ಜು.27ರಂದು ಸಿದ್ದಾಪುರದಲ್ಲಿ 5 ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ ಆಧಾರ್ ಶಿಬಿರ
ಮಡಿಕೇರಿ : 5 ವರ್ಷಗಳ ಮಕ್ಕಳಿಗೆ ಬಯೋಮೆಟ್ರಿಕ್ ಕಡ್ಡಾಯ ಯುಐಡಿಎಐ ಅಧಿಸೂಚನೆಯ ಪ್ರಕಾರ ಮಕ್ಕಳು ಐದು ವರ್ಷ ಪೂರ್ಣಗೊಳಿಸಿದ ನಂತರ ಆಧಾರ್‌ಗೆ ಬಯೋಮೆಟ್ರಿಕ್ ಮಾಹಿತಿಯನ್ನು ಸೇರಿಸುವುದು ಕಡ್ಡಾಯವನ್ನು ಮಾಡಲಾಗಿದೆ. ನೀವು ನಿಮ್ಮ ಮಗುವಿಗೆ ಏಳು ವರ್ಷದೊಳಗೆ ಅದನ್ನು ನವೀಕರಿಸದಿದ್ದರೆ, ಆಧಾರ್ ಸ್ಥಗಿತಗೊಳುವುದು ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ. ದಯವಿಟ್ಟು ಪೋಷಕರು 5 ವರ್ಷ ಮೇಲ್ಪಟ್ಟ ತಮ್ಮ ಮಕ್ಕಳ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳತಕ್ಕದು.
ಈ ಹಿನ್ನೆಲೆ ಸಿದ್ದಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮುಂಬರುವ ಭಾನುವಾರ ( ಜುಲೈ 27ರಂದು ) ಆಧಾರ್ ಶಿಬಿರವನ್ನು ಏರ್ಪಡಿಸಲಾಗಿದ್ದು, ಸಿದ್ದಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಲಾಗಿದೆ.
ಲಭ್ಯವಿರುವ ಸೇವೆಗಳು ::
1. 5 ವರ್ಷಕ್ಕಿಂತ ಮೇಲ್ಪಟ್ಟ ಮತ್ತು 15 ವರ್ಷಕ್ಕಿಂತ ಮೇಲ್ಪಟ್ಟ ಆಧಾರ್ ಬಯೋಮೆಟ್ರಿಕ್ ಕಡ್ಡಾಯ ನವೀಕರಣ
2. ಬೆರಳಚ್ಚು
3. ದಾಖಲೆಯೊಂದಿಗೆ ಹೆಸರು ತಿದ್ದುಪಡಿ (ಪ್ಯಾನ್ ಕಾರ್ಡ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಜನನ ಪ್ರಮಾಣಪತ್ರ)
4. ಜನನ ದಿನಾಂಕ ತಿದ್ದುಪಡಿ (ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಜನನ ಪ್ರಮಾಣಪತ್ರ, ಪಾಸ್‌ಪೋರ್ಟ್)
5. ಫೋಟೋ ಬದಲಾವಣೆ ಬೇಕಾದರೆ ಬಯೋಮೆಟ್ರಿಕ್ ನವೀಕರಣ








