Breaking News :

ಗೋವಾದಲ್ಲಿ ವಿಶ್ವದ ಅತ್ಯಂತ ಎತ್ತರದ ಶ್ರೀ ರಾಮನ ಪ್ರತಿಮೆ ಅನಾವರಣ

 


ಜನವಾಹಿನಿ News ಗೋವಾ : ದಕ್ಷಿಣ ಗೋವಾದ ಶ್ರೀ ಸಂಸ್ಥಾನ ಗೋಕರ್ಣ ಜೀವೋತ್ತಮ ಮಠದಲ್ಲಿರುವ ವಿಶ್ವದ ಅತಿ ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸಿದರು. 77 ಅಡಿ ಎತ್ತರ ಹೊಂದಿರುವ ಈ ಭವ್ಯ ಮೂರ್ತಿ ದೇಶದ ಸಾಂಸ್ಕೃತಿಕ ಪರಂಪರೆ, ಭಕ್ತಿ ಮತ್ತು ಶಿಲ್ಪಕಲೆಯ ಅದ್ಭುತ ಸಂಯೋಗವಾಗಿ ಗೋವಾದ ಹೊಸ ಗುರುತಾಗಲಿದೆ.

ಈ ಮೂರ್ತಿಯನ್ನು ಖ್ಯಾತ ಶಿಲ್ಪಿ ರಾಮ್ ಸುತಾರ್ ಮತ್ತು ಅವರ ತಂಡ ನಿರ್ಮಿಸಿದ್ದಾರೆ. ಅಧಿಕ ಚರ್ಚೆಗೆ ಕಾರಣವಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ “ಏಕತಾ ಪ್ರತಿಮೆ”ಯನ್ನೂ ಇದೇ ಶಿಲ್ಪಿಗಳು ರೂಪಿಸಿದ್ದಾರೆ. ಶ್ರೀರಾಮನ ಭವ್ಯ ಮೂರ್ತಿ ತಾಮ್ರ, ಕಂಚು ಸೇರಿದಂತೆ ಉನ್ನತ ಗುಣಮಟ್ಟದ ಮಿಶ್ರಲೋಹಗಳಿಂದ ನಿರ್ಮಾಣಗೊಂಡಿದ್ದು, ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಬಳಸಿ ಸಮುದ್ರದ ಹವಾಮಾನಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, “ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ ಶ್ರೀರಾಮನ 77 ಅಡಿ ಎತ್ತರದ ಕಂಚಿನ ಮೂರ್ತಿ ಮಹತ್ತರ ಸಂಕೇತ. ಇದು ದೇಶದ ಯುವ ಪೀಳಿಗೆಗೂ ಪ್ರೇರಣೆ ನೀಡುತ್ತದೆ,” ಎಂದು ಹೇಳಿದರು. ಅವರು ಮಠದ ಅಧೀಶರಾದ ಶ್ರೀ ಮಠಾಧಿಪತಿಗಳಿಗೆ ಹಾಗೂ ಶಿಲ್ಪಿ ರಾಮ್ ಸುತಾರ್ ಅವರಿಗೆ ವಿಶೇಷವಾಗಿ ಧನ್ಯವಾದಗಳನ್ನು ಸಲ್ಲಿಸಿದರು.

ಭಾರತದ ಶಿಲ್ಪಕಲೆಯ ಹೊಸ ಅಧ್ಯಾಯವನ್ನೇ ಗೋವಾದ ಶ್ರೀರಾಮನ 77 ಅಡಿ ಎತ್ತರದ ಕಂಚಿನ ಮೂರ್ತಿ ಬರೆಯಲಿದೆ ಎಂಬುದು ನಿಸ್ಸಂಶಯ. ಭಾರತೀಯ ಸಂಸ್ಕೃತಿಯ ಸಾರವನ್ನು ಜಗತ್ತಿಗೆ ತೋರಿಸುವ ಮತ್ತೊಂದು ಹೆಮ್ಮೆಯ ಸಂಕೇತವಾಗಿದೆ.

Share this article

ಟಾಪ್ ನ್ಯೂಸ್

More News