Breaking News :

ಎ.ಕೆ.ಸುಬ್ಬಯ್ಯನವರ ಪುಣ್ಯಸ್ಮರಣೆ : ಶಾಸಕ ಪೊನ್ನಣ್ಣರವರಿಂದ ತಂದೆಗೆ ಗೌರವ ನಮನ

 

 


ಜನವಾಹಿನಿ NEWS ಪೊನ್ನಂಪೇಟೆ : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಶ್ರೀ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ರವರು, ತಮ್ಮ ತಂದೆಯವರಾದ ದಿವಂಗತ ಎ.ಕೆ ಸುಬ್ಬಯ್ಯರವರ 6ನೇ ಪುಣ್ಯ ಸ್ಮರಣೆ ದಿನದಂದು ಅವರಿಗೆ ಗೌರವ ನಮನ ಸಲ್ಲಿಸಿದರು.

ಪೊನ್ನಂಪೇಟೆ ತಾಲೂಕು ಹುದಿಕೇರಿಯ ಬೆಳ್ಳೂರಿನಲ್ಲಿರುವ ತಮ್ಮ ತಂದೆಯವರ ಸಮಾಧಿ ಬಳಿಗೆ ತೆರಳಿದ ಮಾನ್ಯ ಶಾಸಕರು, ಪುಷ್ಪ ನಮನ ಸಲ್ಲಿಸಿ ಪ್ರಾರ್ಥಿಸುವ ಮೂಲಕ ಪುಣ್ಯ ಸ್ಮರಣೆ ದಿನದಂದು ಗೌರವಾರ್ಪಣೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾನ್ಯ ಶಾಸಕರ ಹಿರಿಯ ಸಹೋದರರಾದ ಅಜ್ಜಿಕುಟ್ಟಿರ ನರೇನ್ ಎಸ್. ಕಾರ್ಯಪ್ಪ ದಂಪತಿಗಳು, ಶಾಸಕರ ತಾಯಿಯ ಹಿರಿಯ ಸಹೋದರಿ, ಅಜ್ಜಿಕುಟ್ಟಿರ ಕುಟುಂಬದ ಸದಸ್ಯರುಗಳು, ಶಾಸಕರ ಆಪ್ತರು, ಪಕ್ಷದ ಪ್ರಮುಖರು ಹಾಗು ಇತರರು ಉಪಸ್ಥಿತರಿದ್ದರು.

Share this article

ಟಾಪ್ ನ್ಯೂಸ್

More News