿಗೆಗಾಗಿ ರೂಪಿಸಿದ ಕಾನೂನನ್ನು ನೆನಪಿಸಿಕೊಂಡ ಮಾನ್ಯ ಶಾಸಕರು, ಇಂದು ಎಲ್ಲಾ ಆದಿವಾಸಿ-ಬುಡಕಟ್ಟು ಜನರ ಅಭಿವೃದ್ಧಿಗೆ ಅನುದಾನ ಒದಗಿಸಲು ಈ ಕಾನೂನೇ ಕಾರಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆ ಬಾಡಗ ವಲಯ ಅಧ್ಯಕ್ಷರಾದ ರವಿ, ಪಂಚಾಯಿತಿ ಸದಸ್ಯರಾದ ಬೋಪಣ್ಣ, ಕುಟ್ಟ ವಲಯ ಅಧ್ಯಕ್ಷರಾದ ರಾಮಕೃಷ್ಣ, ನಾಲ್ಕೇರಿ ವಲಯ ಅಧ್ಯಕ್ಷರಾದ ಕಟ್ಟಿ ಕಾರ್ಯಪ್ಪ, ಪಂಚಾಯಿತಿ ಅಧ್ಯಕ್ಷರು ಶ್ರೀಮಂಗಲ ವಲಯ ಅಧ್ಯಕ್ಷರಾದ ಪಲ್ವಿನ್ ಪೂಣಚ್ಚ, ಗೋಣಿಕೊಪ್ಪ ವಲಯ ಅಧ್ಯಕ್ಷರಾದ ಪ್ರಮೋದ್ ಗಣಪತಿ, ಅಪ್ಪಣ್ಣ, ಪಕ್ಷದ ಪ್ರಮುಖರು ಹರೀಶ್, ಬುಡಕಟ್ಟು ಜನಾಂಗದ ಅಧ್ಯಕ್ಷರು, ಸದಸ್ಯರು, ಹಾಡಿ ನಿವಾಸಿಗಳು ,ಐಟಿಡಿಪಿ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Share this article

ಟಾಪ್ ನ್ಯೂಸ್

More News