Breaking News :

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಿದ್ದಾಪುರದಲ್ಲಿ ಪೊಲೀಸ್ ಪಥ ಸಂಚಲನ 

 


ಜನವಾಹಿನಿ News ಸಿದ್ದಾಪುರ : ಕಾನೂನು ಸುವ್ಯವಸ್ಥೆ ಕಾಪಾಡುವ ಮತ್ತು ಸಾರ್ವಜನಿಕರಲ್ಲಿ ಆತ್ಮ ವಿಶ್ವಾಸ ತುಂಬುವ ನಿಟ್ಟಿನಲ್ಲಿ ಜಿಲ್ಲೆಯ ಸಿದ್ದಾಪುರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪೊಲೀಸ್‌ ಇಲಾಖೆಯ ವತಿಯಿಂದ ಪಥ ಸಂಚಲನವನ್ನು ನಡೆಸಲಾಯಿತು.

ಸಂತ ಅನ್ನಮ್ಮ ಶಾಲೆಯಿಂದ – ಮೈಸೂರು ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ – ಮಾರ್ಕೆಟ್ ರಸ್ತೆ ಬಸ್ಸು ನಿಲ್ದಾಣ ಮುಖಾಂತರ ಪೊಲೀಸ್ ಠಾಣೆ ವರೆಗೆ ಪಥ ಸಂಚಲನ ನಡೆಸಿದ ಪೊಲೀಸರು, ನಾಗರಿಕರಿಗೆ ಜಾಗೃತಿ ಮೂಡಿಸುವುದರ ಜೊತೆಗೆ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲ ಎಂಬ ಸಂದೇಶವನ್ನು ಸಾರಿದರು.

ಡಿವೈಎಸ್ ಪಿ ಸೂರಜ್ ರವರ ನೇತೃತ್ವದಲ್ಲಿ, ನಡೆದ ಪಥ ಸಂಚಲನದಲ್ಲಿ ಸಿಪಿಐ ರಾಜು, ಜಿಲ್ಲಾ ಸಶಸ್ತ್ರ ಪಡೆಗಳ ಇನ್ಸ್ಪೆಕ್ಟರ್ ಆರ್.ಪಿ ಪ್ರದೀಪ್, ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಭಾಗಿಯಾಗಿದ್ದರು.

Share this article

ಟಾಪ್ ನ್ಯೂಸ್

More News