ಜನವಾಹಿನಿ NEWS ಸೋಮವಾರಪೇಟೆ : ಗೂಡ್ಸ್ ವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಾಲು ಸಮೇತ ಸೋಮವಾರ ಪೇಟೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಅಲೆಕಟ್ಟೆ ಚೌಡ್ಲು ಗ್ರಾಮದ ನಿವಾಸಿ ರಮೀಜ್ ಬಂಧಿತ ಆರೋಪಿ.
ಹಾನಗಲ್ಲು ರಸ್ತೆಯಲ್ಲಿ ಟಾಟಾ ಏಸ್ ವಾಹನದಲ್ಲಿ ಗಾಂಜಾ ಇಟ್ಟುಕೊಂಡು ಮಾರಟಕ್ಕೆ ತಯಾರಿ ನಡೆಸಿದ್ದ ಸಂದರ್ಭ ಇನ್ಸಪೆಕ್ಟರ್ ಮುದ್ದು ಮಹಾದೇವ ನೇತೃತ್ವ ದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ 600 ಗ್ರಾಂ ಗಾಂಜಾ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದು , ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
 
								 
															 
															






