ಕಾಡಾನೆ ಕಾರ್ಯಚರಣೆ ಏಳಕ್ಕೂ ಅಧಿಕ ಆನೆಗಳು ಮರಳಿ ಅರಣ್ಯಕ್ಕೆ : ಉಳಿದ ಆನೆಗಳಿಗಾಗಿ ಮುಂದುವರೆಯಲಿರುವ ಕಾರ್ಯಾಚರಣೆ
ಕೊಡಗು : ಪಾಲಿಬೆಟ್ಟ ಸಮೀಪದ ಬಜೆಗೊಲ್ಲಿ, ಮೇಕೂರು, ಹೊಳಮಾಲ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯ ಅಟ್ಟುವ ಕಾರ್ಯಚರಣೆ ನಡೆಯಿತು.
ವಿರಾಜಪೇಟೆ ವಲಯ ಉಪ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಹಾಗೂ ಎಸಿಎಫ್ ಗೋಪಾಲ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಗಂಗಾಧರ್ ನೇತೃತ್ವದಲ್ಲಿ ಬಜೆಗೊಲ್ಲಿಯಿಂದ ಆರಂಭವಾದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಶಶಿಧರ್ ಸೇರಿದಂತೆ ತಿತಿಮತಿ ಅರಣ್ಯ ವಲಯದ ಚೆನ್ನಾಂಗಿ ಶಾಖೆಯ 20ಕ್ಕೂ ಅಧಿಕ ಸಿಬ್ಬಂಧಿಗಳು ಪಾಲ್ಗೊಂಡಿದ್ದರು.
ಕಾರ್ಯಾಚರಣೆಯ ಮೊದಲ ದಿನವಾದ ಶುಕ್ರವಾರ ಸುಮಾರು 7ಕ್ಕೂ ಅಧಿಕ ಆನೆಗಳನ್ನು ದೇವಮಾಚಿ ಮೀಸಲು ಅರಣ್ಯಕ್ಕೆ ಅಟ್ಟಿಸಲಾಗಿದ್ದು, ಉಳಿದ ಆನೆಗಳಿಗಾಗಿ ಶನಿವಾರವೂ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಅರಣ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
✒️ ಸುರೇಶ್ ಪೂಜಾರಿ ಗುಹ್ಯ








