ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನೇ ಕೊಲೆ ಗೈದಿದ್ದ ಪತಿ : ಆರು ವರ್ಷಗಳ ಬಳಿಕ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್
ಮಡಿಕೇರಿ : ಕ್ಷುಲ್ಲಕ ಕಾರಣಕ್ಕೆ ಪತಿ ಮತ್ತು ಪತ್ನಿಯರ ನಡುವೆ ಕಲಹ ಏರ್ಪಟ್ಟು ಬಡಿಗೆಯಿಂದ ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಪತಿಗೆ ವಿರಾಜಪೇಟೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗೆ ಕಠೀಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪೊನ್ನಂಪೇಟೆ ತಾಲೂಕು ಮಾಯಮುಡಿ ಧನುಗಾಲ ಗ್ರಾಮದ ನಿವಾಸಿ ಮಾಚಿಮಾಡ ಸಿ.ದೇವಾನಂದ ಅವರ ತೋಟದ ಲೈನ್ ಮನೆಯಲ್ಲಿ ವಾಸವಿದ್ದ ಮೂಲತಃ ಮೈಸೂರು ಜಿಲ್ಲೆ ಹುಣುಸೂರು ತಾಲೂಕು ನಾಗಾಪುರ 5ನೇ ಬ್ಲಾಕ್ ನಿವಾಸಿ ಪೌತಿ ಬಸವ ಎಂಬುವವರ ಪುತ್ರ ಜೇನುಕುರುಬರ ಶಿವು ಆಲಿಯಾಸ್ ಪದ್ದು, ಪದ್ಮಕುಮಾರ್ (38) ವರ್ಷ ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಘಟನೆಯ ಸಾರ : ಪೊನ್ನಂಪೇಟೆ ತಾಲೂಕು ಮಾಯಮುಡಿ ಧನುಗಾಲ ಗ್ರಾಮದ ನಿವಾಸಿ ಮಾಚಿಮಾಡ ಸಿ.ದೇವಾನಂದ ಅವರ ಲೈನ್ ಮನೆಯಲ್ಲಿ ಜೇನು ಕುರುಬರ ಅರುಣ ಪತ್ನಿ ಸೀತಮ್ಮ, ಎರಡನೇ ಕೋಣೆಯಲ್ಲಿ ಆಶೋಕ ಮತ್ತು ಮೂರನೇ ಕೋಣೆಯಲ್ಲಿ ಶಿವು @ ಪದ್ದು ಮತ್ತು ರೂಪ ಮತ್ತು ಎರಡು ಮಕ್ಕಳು ವಾಸವಿದ್ದರು. ಶಿವು ಮತ್ತು ರೂಪ ದಂಪತಿಗಳು ಅರುಣ ದಂಪತಿಗಳ ನೆಂಟರಾಗಿದ್ದರು ಎನ್ನಲಾಗಿದೆ. ಇವರುಗಳು ಸನೀಹದ ಕಾಫಿ ತೋಟದಲ್ಲಿ ಕೆಲಸ ಮಾಡುತಿದ್ದರು. ದಿನಾಂಕ 12-10-2019 ರ ದಿನದಂದು ರಾತ್ರಿ ಸುಮಾರು 9ರ ಸಮಯದಲ್ಲಿ ಶಿವು ಊಟ ಬಡಿಸುವಂತೆ ಪತ್ನಿ ರೂಪಳಿಗೆ ಹೇಳಿದ್ದಾನೆ. ರೂಪಳು ಊಟ ಬಡಿಸಲು ಮುಂದಾಗಿದ್ದಾಳೆ. ಅಲ್ಪ ಸಮಯದಲ್ಲಿ ಶಿವು ಊಟದ ಬಗ್ಗೆ ಚಾಕಾರ ಎತ್ತಿದ್ದಾನೆ. ಇದರಿಂದ ಊಟದ ವಿಚಾರವಾಗಿ ಮಧ್ಯೆ ಇರ್ವರಿಗೂ ಮಾತಿನ ಚಕಾಮುಖಿ ನಡೆದಿದೆ. ಕುಪಿತನಾದ ಶಿವು ತೋಟದಲ್ಲಿ ಉಪಯೋಗಿಸುತಿದ್ದ ಗುದ್ದಲಿ ಕಾವಿನಿಂದ ರೂಪಳ ಮೇಲೆ ಹಲ್ಲೆ ಮಾಡಿದ್ದಾನೆ.
ಶರೀರದ ಕಾಲು ಕೈ ಸೇರಿದಂತೆ ತಲೆಯ ಭಾಗಗಕ್ಕೆ ಹಲ್ಲೆ ಮಾಡಿದ ಪರಿಣಾಮ ತಲೆ ಭಾಗದಲ್ಲಿ ಮಾರಣಾಂತಿಕ ಗಾಯಗಳಾಗಿ ರಕ್ತಶ್ರವವಾಗಿ ನೆಲಕ್ಕೆ ಕುಸಿದು ಬಿದ್ದಿದ್ದಾಳೆ ರೂಪ. ಕೃತ್ಯ ಎಸಗಿದ ನಂತರದಲ್ಲಿ ಎನು ಅರಿಯದ ರೀತಿಯಲ್ಲಿ ಶಿವು ನಿದ್ದೆಗೆ ಜಾರಿದ್ದಾನೆ. ಮುಂಜಾನೆ ಅಂದರೆ 13/10/2019 ರಂದು ಸನೀಹದ ಕೋಣೆಯಲ್ಲಿದ್ದ ಜೆ.ಕೆ. ಅರುಣ ಶಿವು ಮತ್ತು ರೂಪ ದಂಪತಿಗಳಿದ್ದ ಮನೆಗೆ ಅಗಮಿಸಿ ನೋಡಲಾಗಿ ರಕ್ತ ಮಡುವಿನಲ್ಲಿದ್ದ ರೂಪಳ ಮೃತದೇಹ ಕಂಡುಬಂದಿದೆ. ತಕ್ಷಣವೇ ಅರುಣ ಅನತಿ ದೂರದಲ್ಲಿದ್ದ ತೋಟದ ಮಾಲೀಕರಲ್ಲಿ ವಿಷಯ ತಿಳಿಸಿದ್ದಾನೆ. ತೋಟದ ಮಾಲೀಕರು ಲೈನ್ ಮನೆಗೆ ಆಗಮಿಸಿ ನಡೆದ ಕೃತ್ಯವನ್ನು ನೋಡಿ ಗೋಣಿಕೊಪ್ಪಲು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ತೋಟದ ಮಾಲೀಕರು ನೀಡಿದ ದೂರಿನ ಮೇರೆಗೆ ಗೊಣಿಕೊಪ್ಪಲು ಪೊಲೀಸು ಠಾಣೆಯಲ್ಲಿ ಶಿವು @ ಪದ್ದು ಪದ್ಮಕುಮಾರ ನ ಮೇಲೆ 302 ಐ.ಪಿ.ಸಿ ಕಾಯ್ದೆಯಂತೆ ಕೊಲೆ ಪ್ರಕರಣ ದಾಖಲಾಗುತ್ತದೆ. ಪ್ರಕರಣವನ್ನು ಕೈಗೆತ್ತಿಕೊಂಡ ಗೊಣಿಕೊಪ್ಪಲು ವೃತ್ತ ನಿರೀಕ್ಷಕರುಗಳಾದ ಸಿ.ಪಿ.ಐ. ದಿವಾಕರ್ ಮತ್ತು ಸಿ.ಪಿ.ಐ. ರಾಮರೆಡ್ಡಿ ಅವರು ತನಿಖೆ ಪ್ರಾರಂಭಿಸಿ 10/12/2019 ರಲ್ಲಿ ವಿರಾಜಪೇಟೆ 2 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸುತ್ತಾರೆ.
ಎಸ್.ಸಿ. ನಂ.5009/2020 ರಂತೆ ಪ್ರಕರಣದ ವಿಚಾರಣೆ ನಡೆಸಿದ ವಿರಾಜಪೇಟೆ 2 ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ಕೊಲೆ ಪ್ರಕರಣದಲ್ಲಿ ಕೃತ್ಯ ಎಸಗಿದ ಆರೋಪಿಯ ವಿರುದ್ದ ಕೊಲೆ ಆರೋಪವು ಸಾಭಿತಾದ ಹಿನ್ನಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಗೌ. ಎಸ್. ನಟರಾಜು ಅವರು ದಿನಾಂಕ 16-8-2025 ರಂದು ಅಪರಾಧಿ ಎಂದು ಪರಿಗಣಿಸಿ ತೀರ್ಪು ನೀಡಿದ್ದು ಕಲಂ 302 ಐ.ಪಿ.ಸಿ ಗೇ ಕಠೀಣ ಜೀವಾವಧಿ ಶಿಕ್ಷೆ ಹಾಗೂ 25,000 ರೂ. ದಂಡ ವಿಧಿಸಿದ್ದು ದಂಡ ಕಟ್ಟಲು ತಪ್ಪಿದಲ್ಲಿ ತಿಂಗಳ ಕಠೀಣ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕ ಯಾಸಿನ್ ಅಹಮ್ಮದ್ ಅವರು ವಾದ ಮಂಡಿಸಿರುತ್ತಾರೆ.







