ಕಾನೂನು ಅರಿವು ಕಾರ್ಯಕ್ರಮ
ಮಡಿಕೇರಿ : ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಡಾ.ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯ ಪಾಲಿಬೆಟ್ಟ ಇಲ್ಲಿ ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಕಾನೂನು ಅರಿವು ಮತ್ತು ಹದಿಹರೆಯದ ಮಕ್ಕಳ ಆರೋಗ್ಯ ಕುರಿತ ಕಾರ್ಯಕ್ರಮ ನಡೆಯಿತು.
ಪಾಲಿಬೆಟ್ಟದ ಆರಕ್ಷಕ ಉಪನಿರೀಕ್ಷಕರಾದ ಎಚ್.ಕೆ.ಮಂಜುನಾಥ್ ಅವರು ಪೋಕ್ಸೋ ಕಾಯಿದೆ, 112 ತುರ್ತು ಸಂಖ್ಯೆ, ಮಕ್ಕಳ ಸಹಾಯವಾಣಿ, ಮಾದಕ ಪದಾರ್ಥಗಳ ದುಷ್ಪರಿಣಾಮಗಳು, ಮೊಬೈಲ್ ಬಳಕೆಯ ರೀತಿ, ಸೈಬರ್ ಅಪರಾಧ, ಬಾಲ ಅಪರಾಧಗಳು, ಗುಡ್ ಟಚ್-ಬ್ಯಾಡ್ ಟಚ್ ಇವುಗಳ ಕುರಿತಂತೆ ಸವಿವರವಾಗಿ ಮಾಹಿತಿ ನೀಡಿದರು.
ಆರೋಗ್ಯ ಕಾರ್ಯಕರ್ತೆ ಪ್ರಮೀಳ ಅವರು ಮಾತನಾಡಿ ಹದಿಹರೆಯದ ಗರ್ಭಧರಿಸುವಿಕೆ, ಆರೋಗ್ಯದ ಪರಿಣಾಮ, ದೈಹಿಕ ಬದಲಾವಣೆಗಳು, ಆರೋಗ್ಯಕರ ಮನೆ ನಿಲಯದ ವಾತಾವರಣ, ವೈಯಕ್ತಿಕ ಸ್ವಚ್ಛತೆ ಇವುಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಆರಕ್ಷಕರಾದ ಸಜಿಲ್, ಆಶಾ ಕಾರ್ಯಕರ್ತೆ ಶೈಲ, ಮೇಲ್ವಿಚಾರಕರಾದ ಸುಮಯ್ಯ ಕೆ.ಎಂ., ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.









