Breaking News :

ಕೃಷಿ ಬಳಕೆ ಯೂರಿಯಾ ಅಕ್ರಮ ದಾಸ್ತಾನು ಇದ್ದಲ್ಲಿ ಮಾಹಿತಿ ನೀಡಲು ಮನವಿ 


ಕೃಷಿ ಬಳಕೆ ಯೂರಿಯಾ ಅಕ್ರಮ ದಾಸ್ತಾನು ಇದ್ದಲ್ಲಿ ಮಾಹಿತಿ ನೀಡಲು ಮನವಿ


ಮಡಿಕೇರಿ : ರಿಯಾಯಿತಿ ದರದ ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು ಕೃಷಿಯೇತರ ಚಟುವಟಿಕೆಗಳಿಗೆ ಬಳಕೆ ಮಾಡದಂತೆ ತಡೆಯಲು ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಮತ್ತು ವೀರಾಜಪೇಟೆ ತಾಲ್ಲೂಕುಗಳ ಕೈಗಾರಿಕ ಪ್ರದೇಶಗಳಲ್ಲಿ ರಿಯಾಯಿತಿ ದರದ ಬೇವು ಲೇಪಿತ ಯೂರಿಯಾ ರಸಗೊಬ್ಬರ ಬಳಸುತ್ತಿರುವ ಕಾರ್ಖಾನೆ/ ಕೈಗಾರಿಕೆಗಳನ್ನು ಪತ್ತೆ ಹಚ್ಚಿ, ಬಳಸುತ್ತಿರುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955ರ ಅಡಿಯಲ್ಲಿ ಹಾಗೂ ರಸಗೊಬ್ಬರ (ನಿಯಂತ್ರಣ) ಆದೇಶ 1985ರ ಅನ್ವಯ ಸೂಕ್ತ ಕ್ರಮ ವಹಿಸಲು ಹಾಗೂ ಅಂತಹ ಕೈಗಾರಿಕೆಗಳ ಪರವಾನಿಗೆ ರದ್ದುಪಡಿಸಲು ಜಿಲ್ಲಾಧಿಕಾರಿ ಅವರು ಕೃಷಿ, ಕೈಗಾರಿಕೆ ಮತ್ತು ವಾಣಿಜ್ಯ, ತೋಟಗಾರಿಕೆ, ಕಾಫಿ ಮಂಡಳಿ, ಪೊಲೀಸ್ ಹಾಗೂ ಅರಣ್ಯ ಇಲಾಖೆಗಳನ್ನು ಒಳಗೊಂಡಂತೆ ತಾಲ್ಲೂಕುವಾರು 3 (ಮೂರು) ತಂಡಗಳನ್ನು ರಚಿಸಿ ಆದೇಶಿಸಿರುತ್ತಾರೆ.

ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ರಿಯಾಯಿತಿ ದರದ ಬೇವು ಲೇಪಿತ ಯೂರಿಯಾ ರಸಗೊಬ್ಬರವನ್ನು ಕೃಷಿಯೇತರ ಚಟುವಟಿಕೆಗಳಿಗೆ ಅಕ್ರಮವಾಗಿ ಬಳಕೆ ಮಾಡುತ್ತಿರುವುದು ಅಥವಾ ಅಕ್ರಮವಾಗಿ ದಾಸ್ತಾನು ಮಾರಾಟ ಮತ್ತು ಸಾಗಾಣಿಕೆ ಮಾಡುತ್ತಿರುವುದು ಕಂಡುಬಂದಲ್ಲಿ ದೂರವಾಣಿ (ಜಂಟಿ ಕೃಷಿ ನಿರ್ದೇಶಕರು , ಕೊಡಗು ಜಿಲ್ಲೆ: 8277931900, , ಉಪ ಕೃಷಿ ನಿರ್ದೇಶಕರು, ಮಡಿಕೇರಿ: 8277931901, ಸಹಾಯಕ ಕೃಷಿ ನಿರ್ದೇಕರು, ಮಡಿಕೇರಿ: 8277926969, ಸಹಾಯಕ ಕೃಷಿ ನಿರ್ದೇಕರು, ಸೋಮವಾರಪೇಟೆ: 8277931907, ಸಹಾಯಕ ಕೃಷಿ ನಿರ್ದೇಕರು, ವೀರಾಜಪೇಟೆ: 8277929456, ಹಾಗೂ ಸಹಾಯಕ ಕೃಷಿ ನಿರ್ದೇಶಕರು(ಜಾರಿದಳ), ಜ.ಕೃ.ನಿ. ಕಚೇರಿ ಮಡಿಕೇರಿ: 8277929492) ಮುಖಾಂತರ ಮಾಹಿತಿ ನೀಡುವಂತೆ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ಚಂದ್ರಶೇಖರ್ ಅವರು ತಿಳಿಸಿದ್ದಾರೆ.

Share this article

ಟಾಪ್ ನ್ಯೂಸ್

More News