ಜನವಾಹಿನಿ News ಮಡಿಕೇರಿ : ಶಾಲೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮಗಳನ್ನು ನೋಡುತ್ತಾ ಕೇಳುತ್ತಾ ಕುಳಿತುಕೊಳ್ಳುವ ವಿದ್ಯಾರ್ಥಿಗಳು ತಾವೆ ಕಾರ್ಯಕ್ರಮ ಆಯೋಜಿಸಿ ವೇದಿಕೆ ಮೇಲೆ ಕುಳಿತು ನಿರೂಪಣೆ, ಸ್ವಾಗತ, ಭಾಷಣ ಮಾಡುವ ಮೂಲಕ ಹಾಡಿನೊಂದಿಗೆ ನೃತ್ಯ ಮಾಡಿ ನಾವು ಯಾರಿಗೂ ಕಮ್ಮಿ ಇಲ್ಲಾ ಎಂಬಂತೆ ಕಾರ್ಯಕ್ರಮಕ್ಕೆ ಬಂದ ಗಣ್ಯರು ಹಾಗೂ ಪೋಷಕರ ಗಮನ ಸೆಳೆದರು.
ವಿರಾಜಪೇಟೆ ತಾಲ್ಲೂಕಿನ ಚೆನ್ನಂಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚನ್ನಯ್ಯ ನಕೊಟೆ ಕ್ಲಸ್ಟರ್ ಮಟ್ಟದ ಪೋಷಕರು -ಶಿಕ್ಷಕರ ಮಹಾಸಭೆ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.
ಶಾಲೆಯ ವಿದ್ಯಾರ್ಥಿ ಸಂಜಯ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂತ್ರಿಮಂಡಳದ ಪ್ರಧಾನ ಮಂತ್ರಿ ತೇಜ ಮಾತನಾಡಿ, ವಿದ್ಯಾರ್ಥಿಗಳಾದ ನಾವು ಶಿಕ್ಷಕರುಗಳು ಕಲಿಸಿಕೊಟ್ಟ ಶಿಕ್ಷಣವನ್ನ ಕಲಿತು ಉನ್ನತ ಶಿಕ್ಷಣದ ಮೂಲಕ ಪ್ರತಿಭಾನ್ವಿತರಾಗಿ ಎಲ್ಲರಂತೆ ನಾವು ಮುಂದೆ ಬರಬೇಕಾಗಿದೆ ಗುರು ಹಿರಿಯರನ್ನು ಗೌರವಿಸುವ ಮೂಲಕ ಶಿಕ್ಷಕರುಗಳ ಮಾರ್ಗದರ್ಶನವನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದರು.
ಸಾಂಸ್ಕೃತಿಕ ಮಂತ್ರಿ ಅರ್ಪಿತ ಮಾತನಾಡಿ, ಶಿಕ್ಷಣದೊಂದಿಗೆ ಸಾಂಸ್ಕೃತಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬಂದಲ್ಲಿ ಪ್ರತಿಭಾನ್ವಿತರಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ಸ್ವಚ್ಛತಾ ಮಂತ್ರಿ ರಾಕೇಶ್ ಮಾತನಾಡಿ, ಪರಿಸರ ಸಂರಕ್ಷಣೆಯೊಂದಿಗೆ ಸ್ವಚ್ಛತೆಗೂ ಆದಿತ್ಯ ನೀಡಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕೆಂದರು.
ವಿದ್ಯಾರ್ಥಿ ನಾಯಕ ಆದೀಶ್ ಮಾತನಾಡಿ ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರುಗಳು ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ನಮ್ಮ ಭವಿಷ್ಯವನ್ನು ರೂಪಿಸಲು ಶಿಕ್ಷಕರುಗಳು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ ನಾವೆಲ್ಲರೂ ಒಗ್ಗಟ್ಟಿನೊಂದಿಗೆ ಶಿಕ್ಷಕರುಗಳ ಮಾರ್ಗದರ್ಶನವನ್ನು ಮೈಗೂಡಿಸಿಕೊಂಡು ಶಾಲೆಗೆ ಕೀರ್ತಿ ತರಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಜಯ್ ಶಾಲೆಯ ಶಿಕ್ಷಕರುಗಳು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲಿಸುವ ಮೂಲಕ ಪ್ರತಿಭಾನ್ವಿತರಾಗಿ ಮುಂದೆ ತರಲು ಹಲವಾರು ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳು ಶಿಕ್ಷಣದ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲು ತಪ್ಪದೇ ಶಾಲೆಗೆ ಹಾಜರಾಗಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭ ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರದಿದ್ದವರ ಗಮನ ಸೆಳೆಯಿತು.
ಸಮರೂಪ ಸಮಾರಂಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೆ ಎಲ್ ರುಕ್ಮಿಣಿ ಮಾತನಾಡಿ, ಸ್ವಚ್ಛ ಪರಿಸರದೊಂದಿಗೆ ಹಚ್ಚಸಿರಿನಿಂದ ಕೂಡಿರುವ ಚೆನ್ನಂಗಿ ಸರ್ಕಾರಿ ಶಾಲೆ ಮಾದರಿಯಾಗಿದೆ. ಮಕ್ಕಳಿಗೆ ಶಿಕ್ಷಣದೊಂದಿಗೆ ಆರೋಗ್ಯ, ಕ್ರೀಡೆ, ಪರಿಸರ, ಶುಚಿತ್ವ ಸೇರಿದಂತೆ ವೃತ್ತಿಪರ ಕೌಶಲ್ಯ ತರಬೇತಿಯನ್ನ ನೀಡುವುದರೊಂದಿಗೆ ದಿನಕ್ಕೊಂದು ಕಾರ್ಯಕ್ರಮದೊಂದಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದ ವಾತಾವರಣ ಕಂಡುಬಂದಿದ್ದು. ಶಿಕ್ಷಕರುಗಳ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದವರು
ಪೋಷಕರು, ಹಳೆ ವಿದ್ಯಾರ್ಥಿಗಳು ಇಂದಿನ ಮಕ್ಕಳ ಭವಿಷ್ಯವನ್ನು ರೂಪಿಸಲು ಹೆಚ್ಚಿನ ಸಹಕಾರ ನೀಡುತ್ತಿರುವುದರಿಂದ ಶಿಕ್ಷಣದೊಂದಿಗೆ ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗಲಿದೆ.
ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಹೊತ್ತು ನೀಡುವುದರ ಮೂಲಕ ಹಲವಾರು ಯೋಜನೆಗಳನ್ನು ನೀಡುತ್ತಿದ್ದು ಇದರ ಸದ್ಬಳಕೆ ಮಾಡಿಕೊಂಡು ಶಿಕ್ಷಣದ ಮೂಲಕ ಪ್ರತಿಭಾನ್ವಿತರಾಗಿ ಮುಂದೆ ಬರಬೇಕೆಂದು ಹೇಳಿದ ಅವರು ಮಕ್ಕಳೇ ಕಾರ್ಯಕ್ರಮವನ್ನು ರೂಪಿಸಿ ಮಾದರಿ ವಿದ್ಯಾರ್ಥಿಗಳಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಸಿದ್ದಪ್ಪ ಮಾತನಾಡಿ ಕಾಡಂಚಿನ ಗ್ರಾಮೀಣ ಶಾಲೆಯಾದರು ಮಕ್ಕಳ ಶಿಕ್ಷಣಕ್ಕೆ ಶಿಕ್ಷಕರು ಹೆಚ್ಚಿನ ಸಹಕಾರ ನೀಡುತ್ತಿದ್ದಾರೆ. ಈ ಹಿಂದೆ ಶಾಲೆಗೆ ಗೈರು ಆಗುತ್ತಿದ್ದ ಮಕ್ಕಳು ಇದೀಗ ತಪ್ಪದೇ ಶಾಲೆಗೆ ಬರುತ್ತಿದ್ದಾರೆ. 52 ಆದಿವಾಸಿ ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದು , ದಾನಿಗಳು ಹೆಚ್ಚಿನ ಸಹಕಾರ ನೀಡಬೇಕೆಂದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಕೆ ಕೆ ಸುಷಾ ಮಾತನಾಡಿ ಪೋಷಕರ ಸಹಕಾರದಿಂದ ವಿದ್ಯಾರ್ಥಿಗಳು ಶಾಲೆಗೆ ತಪ್ಪದೆ ಹಾಜರಾಗುತ್ತಿದ್ದು ಶಿಕ್ಷಣದೊಂದಿಗೆ ಎಲ್ಲಾ ಚಟುವಟಿಕೆಗಳಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ. ಇಲಾಖೆಯ ನಿರ್ದೇಶನದೊಂದಿಗೆ ದಿನಕ್ಕೊಂದು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದು ಮಕ್ಕಳಿಗೆ ಶೈಕ್ಷಣಿಕೆಗೆ ಪೂರಕವಾದ ಕಲಿಕೆಯೊಂದಿಗೆ ವೃತ್ತಿಪರ ಶಿಕ್ಷಣವನ್ನು ನೀಡಲಾಗುತ್ತಿದೆ. ಶಾಲೆಯ ಮತ್ತಷ್ಟು ಅಭಿವೃದ್ಧಿ ಕಾರ್ಯಗಳಿಗೆ ದಾನಿಗಳು ಕೈಜೋಡಿಸಬೇಕೆಂದರು.
ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕೆ ಬೇಬಿ, ಉಪಾಧ್ಯಕ್ಷೆ ಈಶ್ವರಿ, ಶಿಕ್ಷಕರುಗಳಾದ ಮಂಜುಳಾ, ಪ್ರತಿಮಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಪೋಷಕರು, ಮಕ್ಕಳು ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಇದೆ ಸಂದರ್ಭ ಇಬ್ಬರು ಶಿಕ್ಷಕಿಯರಾದ ಮಂಜುಳಾ, ಪ್ರತಿಮಾ ಅವರಿಗೆ ಸನ್ಮಾನ ಮಾಡಲಾಯಿತು.










