ಕುಸಿದು ಬಿದ್ದ ಕಾರ್ಮಿಕನ ಮನೆ : ಕಂದಮ್ಮನ ಕೈಗೆ ಗಂಭೀರ ಪೆಟ್ಟು : ಶಿಲ್ಪಿ ಎಸ್ಟೇಟ್ ನಲ್ಲಿ ಘಟನೆ
ಸಿದ್ದಾಪುರ : ಅತಿಯಾದ ಮಳೆಯಿಂದ ಕಾರ್ಮಿಕರು ವಾಸವಿದ್ದ ಮನೆಯೊಂದು ಕುಸಿದು ಬಿದ್ದಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಶಿಲ್ಪಿ ಎಸ್ಟೇಟ್ ನಲ್ಲಿ ನಡೆದ ಘಟನೆ.
ಘಟನೆಯಲ್ಲಿ ಅಸ್ಸಾಂ ಮೂಲದ ಕಾರ್ಮಿಕರ 4 ವರ್ಷದ ಬಾಲಕನ ಕೈಗೆ ಗಂಭೀರ ಪೆಟ್ಟಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತಕ್ಷಣ ಬಾಲಕನನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ ಎನ್ನಲಾಗಿದೆ.








