ಕೊಡಗಿನಲ್ಲಿ ಮುಂದುವರೆದ ಕಾಡಾನೆ ದಾಳಿ ಪ್ರಕರಣ : ಸರ್ಕಾರ ಹಾಗೂ ಶಾಸಕರ ವಿರುದ್ಧ ಸುನೀಲ್ ಕುಮಾರ್ ಆಕ್ರೋಶ : ಬೃಹತ್ ಹೋರಾಟಕ್ಕೆ ಚಿಂತನೆ
ಸಿದ್ದಾಪುರ : ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಕಾರ್ಮಿಕರು ಬಲಿಯಾಗುತ್ತಿರುವುದರ ವಿರುದ್ಧ ತೀವ್ರ ಅಸಮಧಾನ ವ್ಯಕ್ತಪಡಿಸಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (CPI) ಜಿಲ್ಲಾ ಕಾರ್ಯದರ್ಶಿ ಹಾಗೂ ವಕೀಲರಾದ ಸುನೀಲ್ ಕುಮಾರ್ ಕುಮಾರ್ ಕಾಂಗ್ರೆಸ್ ಸರ್ಕಾರ ಹಾಗೂ ಸ್ಥಳೀಯ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಆಡಿಯೋ ಒಂದನ್ನು ಹಂಚಿಕೊಂಡಿರುವ ಅವರು ಬಿಜೆಪಿ ಸರಕಾರ ಇದ್ದಾಗಲೂ ಕಾಡಾನೆ ದಾಳಿ ಪ್ರಕರಣಗಳ ವಿರುದ್ಧ ಭಯವಿಲ್ಲದೆ ಹೋರಾಟ ಮಾಡುತ್ತಿದ್ದೆವು, ಆದರೆ ಬಿಜೆಪಿ ಅವರು ಮುಂದೆ ಇಂದ ಚೂರಿ ಹಾಕಿದರೆ ಈ ಕಾಂಗ್ರೆಸ್ ನವರು ನಮ್ಮನ್ನು ಬಳಸಿಕೊಂಡು ನಮ್ಮ ಬೆನ್ನಿಗೇ ಚೂರಿ ಹಾಕ್ತಾರೆ ಅದರಿಂದ ನಾವು ಪ್ಲಾನ್ ಮಾಡಿ ಹೋರಾಟ ಮಾಡಬೇಕಾಗುತ್ತದೆ. ನಮ್ಮ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವ ಇಲ್ಲ ಬ್ರೋಕರ್ ಪ್ರಭುತ್ವ ಇದೆ. ಅದಕ್ಕೊಂದು ಅಂತಿಮ ಹಾಕ್ತೇವೆ ಎಂಬುದಾಗಿರುವ ಆಡಿಯೋ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದೀಗ ಸಂಪೂರ್ಣ ವೈರಲ್ ಆಗಿದೆ.








