ಸಿದ್ದಾಪುರ : ನೆಲ್ಯಹುದಿಕೇರಿ ಪ್ರಗತಿಪರ ಸಂಘಟನೆಯ ವತಿಯಿಂದ ಛತ್ತೀಸ್ಗಡದಲ್ಲಿ ಕ್ರಿಶ್ಚಿಯನ್ ಕನ್ಯಾ ಸ್ತ್ರೀಗಳ ಮೇಲೆ ನಡೆದ ದೌರ್ಜನ್ಯ ವನ್ನು ಖಂಡಿಸಿ ಮತ್ತು ಇವರ ಮೇಲೆ ಹೂಡಿರುವ ಸುಳ್ಳು ಮೊಕದ್ದಮೆಯನ್ನು (F.I.R) ಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಛತ್ತಿಸ್ಗಢ ಬಿಜೆಪಿ ಸರಕಾರದ ವಿರುದ್ಧ ಪ್ರತಿಭಟನೆಯನ್ನು ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕಾರ್ಮಿಕ ಮುಖಂಡರಾದ ಪಿ .ಅರ್. ಭರತ್ ಹಾಗೂ ಕೆಪಿಸಿಸಿ ಸದಸ್ಯರಾದ ಜೋಸೆಫ್ ಶ್ಯಾಮ್ ಛತ್ತಿಸ್ಗಢ ಸರಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದರು.
ಪ್ರಮುಖರಾದ ಉದಯಕುಮಾರ್, ಮೋನಪ್ಪ, ಜೋಸ್, ಸೌಕತ್, ಜೋಯಿ, ವರ್ಗೀಸ್, ಯೂಸಫ್, ಹಬೀಬ್, ಚಂದ್ರ, ಜೈನಿ, ಶಿವರಾಮ, ಬೋಜಿ, ಲಲಿತಮ್ಮ, ರವಿ ಇನ್ನಿತರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.








