Breaking News :

ಜು.27 ರಂದು ವಿರಾಜಪೇಟೆಯಲ್ಲಿ ಶೌರ್ಯ ಪ್ರಶಸ್ತಿ ವಿಜೇತರಿಗೆ ಸನ್ಮಾನ

ಜು.27 ರಂದು ವಿರಾಜಪೇಟೆಯಲ್ಲಿ ಶೌರ್ಯ ಪ್ರಶಸ್ತಿ ವಿಜೇತರಿಗೆ ಸನ್ಮಾನ

ಮಡಿಕೇರಿ  : ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ 2024-25ನೇ ಸಾಲಿನ 4ನೇ ವಾರ್ಷಿಕ ಮಹಾಸಭೆ ಮತ್ತು ಶೌರ್ಯ ಪ್ರಶಸ್ತಿ ವಿಜೇತರಿಗೆ ಸನ್ಮಾನ ಸಮಾರಂಭ ಜು.27ರಂದು ವಿರಾಜಪೇಟೆಯಲ್ಲಿ ನಡೆಯಲಿದೆ.

ಈ ಕುರಿತು ನಗರದದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೊಟ್ಟುಕತ್ತಿರ ಪಿ.ಸೋಮಣ್ಣ , ವಿರಾಜಪೇಟೆಯ ಕಾವೇರಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಬೆಳಿಗ್ಗೆ 10.30 ಗಂಟೆಗೆ ಮಹಾ ಸಭೆ ನಡೆಯಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲೆಯ ಶೌರ್ಯ ಪ್ರಶಸ್ತಿ (ಗ್ಯಾಲಂಟ್ರಿ ಅವಾರ್ಡ್)ಗೆ ಭಾಜನರಾಗಿರುವ ಮಹಾವೀರ ಚಕ್ರ ಪುರಸ್ಕೃತ ಪುಟ್ಟಿಚಂಡ ಗಣಪತಿ, ವೀರಚಕ್ರ ಮೇ.ಜ.ಕುಪ್ಪಂಡ ನಂಜಪ್ಪ, ಶೌರ್ಯ ಚಕ್ರ ಚಂಬಂಡ ತಿಮ್ಮಣ್ಣ, ಸೇನಾ ಮೆಡಲ್ ಲೆ.ಜ.ಬಿ.ಎನ್.ಬಿಂ.ಪ್ರಸಾದ್, ಸೇನಾ ಮೆಡಲ್ ಪುರಸ್ಕೃತರಾದ ಕುಟ್ಟಂಡ ಲವ, ಮೇಚಂಡ ಚಿಟ್ಟಿಯಪ್ಪ, ಬೊಳ್ಳೆರ ರೋಶನ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದೆಂದರು.
ಇದೇ ಸಂದರ್ಭ ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮಾಜಿ ಸೈನಿಕರ ಮಕ್ಕಳನ್ನು ಗೌರವಿಸಲಾಗುವುದೆಂದರು.
ಸಭೆಯಲ್ಲಿ ಸದಸ್ಯತ್ವ ನೋಂದಣಿ ನಡೆಯಲಿದ್ದು, ಮಾಜಿ ಸೈನಿಕರು ತಮ್ಮ ಭಾವಚಿತ್ರ, ಸೈನಿಕ ಬೋರ್ಡ್‍ನ ಗುರುತಿನ ಚೀಟಿಯ ಪ್ರತಿಯೊಡನೆ ಹಾಜರಾಗುವಂತೆ ಕೊಟ್ಟುಕತ್ತಿರ ಪಿ.ಸೋಮಣ್ಣ ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಎಸ್.ಸುಧೀರ್ ಮಾತನಾಡಿ, ಮಹಾಸಭೆಯಲ್ಲಿ ಸೋಮವಾರಪೇಟೆ ಇಓ ಆಗಿರುವ ಮಾಜಿ ಸೈನಿಕರಾದ ಪರಮೇಶ್ ಕುಮಾರ್, ಪಿಡಿಓ ಸಂಘದ ಅಧ್ಯಕ್ಷರು ಹಾಗೂ ಮಾಜಿ ಯೋಧರಾದ ಮಣಿ ಅವರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆಂದರು.
ಸಭೆಯ ಸಂದರ್ಭ ಮಾಜಿ ಸೈನಿಕರು ಪಿಂಚಣಿಗೆ ಸಂಬಂಧಿಸಿದಂತೆ, ಬ್ಯಾಂಕ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ಎದುರಿಸುತ್ತಿರುವ ಸಮಸ್ಯೆಗಳ ಬಗೆಹರಿಕೆಗಾಗಿ ಎಸ್‍ಬಿಐ ಬ್ಯಾಂಕ್ ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ತೀವ್ರ ಖಂಡನೆ :: ಕೆಲ ದಿನಗಳ ಹಿಂದೆ ಪೊನ್ನಂಪೇಟೆ ಸಮೀಪದ ಬೆಸಗೂರಿನಲ್ಲಿ ಹಾಲಿ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಧರೊಬ್ಬರ ತಾಯಿ ಬಾಗು ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಇದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.
ಸಂಘದ ಸಂಚಾಲಕರಾದ ನಾಟೋಳಂಡ ಸೋಮಯ್ಯ, ಕರ್ತಂಡ ಚಂದನ, ಪಿ.ಎಸ್.ವಾಸು ಹಾಗೂ ವಿಜಯ್ ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

Share this article

ಟಾಪ್ ನ್ಯೂಸ್

More News