ಜನವಾಹಿನಿ NEWS ಮಡಿಕೇರಿ : 2025-26ನೇ ಸಾಲಿನಲ್ಲಿ ತಾಲ್ಲೂಕು ಮಟ್ಟದಲ್ಲಿ ವಿಜೇತರಾದ ಪುರುಷ ಹಾಗೂ ಮಹಿಳೆಯರಿಗೆ ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಸ್ಪರ್ಧೆಗಳನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಏರ್ಪಡಿಸಲಾಗಿದೆ.
ಆಗಸ್ಟ್, 30 ರಂದು ಕೊಡಗು ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟವು ಕೂಡಿಗೆ ಕ್ರೀಡಾ ಶಾಲೆ ಮೈದಾನದಲ್ಲಿ ನಡೆಯಲಿದ್ದು, ಅಥ್ಲೇಟಿಕ್ಸ್, ವಾಲಿಬಾಲ್, ಫುಟ್ಬಾಲ್(ಪುರುಷರಿಗೆ ಮಾತ್ರ), ಖೋಖೋ, ಕಬ್ಬಡಿ, ಬಾಸ್ಕೇಟ್ ಬಾಲ್, ಕುಸ್ತಿ, ಹಾಕಿ(ಮಹಿಳೆಯರಿಗೆ ಮಾತ್ರ), ಹ್ಯಾಂಡ್ಬಾಲ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್, ಯೋಗ, ಟೆನ್ನಿಸ್, ನೆಟ್ಬಾಲ್(ಆಯ್ಕೆ ಮಾತ್ರ), (ಮುಕ್ತ ಪಂದ್ಯಾವಳಿ)(ಪುರುಷ ಹಾಗೂ ಮಹಿಳೆಯರಿಗೆ).
ಜಿಲ್ಲಾ ಮಟ್ಟದ ಯೋಗಾಸನದಲ್ಲಿ ಕಡ್ಡಾಯವಾಗಿ ಮಾಡಬೇಕಾದ ಆಸನಗಳು ಪಾದ ಹಸ್ತಾಸನ, ಆಕರ್ಣ ಧನುರಾಸನ, ಊದ್ರ್ವಧನುರಾಸನ, ಅರ್ಥಮತ್ಸೇಂದ್ರಿಯ ಆಸನ.
ಆಗಸ್ಟ್, 30 ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಷಟಲ್ ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಈಜು(ಆಯ್ಕೆ ಮಾತ್ರ) (ಮುಕ್ತ ಪಂದ್ಯಾವಳಿ) (ಪುರುಷ ಹಾಗೂ ಮಹಿಳೆಯರಿಗೆ)
ಈಜು ಸ್ಪರ್ಧೆಯಲ್ಲಿ ಆಯ್ಕೆ ಮಾಡಲಾಗುವ ವಿಭಾಗಗಳು: ಆಗಸ್ಟ್, 30 ರಂದು (ಈಜು ಆಯ್ಕೆ ಮಾತ್ರ) ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಜು-100, 200, 400 ಮೀ ಫ್ರೀ ಸ್ಟೈಲ್, 100, 200-ಬ್ಯಾಕ್ ಸ್ಟ್ರೋಕ್, 100, 200 ಮೀ ಬ್ರೆಸ್ಟ್, 100 ಮೀ. ಬಟರ್ ಪ್ಲೈ, 200 ಮೀ ಇಂಡಿವಿಜುಯಲ್ ಮಿಡ್ಲೆ, 4*100 ಮೀ. ಫ್ರೀ ಸ್ಟೈಲ್ ರಿಲೇ(ಮುಕ್ತ ಪಂದ್ಯಾವಳಿ)(ಪುರುಷ ಹಾಗೂ ಮಹಿಳೆಯರಿಗೆ).
ಸೆಪ್ಟೆಂಬರ್, 04 ರಂದು ಪೊನ್ನಂಪೇಟೆ ಮಿನಿ ಕ್ರೀಡಾಂಗಣದಲ್ಲಿ ಹಾಕಿ (ಪುರುಷರಿಗೆ ಮಾತ್ರ) ಪಂದ್ಯಾಟ ನಡೆಯಲಿದೆ.
ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್ ಹಾಗೂ ಗುಂಪು ಕ್ರೀಡೆಯಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳು ಹಾಗೂ ಜಿಲ್ಲಾ ಮಟ್ಟದಲ್ಲಿರುವ ಕ್ರೀಡೆಗಳಲ್ಲಿ ನೇರವಾಗಿ ಭಾಗವಹಿಸುವ ಜಿಲ್ಲೆಯ ಆಸಕ್ತ ಪುರುಷ ಹಾಗೂ ಮಹಿಳಾ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ದೂ.ಸಂ. ಮಡಿಕೇರಿ ತಾಲ್ಲೂಕು ಮಹಾಬಲ 9980887499, ಮನು 9480032712, ಸೋಮವಾರಪೇಟೆ ಮತ್ತು ಕುಶಾಲನಗರ ತಾಲ್ಲೂಕು ವೆಂಕಟೇಶ್ 9844326007 ಹಾಗೂ ಮಂಜುನಾಥ್ 9342563014, ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲ್ಲೂಕು ಸುಬ್ಬಯ್ಯ 8197790350 ಹಾಗೂ ಗಣಪತಿ 8951287301 ನ್ನು ಸಂಪರ್ಕಿಸಬಹುದು.
ಜಿಲ್ಲಾ ಮಟ್ಟದಲ್ಲಿ ಕಡ್ಡಾಯವಾಗಿ ಪಾಲಿಸಬೇಕಾದ ಸೂಚನೆ: ತಾಲ್ಲೂಕು ಮಟ್ಟದಲ್ಲಿ ನಡೆದ ಅಥ್ಲೆಟಿಕ್ಸ್ (ವೈಯಕ್ತಿಕ ಸ್ಪರ್ಧೆ), ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನ ಹಾಗೂ ಗುಂಪು ಸ್ಪರ್ಧೆ ಕ್ರೀಡೆಗಳಲ್ಲಿ ಪ್ರಥಮ ಸ್ಥಾನ ಪಡೆದ ತಂಡದ ಕ್ರೀಡಾಪಟುಗಳಿಗೆ ಮಾತ್ರ ಅವಕಾಶ.
ಜಿಲ್ಲಾ ಮಟ್ಟಕ್ಕೆ ಭಾಗವಹಿಸುವ ಕ್ರೀಡಾಪಟುಗಳು ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ ಹಾಗೂ 2 ಭಾವಚಿತ್ರಗಳನ್ನು ಕಡ್ಟಾಯವಾಗಿ ತರಬೇಕು. ಬೆಳಗ್ಗೆ 9.30 ಗಂಟೆಯೊಳೆಗೆ ಕಡ್ಡಾಯವಾಗಿ ಸ್ಥಳದಲ್ಲಿ ನೋಂದಾಯಿಸಿಕೊಳ್ಳಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿ.ಟಿ.ವಿಸ್ಮಯಿ ತಿಳಿಸಿದ್ದಾರೆ.
ಆ.30 ರಂದು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ
Share this article
ಟಾಪ್ ನ್ಯೂಸ್
More News

ಬ್ರಹ್ಮ ಕುಂಡಿಕೆಯಲ್ಲಿ ತೀರ್ಥರೂಪಿಣಿಯಾಗಿ ಜನತೆಗೆ ಪ್ರತಕ್ಷಲಾದ ಕಾವೇರಿ ಮಾತೆ
October 17, 2025

ಕೊಡಗು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಜಿ.ಆರ್.ಪುಷ್ಪಲತಾ ನೇಮಕ
October 15, 2025

ಮೂರ್ನಾಡು : ಕೈಲ್ ಮುಹೂರ್ತ ಹಬ್ಬದ ಆಟೋಟ
October 11, 2025

ಪ್ರವೀಣ್ ಗೆ ಸಾಮಾಜಿಕ ಕಾರ್ಯಕರ್ತ ಪ್ರಶಸ್ತಿ – ಸಿದ್ದಾಪುರದಲ್ಲಿ ಸಂಭ್ರಮ
October 5, 2025

ಕರ್ನಾಟಕ ಕ್ರೀಡಾ ಪ್ರಾಧಿಕಾರದ ನೂತನ ಉಪಾಧ್ಯಕ್ಷರಾಗಿ ಅರುಣ್ ಮಾಚಯ್ಯ ಪದಗೃಹಣ
October 2, 2025



ಕಾಫಿ ಬೆಳೆಗಾರರಿಗೆ ಮಳೆ ಹಾನಿ ಪರಿಹಾರ ಒದಗಿಸಲು ಕ್ರಮ : ಸಚಿವ ಭೋಸರಾಜು
October 2, 2025