Breaking News :

ಆಧುನಿಕ ಭಾರತದ ಶಿಲ್ಪಿ ರಾಜೀವ್ ಗಾಂಧಿ : ತೆನ್ನಿರ ಮೈನಾ ಬಣ್ಣನೆ 

 

 


ಜನವಾಹಿನಿ NEWS ಮಡಿಕೇರಿ : ಮಾಜಿ ಪ್ರಧಾನಿ ಭಾರತ ರತ್ನ ರಾಜೀವ್ ಗಾಂಧಿಯವರು ಆಧುನಿಕ ಭವ್ಯ ಭಾರತದ ಶಿಲ್ಪಿ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಬಣ್ಣಿಸಿದ್ದಾರೆ.

ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ,ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗದ ಘಟಕಗಳ ಆಶ್ರಯದಲ್ಲಿ ನಡೆದ ದಿವಗಂತ ರಾಜೀವ್ ಗಾಂಧಿಯವರ 81 ನೇ ಹಾಗೂ ದಿವಂಗತ ದೇವರಾಜ್ ಅರಸು ರವರ 110 ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ‌ ಮಾತನಾಡಿದ ಅವರು ದೇಶದ ಅತ್ಯಂತ ಕಿರಿಯ ವಯಸ್ಸಿನ ಪ್ರಧಾನಿಯಾದ ರಾಜೀವ್ ಗಾಂಧಿ ಯವರು ತಮ್ಮ ದೂರದೃಷ್ಟಿಯ ಚಿಂತನೆಗಳನ್ನು ಸಾಕಾರಗೊಳಿಸಿ ಭಾರತ ದೇಶವನ್ನು ಅಭಿವೃದ್ಧಿ ಪತದತ್ತ ಕೊಂಡೊಯ್ದರು ಎಂದು ವಿವರಿಸಿದರು.

ಕರ್ನಾಟಕ ರಾಜ್ಯದ ಸುಧೀರ್ಘ ಅವಧಿಯ ಮುಖ್ಯ ಮಂತ್ರಿಗಳಾಗಿ ಸೇವೆ ಸಲ್ಲಿಸಿದ ದೇವರಾಜ್ ಅರಸು ರವರು ಸಮಾನತೆಯ ಹರಿಕಾರ ರಾಗಿ ತಮ್ಮ ಹೆಸರನ್ನು ಚಿರಸ್ಥಾಯಿಗೊಳಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್ ರವರು ಕಾಂಗ್ರೆಸ್ ಪಕ್ಷದ ಮಹಾನ್ ನಾಯಕರುಗಳಾದ ರಾಜೀವ್ ಗಾಂಧಿ ಮತ್ತು ದೇವರಾಜ್ ಅರಸು ರವರ ಸಾಧನೆಗಳನ್ನು ಪ್ರತಿಯೊಬ್ಬರಿಗೆ ತಿಳಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕು ಎಂದು ಕರೆ ನೀಡಿದರು.

ಮಡಿಕೇರಿ ತಾಲ್ಲೂಕು ಅಕ್ರಮ,ಸಕ್ರಮ ಸಮಿತಿಯ ಅಧ್ಯಕ್ಷರಾದ ನೆರವಂಡ ಉಮೇಶ್ ರವರು ಮಾತನಾಡಿ ದೇವರಾಜ್ ಅರಸು ರವರಿಗೆ ಸಮಾನವಾದ ಮತ್ತೊಬ್ಬ ಮುಖ್ಯಮಂತ್ರಿಯನ್ನು ಈ ರಾಜ್ಯ ಮತ್ತು ದೇಶದಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅವರ ಸಮಾಜವಾದಿ ಚಿಂತನೆಗಳು ಬಡವರು,ದುರ್ಬಲರಿಗೆ ವರದಾನವಾಯಿತು ಎಂದು ತಿಳಿಸಿದರು. ರಾಗದ್ವೇಷಗಳನ್ನು ಹೊಂದಿರದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರು ಅಟಲ್ ಬಿಹಾರಿ ವಾಜಪೇಯಿ ರವರ ಚಿಕಿತ್ಸೆಗೆ ನೆರವಾಗಿದ್ದ ಘಟನೆಯನ್ನು ಸ್ಮರಿಸಿದರು.

ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ ಮಾತನಾಡಿ ಕಾಂಗ್ರೆಸ್ ಪಕ್ಷದ ನೇತಾರರ ಬಗ್ಗೆ ಹೆಚ್ಚು ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಹಿಂದುಳಿದ ಘಟಕದ ಅಧ್ಯಕ್ಷರಾದ ಜಿ.ಸಿ.ಜಗದೀಶ್ ಮಾತನಾಡಿ ತಾವು ನಿರುದ್ಯೋಗಿ ಯಾಗಿದ್ದಾಗ ತಮ್ಮ ನೆರವಿಗೆ ರಾಜೀವ್ ಗಾಂಧಿಯವರು ಜಾರಿಗೊಳಿಸಿದ ರೋಜ್ ಗಾರ್ ಯೋಜನೆಯ

ಫಲಾನುಭವಿಯಾಗಿದ್ದನ್ನು ವಿವರಿಸಿದರು. ಸೇವಾ ದಳದ ಜಿಲ್ಲಾಧ್ಯಕ್ಷರಾದ ಕಾನೆ ಹಿತ್ಲು ಮೊಣ್ಣಪ್ಪ ನವರು ಕಾರ್ಯಕ್ರಮದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆಡಿಪಿ ಸದಸ್ಯರಾದ ಬಾಚಿಮಂಡ ಲವ ಚಿಣ್ಣಪ್ಪ,ನಗರ ಸಭಾ ಸದಸ್ಯರಾದ ಮಂಡಿರ ಸದಾ ಮುದ್ದಪ್ಪ,

ಯಾಕುಬ್,ಮುದ್ದುರಾಜ್,ಅನುಷ್ಠಾನ ಸಮಿತಿ ಸದಸ್ಯರಾದ ಪ್ರಭು ರೈ,ಕೆ.ಜಿ.ಪೀಟರ್, ಮಾಜಿ ಸೈನಿಕ ಘಟಕದ ಅಧ್ಯಕ್ಷರಾದ ಬೊಳ್ಳಿಯಂಡ ಗಣೇಶ್, ಎಸ್.ಸಿ.ಘಟಕದ ಅಧ್ಯಕ್ಷರಾದ ಜಯೇಂದ್ರ,ಆದಂ, ಯುವ ಕಾಂಗ್ರೆಸ್ ಅಧ್ಯಕ್ಷ ಕವನ್ ಕೊತ್ತೊಳಿ, ಪ್ರಮುಖರಾದ ರವಿಗೌಡ,ವಸಂತ್ ಭಟ್,ಶ್ರೀಮತಿ ಶಶಿ,ಸ್ವರ್ಣ ಲತಾ,ಮೂಡಾ ಸದಸ್ಯೆ ಮೀನಾಜ್ ಪ್ರವೀಣ್, ಮುನೀರ್ ಮಾಚರ್, ಅರ್ಜುನ್,ಮೈಕಲ್ ಮಾರ್ಷಲ್, ಹಬೀಬ್, ಸೈಮನ್,ಕಲೀಲ್ ಬಾಷ,ಅಯಾತ್, ರಿಯಾಸ್ಸುದ್ದೀನ್, ಪ್ರತಾಪ್ ಡಿ.ಎಂ.ನಜೀರ್ ಹುಸೇನ್, ಸುಬ್ರಮಣಿ, ಆಯುಬ್,ರಾಣಿ,ಉಷಾ ಸೇರಿದಂತೆ ಕಾರ್ಯಕರ್ತರು ಪ್ರಮುಖರು ಉಪಸ್ಥಿತರಿದ್ದರು.

ಜಿ.ಸಿ.ಜಗದೀಶ್ ಸ್ವಾಗತಿಸಿ ಕಾನೆಹಿತ್ಲು ಮೊಣ್ಣಪ್ಪ ವಂದಿಸಿದರು.

Share this article

ಟಾಪ್ ನ್ಯೂಸ್

More News