Breaking News :

ಕೊಡವಾಮೆರ ಆರ ಬೇರ ಕಾರ್ಯಕ್ರಮ

 


ಜನವಾಹಿನಿ NEWS ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕೊಡವ ಸಮಾಜ ಮೈಸೂರು ಇವರ ಸಹಯೋಗದಲ್ಲಿ ಇಂದು ಮೈಸೂರು ಕೊಡವ ಸಮಾಜದಲ್ಲಿ “ಕೊಡವಾಮೆರ ಆರ ಬೇರ” ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರಾದ ಎ.ಎಸ್.ಪೊನ್ನಣ್ಣ ಅವರು ಚಾಲನೆ ನೀಡಿದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ, ಕೊಡಗು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಮೈಸೂರು ಕೊಡವ ಸಮಾಜದ ಅಧ್ಯಕ್ಷರಾದ ಪೊಂಜಂಡ ಎ.ಗಣಪತಿ, ಮೈಸೂರು ಮಹಾ ನಗರಪಾಲಿಕೆ ಮಾಜಿ ಸದಸ್ಯರಾದ ಮಾಳೇಟಿರ ಸುಬ್ಬಯ್ಯ, ಅಕಾಡೆಮಿ ಸದಸ್ಯರು ಇದ್ದರು.

ಮಂಗಳೂರು ಬಲ್ಮಠ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕರಾದ ಡಾ.ಬೋಡುಕುಟ್ಟಡ ರಾಧಿಕ ಕುಟ್ಟಪ್ಪ ಅವರು “ನಾ ಪುಟ್ಟ್‍ನ ಮಣ್ಣ್” ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು.

ಕೊಡವ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನಾಟಕ ಪ್ರದರ್ಶನ ಗಮನ ಸೆಳೆಯಿತು.

Share this article

ಟಾಪ್ ನ್ಯೂಸ್

More News