ಜನವಾಹಿನಿ News ಮಡಿಕೇರಿ : ಕೊಡಗು ಜಿಲ್ಲೆಯ ಚೆಟ್ಟಳ್ಳಿ ಸಮೀಪದ ಶ್ರೀಮಂಗಲ ಗ್ರಾಮದ ಭಗವತಿ ದೇವಾಲಯ ಬಳಿಯ ಕೆಚ್ಚೆಟ್ಟೀರ ಕುಟುಂಬದ ತೋಟದಲ್ಲಿ ಮಧ್ಯವಯಸ್ಸಿನ ಹುಲಿಯೊಂದು ಸಾವಿಗೀಡಾಗಿರುವ ಘಟನೆ ನಡೆದಿದೆ.
ತೋಟದಲ್ಲಿ ಕೆಲಸಕ್ಕೆ ತೆರಳಿದ್ದ ಕಾರ್ಮಿಕರು ಹುಲಿಯ ಮೃತದೇಹ ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಜಮೀನಿನಲ್ಲಿ ಕಾಡು ಹಂದಿಗಾಗಿ ಹಾಕಿದ್ದ ಉರುಳಿಗೆ ಸಿಲುಕಿದ್ದ ಹುಲಿ ಸಾವನ್ನಪ್ಪಿರುವುದ ಬೆಳಕಿಗೆ ಬಂದಿದೆ.



ಮಾಹಿತಿ : ಅಜಿತ್ ಚೆಟ್ಟಳ್ಳಿ







