ಮಡಿಕೇರಿ : ಮಡಿಕೇರಿ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಂ.ಜಿ.ಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ಸದಸ್ಯರ ಸಭೆ ನಡೆಯಿತು.
ಈ ಸಭೆಗೆ ಅನುಷ್ಠಾನ ಇಲಾಖೆಗಳಾದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಅಧಿಕಾರಿ, ಶಿಶು ಅಭಿವೃದ್ದಿ ಇಲಾಖಾ ಅಧಿಕಾರಿ, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಮತ್ತು ವ್ಯವಸ್ಥಾಪಕರು ಕೆ.ಎಸ್.ಆರ್.ಟಿ.ಸಿ ರವರು ಮತ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಸಮಿತಿ ಸದಸ್ಯರು ಹಾಜರಿದ್ದರು.
ಗೃಹಲಕ್ಷ್ಮಿ ಯೋಜನೆ: ಶಿಶು ಅಭಿವೃದ್ದಿ ಅಧಿಕಾರಿಯವರು ಮಾತನಾಡಿ ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು 31,811 ಪಡಿತರ ಚೀಟಿ ಇದ್ದು, ಗೃಹಲಕ್ಷ್ಮಿ ಯೋಜನೆಯಡಿ 31,489 ಫಲಾನುಭವಿಗಳು ನೋಂದಣಿಯಾಗಿದ್ದಾರೆ ಎಂದರು.
322 ಪಡಿತರ ಚೀಟಿ ನೋಂದಣಿಗೆ ಬಾಕಿ ಇದ್ದು, ಜೂನ್ ಮಾಹೆಗೆ 30,539 ಪಡಿತರ ಚೀಟಿ ಫಲಾನುಭವಿಗಳಿಗೆ ಶಿಶು ಅಭಿವೃದ್ದಿ ಅಧಿಕಾರಿ ಮಡಿಕೇರಿಯವರಿಂದ ನೇರವಾಗಿ ಡಿಬಿಟಿ ಮುಖಾಂತರ ಹಣ ಮಂಜೂರಾಗಿದೆ ಎಂದು ತಿಳಿಸಿದರು.
ಒಟ್ಟು ಹಣ ಪಾವತಿಯಾಗಲು ಬಾಕಿ ಇರುವ ಫಲಾನುಭವಿಗಳ ಸಂಖ್ಯೆ 13764, ಐ.ಟಿ/ಜಿ.ಎಸ್.ಟಿ ಪಾವತಿದಾರರೆಂದು 784 ಅರ್ಜಿಗಳು ತಿರಸ್ಕøತಗೊಂಡಿದ್ದು, NPCI, e-KYC ಮಾಡಿಸಲು ಬಾಕಿ ಉಳಿದಿರುವ ಫಲಾನುಭವಿಗಳ ಸಂಖ್ಯೆ 166, ಮರಣ ನೋಂದಣಿ ಮಾಡಿಸಿದ ಫಲಾನುಭವಿಗಳ ಸಂಖ್ಯೆ 231 ಹಾಗೂ ತಿಂಗಳ ಅಂತ್ಯಕ್ಕೆ ಸಿಡಿಪಿಒ ಲಾಗಿನ್ ನಲ್ಲಿ ಪ್ರಸ್ತುತ ಮಾಹೆಯಲ್ಲಿ ಸ್ವೀಕೃತಗೊಂಡು ಅಪ್ರೂವ್ ಮಾಡಲು ಅರ್ಜಿಗಳು ಉಳಿಕೆ ಇರುವುದಿಲ್ಲ ಹಾಗೂ ಐಟಿ, ಜಿಎಸ್‍ಟಿ ಪಾವತಿದಾರರು ಎಂದು ಬರುತ್ತಿರುವ ಸಮಸ್ಯೆಯನ್ನು ಹೆಡ್ ಆಫೀಸ್ ನಲ್ಲಿ ಸರಿಪಡಿಸಲಾಗುತ್ತದೆ ಹಾಗೂ ಗೃಹಲಕ್ಷ್ಮಿಗೆ ಸಂಬಂಧಿಸಿದಂತೆ ಅನುದಾನವು ತಾಲ್ಲೂಕು ಪಂಚಾಯತಿಗೆ ಸರ್ಕಾರದಿಂದ ಜಮೆ ಆಗಿ ,ತಾಲ್ಲೂಕು ಪಂಚಾಯತಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಅನುದಾನವನ್ನು ಜಮೆ ಮಾಡಿದ ನಂತರ ತಮ್ಮ ಇಲಾಖೆಯಿಂದ ಹಣದ ಕಂತು ಫಲಾನುಭವಿಗಳ ಖಾತೆ ಹಣವನ್ನು ಜಮೆ ಮಾಡಲಾಗುತ್ತದೆ ಜೂನ್ 2025ರ ಮಾಹೆಯ ಒಟ್ಟು 15,376 ಎಸ್‍ಸಿ.ಫಲಾನುಭವಿಗಳಿಗೆ ರೂ.3,07,52,000 ಹಾಗೂ 8233 ಎಸ್.ಟಿ ಫಲಾನುಭವಿಗಳಿಗೆ ರೂ.1,64,66,000 ಗಳನ್ನು ಡಿ.ಬಿ.ಟಿ ಲಾಗ್ ಇನ್ ಮೂಲಕ ಬ್ಯಾಂಕ್ ಮೋಡ್ ನಲ್ಲಿ ಧನಸಹಾಯ ಪಾವತಿಸಲು, ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಡಿಬಿಟಿ ಲಾಗ್ ಇನ್ ನಿಂದ ಬ್ಯಾಂಕ್ ಮೋಡ್ ಮೂಲಕ NPCI Success ಆದ ಒಟ್ಟು 14,986 ಎಸ್‍ಸಿ ಫಲಾನುಭವಿಗಳಿಗೆ ರೂ.2,99,72,000 ಗಳು ಹಾಗೂ 7908 ಎಸ್.ಟಿ ಫಲಾನುಭವಿಗಳಿಗೆ ರೂ.15,81,600 ಡಿ.ಬಿ.ಟಿ ಲಾಗ್ ಇನ್ ನಿಂದ ಜಂಟಿ ನಿಯಂತ್ರಕರು,ಲೆಕ್ಕ ಶಾಖೆ,ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಬೆಂಗಳೂರು ಇವರಿಗೆ ಅಪ್ರೂವ್ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಶಕ್ತಿ ಯೋಜನೆ: ಶಕ್ತಿ ಯೋಜನೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಒಟ್ಟು 1,25,53,142 ವಯಸ್ಕ ಮಹಿಳಾ ಪ್ರಯಾಣಿಕರು ಮತ್ತು 2,89,833 ಹೆಣ್ಣು ಮಕ್ಕಳು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿನಿಯರು ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿ ಈ ಯೋಜನೆ ಪಡೆದಿದ್ದಾರೆ. ಸರಾಸರಿ 15,816 ಪ್ರಯಾಣಿಕರು ಒಂದು ದಿನಕ್ಕೆ ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿರುತ್ತಾರೆ, ಮುಂದುವರೆದು ಒಟ್ಟು ಮೊತ್ತ 54,19,15,657 ಸಂಸ್ಥೆಗೆ ಆದಾಯ ಬಂದಿದೆ ಸರಾಸರಿ ಒಂದು ದಿನದ ಆದಾಯ ರೂ.6,67,384 ಆಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಯುವನಿಧಿ: ಇಲಾಖಾಧಿಕಾರಿಯವರು ಮಾತನಾಡಿ 2023-2024ರಲ್ಲಿ ಪದವಿ ಮತ್ತು ಡಿಪೆÇ್ಲೀಮಾ ಉತ್ತೀರ್ಣರಾಗಿ ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ/ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವವರು ಈ ಯೋಜನೆಗೆ ಅರ್ಹರಾಗಿದ್ದು, ಅಲ್ಲದೆ ಈ ಯೋಜನೆಯ ಪ್ರಯೋಜನ ಮುಂದುವರಿಸಬೇಕಾಗಿದ್ದಲ್ಲಿ ಮೂರು ತಿಂಗಳಿಗೊಮ್ಮೆ ಸ್ವಯಂ ಘೋಷಣೆ ಮಾಡಿಕೊಳ್ಳಬೇಕು. ಯುವನಿಧಿ ಯೋಜನೆಯಲ್ಲಿ ಜೂನ್ ಮಾಹೆವರೆಗೆ 440 ಜನ ನೋಂದಣಿಯಾಗಿದ್ದು ಜೂನ್ ಮಾಹೆವರೆಗೆ ಫಲಾನುಭವಿಗಳಿಗೆ ರೂ.92,50,500 ಹಣ ಬಿಡುಗಡೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಗೃಹಜ್ಯೋತಿ ಯೋಜನೆ: ಇಲಾಖಾಧಿಕಾರಿಯವರು ಮಾತನಾಡಿ ಮಡಿಕೇರಿ ತಾಲ್ಲೂಕಿನಲ್ಲಿ 51,856 ಅರ್ಹ ವಿದ್ಯುತ್ ಸ್ಥಾವರಗಳಿದ್ದು, 51494 ನೋಂದಣಿಗೊಂಡ ಅರ್ಜಿಗಳಾಗಿದ್ದು, ಬಾಕಿ ಇರುವ 362 ಬಾಕಿ ಇರುವ ಸ್ಥಾವರಗಳಿದ್ದು ಶೇ.99.30 ಶೇಕಡವಾರು ಪ್ರಗತಿಯಾಗಿದ್ದು, 145.65 ಲಕ್ಷ ಸಹಾಯಧನ ಬಂದಿರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಅನ್ನಭಾಗ್ಯ: ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಮಡಿಕೇರಿ ತಾಲ್ಲೂಕಿನಲ್ಲಿ ಒಟ್ಟು 38399 ಪಡಿತರ ಚೀಟಿ ಇದ್ದು 7940 ಎಎವೈ ಫಲಾನುಭವಿಗಳು, 22625 ಬಿ.ಪಿ.ಎಲ್ ಕಾರ್ಡ್ ಇದ್ದು 73241 ಫಲಾನುಭವಿಗಳು, 13779 ಎ ಪಿ ಎಲ್ ಕಾರ್ಡ್ ಇದ್ದು 39637 ಫಲಾನುಭವಿಗಳಿದ್ದು, ಮಡಿಕೇರಿ ತಾಲ್ಲೂಕಿನಲ್ಲಿ ಪತ್ತೆ ಹಚ್ಚಿರುವ ಅನರ್ಹ ಫಲಾನುಭವಿಗಳ ಸಂಖ್ಯೆ 401 ಆಗಿರುತ್ತದೆ.
ತಾಲ್ಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷರಾದ ಎಂ.ಜಿ.ಮೋಹನ್ ದಾಸ್ ಅವರು ಮಾತನಾಡಿ ಮಡಿಕೇರಿ ತಾಲ್ಲೂಕಿನಲ್ಲಿ 05 ಗ್ಯಾರಂಟಿ ಯೋಜನೆಗಳನ್ನು ಅನುμÁ್ಠನ ಗೊಳಿಸುವಲ್ಲಿ ಅನುμÁ್ಠನ ಇಲಾಖೆಗಳು ಉತ್ತಮ ಪ್ರಗತಿ ಸಾಧಿಸಿದ್ದು, ಮುಂದಿನ ದಿನಗಳಲ್ಲಿಯೂ ಸಹ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಅಧಿಕಾರಿಗಳು ಸರ್ಕಾರದ ಮಹಾತ್ವಾಕಾಂಕ್ಷಿ 05 ಗ್ಯಾರಂಟಿ ಯೋಜನೆಯನ್ನು ಎಲ್ಲಾ ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ಮಾಡಲು ಶ್ರಮಿಸಬೇಕು ಎಂದರು.
‘ಗ್ಯಾರಂಟಿ ಯೋಜನೆ ಮತ್ತಷ್ಟು ಪರಿಣಾಮಕಾರಿ ಅನುಷ್ಠಾನ ಸಂಬಂಧ ಗ್ರಾಮ ಪಂಚಾಯತಿ ಮಟ್ಟದಲ್ಲಿ ಫಲಾನುಭವಿಗಳ ಕುಂದುಕೊರತೆ ಸಭೆ ಮಾಡಬೇಕಿದೆ. ಮಡಿಕೇರಿ ತಾಲ್ಲೂಕಿನ ಹೊದ್ದೂರು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಸೆಪ್ಟೆಂಬರ್, 10 ರಂದು ಗ್ಯಾರಂಟಿ ಯೋಜನೆಗೆ ಸಂಬಂಧಿಸಿದಂತೆ ಕುಂದುಕೊರತೆ ಸಭೆ ಆಯೋಜಿಸುವುದಾಗಿ ಮಂದ್ರೀರ ಮೋಹನ್ ದಾಸ್ ಅವರು ಹೇಳಿದರು.’
ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಸಭೆಯಲ್ಲಿ 05 ಗ್ಯಾರಂಟಿ ಯೊಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಸೂಕ್ತ ಪರಿಹಾರವನ್ನು ಸೂಚಿಸುವಂತೆ ಸಭೆಯಲ್ಲಿ ತಿಳಿಸಿದರು.
ಸದಸ್ಯ ಕಾರ್ಯದರ್ಶಿಗಳು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಯವರು ಸಭೆಯಲ್ಲಿ ಹಾಜರಿದ್ದ ಸರ್ವರಿಗೂ ವಂದಿಸಿದರು.







