Breaking News :

ಜು.26 ರಂದು ದಸರಾ ಆಚರಣೆ ಪೂರ್ವಭಾವಿ ಸಭೆ ಹಾಗೂ ಪ್ರಥಮ ಪೂಜೆ

ಜು.26 ರಂದು ದಸರಾ ಆಚರಣೆ ಪೂರ್ವಭಾವಿ ಸಭೆ ಹಾಗೂ ಪ್ರಥಮ ಪೂಜೆ

ಮಡಿಕೇರಿ : ನಗರ ದಸರಾ ಸಮಿತಿಯ 2024ನೇ ಸಾಲಿನ ಜಮಾ ಖರ್ಚು ಮಂಡನೆ ಹಾಗೂ 2025 ರ ಅಕ್ಟೋಬರ್ ಮಾಹೆಯಲ್ಲಿ ಜರುಗುವ ಮಡಿಕೇರಿ ದಸರಾ ಆಚರಣೆಯ ಪೂರ್ವ ಸಿದ್ಧತೆ ಬಗ್ಗೆ ಜುಲೈ, 26 ರಂದು ಸಂಜೆ 4 ಗಂಟೆಗೆ ನಗರ ದಸರಾ ಸಮಿತಿಯ ಅಧ್ಯಕ್ಷರು ಹಾಗೂ ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಅವರ ಅಧ್ಯಕ್ಷತೆಯಲ್ಲಿ ನಗರದ ಹೋಟೆಲ್ ರಾಜ್ ದರ್ಶನ್ ಇಲ್ಲಿ ದಸರಾ ಆಚರಣೆಯ ಪೂರ್ವಭಾವಿ ಸಭೆ ನಡೆಯಲಿದೆ.
ಸಂಪ್ರದಾಯದಂತೆ ಜುಲೈ, 26 ರಂದು ಮಧ್ಯಾಹ್ನ 3 ಗಂಟೆಗೆ ಪೇಟೆ ಶ್ರೀರಾಮಮಂದಿರ ದೇವಾಲಯದಲ್ಲಿ ಪ್ರಥಮ ಪೂಜೆ ನಡೆಯಲಿದೆ ಎಂದು ನಗರಸಭೆ ಹಾಗೂ ನಗರ ದಸರಾ ಸಮಿತಿ ಅಧ್ಯಕ್ಷರಾದ ಪಿ.ಕಲಾವತಿ ಅವರು ತಿಳಿಸಿದ್ದಾರೆ.

Share this article

ಟಾಪ್ ನ್ಯೂಸ್

More News