ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ವತಿಯಿಂದ ಗ್ರಾಹಕ ಮೇಳದ ಪ್ರಚಾರ ಬ್ಯಾನರ್ ಅನಾವರಣ
ಕುಶಾಲನಗರ : ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ವತಿಯಿಂದ ಸೆಪ್ಟೆಂಬರ್ 6 ರಂದು ಎಸ್.ಎಲ್.ಎನ್ ಟೈಮ್ ಸ್ಕ್ವೇರ್ ನಲ್ಲಿ ನಡೆಯುವ ಬೃಹತ್ ಗ್ರಾಹಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಪ್ರಚಾರ ಬ್ಯಾನರ್ ಅನಾವರಣವನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಸೋಮವಾರ ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರು ನೆರವೇರಿಸಿದರು.
ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಕೆ ಎಸ್ ನಾಗೇಶ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಇಂತಹ ಒಂದು ಬೃಹತ್ ಗ್ರಾಹಕ ಮೇಳ ಆಯೋಜಿಸುತ್ತಿದ್ದೇವೆ. ಮೇಳದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು, ಖ್ಯಾತ ಕಂಪೆನಿಗಳ ಕಾರುಗಳು, ಬೈಕ್ ಗಳು, ಹೋಮ್ ಅಪ್ಲೈನ್ಸ್, ವಿಧವಿಧವಾದ ತಿಂಡಿ ತಿನಿಸುಗಳು, ಡಿಸೈನರ್ ಬಟ್ಟೆಗಳು, ಮನೆಗೆ ಬೇಕಾದ ವಸ್ತುಗಳು ಹಾಗೂ ಇನ್ನಿತರ ಹಲವು ಸ್ಟಾಲ್ ಗಳು ಇರಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಮೇಳದಲ್ಲಿ ನೂತನ ಕಾರು, ಬೈಕ್ ಗಳ ಲಾಂಚ್ ಮಾಡುವ ಚಿಂತನೆಯಲ್ಲಿ ಕಂಪೆನಿಗಳು ಇದ್ದಾವೆ ಎಂದು ನಾಗೇಶ್ ತಿಳಿಸಿದರು.
ಅನಾವರಣ ಸಂಧರ್ಭದಲ್ಲಿ ವೃತ್ತ ನಿರೀಕ್ಷಕ ದಿನೇಶ್ ಕುಮಾರ್, ಪುರಸಭೆಯ ಮುಖ್ಯಾಧಿಕಾರಿ ಗಿರೀಶ್ ಮೇಳಕ್ಕೆ ಶುಭ ಹಾರೈಸಿದರು.
ಚೇಂಬರ್ ಉಪಾಧ್ಯಕ್ಷ ಎಂ.ಡಿ.ರಂಗಸ್ವಾಮಿ, ಕಾರ್ಯದರ್ಶಿ ಚಿತ್ರ ರಮೇಶ್, ಖಜಾಂಚಿ ಎನ್.ವಿ.ಬಾಬು, ನಿರ್ದೇಶಕರಾದ ಕೆ.ಎನ್.ದೇವರಾಜ್, ರಿಚರ್ಡ್ ಡಿಸೋಜ, ಹೆಚ್.ಎಂ.ಚಂದ್ರು, ಕೆ.ಜೆ.ಸತೀಶ್, ಪಿ.ಎಂ.ಮೋಹನ್, ಪುರಸಭಾ ಸದಸ್ಯರಾದ ಅಮೃತ್ ರಾಜ್, ಸುರೇಶ್ ಇತರರು ಉಪಸ್ಥಿತರಿದ್ದರು.

 
								 
															 
															






