Breaking News :

ಕೊಡವ ಸಮಾಜ ರುದ್ರಭೂಮಿ ರಸ್ತೆಗೆ  ಡಾ ಮಂತರ್ ಗೌಡ ರಿಂದ 10 ಲಕ್ಷ ರೂ ಅನುದಾನ

ಕೊಡವ ಸಮಾಜ ರುದ್ರಭೂಮಿ ರಸ್ತೆಗೆ  ಡಾ ಮಂತರ್ ಗೌಡ ರಿಂದ 10 ಲಕ್ಷ ರೂ ಅನುದಾನ

ಮಡಿಕೇರಿ : ಮಡಿಕೇರಿಯಲ್ಲಿರುವ ಕೊಡವ ಸಮಾಜದ ರುದ್ರಭೂಮಿಯ ರಸ್ತೆ ಅಭಿವೃದ್ದಿಗೆ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡ ರವರು ಹತ್ತು ಲಕ್ಷರೂಗಳನ್ನು ಮೀಸಲಿರಿಸಿದ್ದಾರೆ.

ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷರು ಮತ್ತು ನಿರ್ದೇಶಕರು ಸಲ್ಲಿಸಿದ ಕೋರಿಕೆಯನ್ನು ಪರಿಗಣಿಸಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನವನ್ನು ನೀಡಲಾಗಿದ್ದು ಕಾಂಕ್ರೀಟ್ ರಸ್ತೆಯನ್ನು‌ ನಿರ್ಮಿಸಲು ಮಡಿಕೇರಿ ನಗರ ಸಭೆಯ ಇಂಜಿನಿಯರ್ ಗಳು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ,ಮಡಿಕೇರಿ ಕೊಡವ ಸಮಾಜದ ನಿರ್ದೇಶಕರುಗಳಾದ ಮಂಡಿರ ಸದಾ ಮುದ್ದಪ್ಪ ಹಾಗೂ ಕಾಳಚಂಡ ಅಪ್ಪಣ್ಣ ನವರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿ ಅಂದಾಜು ಪಟ್ಟಿ ತಯಾರಿಸಿ ತಾಂತ್ರಿಕ ಅನುಮೋದನೆ ನೀಡಿದ್ದಾರೆ.

Share this article

ಟಾಪ್ ನ್ಯೂಸ್

More News