Breaking News :

ಚೊಕಂಡಳ್ಳಿ ನಲ್ವತೋಕ್ಲು ಮೋಹಿದೀನ್ ಜುಮಾ ಮಸೀದಿಗೆ ಅನುದಾನ ನೀಡಲು ಸಂಸದರಿಗೆ ಮನವಿ

 

 


ಜನವಾಹಿನಿ News ಸಿದ್ದಾಪುರ : ಚೊಕಂಡಳ್ಳಿ ನಲ್ವತೋಕ್ಲು ಮೋಹಿದೀನ್ ಜುಮಾ ಮಸೀದಿಗೆ ಅನುದಾನ ಒದಗಿಸಲು ಸಂಸದ ಯದುವೀರ್ ಒಡೆಯರ್ ಅವರಿಗೆ ವಿರಾಜಪೇಟೆ ತಾಲೂಕು ಜೆಡಿಎಸ್ ಅಲ್ಪಾಸಖ್ಯಾತರ ಘಟಕ ಮನವಿ ಪತ್ರ ಸಲ್ಲಿಸಿದೆ

ಸಿದ್ದಾಪುರದ ಎಸ್ .ಎನ್. ಡಿ .ಪಿ (ಶ್ರೀ ನಾರಾಯಣ ಗುರು ಪರಿಪಾಲನ ಯೋಗಂ) ಸಭಾಂಗಣದಲ್ಲಿ ನಡೆದ ಎಸ್. ಎನ್. ಡಿ. ಪಿ .ವನಿತಾ ಮಹಿಳಾ ಸಮಾವೇಶ ಕಾರ್ಯಕ್ರಮಕ್ಕೆ ಆಗಮಿಸಿದ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸದರಾದ ಯದುವೀರ್ ಚಾಮರಾಜ ದತ್ತ ಒಡೆಯರ್ ರವರನ್ನು ವಿರಾಜಪೇಟೆ ತಾಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಮಜೀದ್ ಚೊಕಂಡಳ್ಳಿ ರವರ ನೇತೃತ್ವದಲ್ಲಿ, ನಲ್ವತೋಕ್ಲು ಮೋಹಿದೀನ್ ಜುಮಾ ಮಸೀದಿಯ ಕೆಲವು ಕಾಮಗಾರಿಗಳಿಗೆ ಸಂಸದರ ವಿಶೇಷ ನಿಧಿಯಿಂದ ಅನುದಾನವನ್ನು ನೀಡುವಂತೆ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಈ ಸಂದರ್ಭ ವಿರಾಜಪೇಟೆ ತಾಲೂಕು ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಮಜೀದ್ ಚೊಕ್ಕಂಡಳ್ಳಿ, ಕೊಡಗು ಜಿಲ್ಲಾ ಜೆಡಿಎಸ್ ಎಸ್ಸಿ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಜಯಮ್ಮ ಅಮ್ಮತಿ,

ಮಡಿಕೇರಿ ತಾಲೂಕು ಕ್ಷೇತ್ರದ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಅಶ್ರಫ್ ಹಾ ಕತ್ತೂರು, ಕುಶಾಲನಗರ ತಾಲೂಕು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶಿಯಾಬುದ್ದೀನ್ ವಿ.ಪಿ.ಎಸ್. ನೆಲ್ಯ ಹುದಿಕೇರಿ. ವಿರಾಜಪೇಟೆ ತಾಲೂಕು ಯುವ ಜನತಾದಳದ ಅಧ್ಯಕ್ಷರಾದ ಸೈಫುದ್ದೀನ್ ಜಾಮಿಯಾಲ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Share this article

ಟಾಪ್ ನ್ಯೂಸ್

More News