Breaking News :

ಡಿ.23ರಿಂದ ಕಟ್ಟೆಮಾಡು ಮಹಾಮೃತ್ಯುಂಜಯ ಮಹದೇಶ್ವರ ಕ್ಷೇತ್ರದ ಜಾತ್ರಾ ಮಹೋತ್ಸವ


ಜನವಾಹಿನಿ News ಮಡಿಕೇರಿ : ಕಟ್ಟೆಮಾಡು ಗ್ರಾಮದಲ್ಲಿರುವ ಮಹಾಮೃತ್ಯುಂಜಯ ಮಹದೇಶ್ವರ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಡಿ.೨೩ರಿಂದ ೨೮ರವರೆಗೆ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಕಟ್ಟೆಮನೆ ಶಶಿ ಜನಾರ್ಧನ ತಿಳಿಸಿದರು.

ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೬ ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ. ಈ ಸಂದರ್ಭ ಹೋಮಹವನಗಳು ಸೂಸೂತ್ರವಾಗಿ ನಡೆಯಲು ಕೆಲವು ಕಟ್ಟುಪಾಡುಗಳಲ್ಲಿ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ದೇವಸ್ಥಾನ ಗರ್ಭಗುಡಿ ಮತ್ತು ಒಳಭಾಗದಲ್ಲಿ ತಂತ್ರಿಗಳು ಮತ್ತು ಅರ್ಚಕರನ್ನು ಹೊರತು ಪಡಿಸಿದಂತೆ ಯಾರಿಗೂ ಪ್ರವೇಶವಿಲ್ಲ. ಆದರೆ, ದಿನನಿತ್ಯ ಪೂಜೆಯ ನಂತರ ಶುದ್ಧಗೊಳಿಸಲು ಮೂವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ, ಪ್ರತಿಯೊಬ್ಬರಿಗೂ ಮುಖ್ಯ ಧ್ವಾರದೊಳಗೆ ಎಲ್ಲರಿಗೂ ಪ್ರವೇಶವಿದೆ. ಆ ನಂತರದ ಧ್ವಾರದಿಂದ ಯಾರಿಗೂ ಪ್ರವೇಶವಿಲ್ಲ. ಮುಖ್ಯ ಧ್ವಾರದೊಳಗಿನಿಂದಲೇ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ, ಭಕ್ತಾದಿಗಳಿಗೆ ಎಲ್‌ಇಡಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಕಾರ್ಯದರ್ಶಿ ತೋರೆರ ಕಾಶಿ ಕಾರ್ಯಪ್ಪ ಮಾತನಾಡಿ, ಡಿ.೨೩ರಂದು ಬೆಳಗ್ಗೆ ೮ ಗಂಟೆಗೆ ಗಣಪತಿ ಹೋಮ, ೯.೩೦ ಗಂಟೆಗೆ ಬ್ರಹ್ಮರಾಕ್ಷಸನಿಗೆ ನೈವೇದ್ಯ ಸಮರ್ಪಣೆ, ೧೦ ಗಂಟೆಗೆ ದುರ್ಗಾಪೂಜೆ, ೧೨ ಗಂಟೆಗೆ ಮಹಾಪೂಜೆ ಇತ್ಯಾದಿ ನಡೆಯಲಿದೆ. ಡಿ.೨೪ರಂದು ಬೆಳಗ್ಗೆ ೬.೩೦ ಗಂಟೆಗೆ ನೈರ್ಮಾಲ್ಯ ಬಲಿ, ೧೨ ಗಂಟೆಗೆ ಧ್ವಜಸ್ಥಂಭ ಪೂಜೆ, ಸಂಜೆ ೬.೩೦ ಗಂಟೆಗೆ ಭೂತಬಲಿ, ೮ ಗಂಟೆಗೆ ಮಹಾಪೂಜೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಡಿ.೨೫ ಮತ್ತು ೨೬ರಂದು ಬೆಳಗ್ಗೆ ೬.೩೦ ನೈರ್ಮಾಲ್ಯ ಬಲಿ, ೧೨ ಗಂಟೆಗೆ ಧ್ವಜಸ್ಥಂಭ ಪೂಜೆ ಮಹಾಪೂಜೆ ನಡೆಯಲಿದೆ. ಡಿ.೨೭ರಂದು ಬೆಳಗ್ಗೆ ೭.೩೦ ಗಂಟೆಗೆ ಕವಾಟ ಪೂಜೆ, ೧೦.೩೦ ಗಂಟೆಗೆ ತೈಲಾಭ್ಯಂಜನ, ಮಧ್ಯಾಹ್ನ ೨.೩೦ ಗಂಟೆಗೆ ದೇವರು ಜಳಕಕ್ಕೆ ಹೊರಡುವುದು, ಸಂಜೆ ೬ ಗಂಟೆಗೆ ದೇವರ ನೃತ್ಯಬಲಿ, ನಡೆ ಬಂಡಾರ, ೭.೩೦ ಗಂಟೆಗೆ ಧ್ವಜಾರೋಹಣ, ೮.೩೦ ಗಂಟೆಗೆ ಮಹಾಪೂಜೆ ನಂತರ ಅನ್ನ ಸಂತರ್ಪಣೆ ನೆರವೇರಲಿದೆ. ಡಿ.೨೮ರಂದು ೧೦.೩೦ ಗಂಟೆಗೆ ನವಕ ಕಲಶ ಪೂಜೆ, ಅಭಿಷೇಕ, ಪಂಚಾಮೃತ ಅಭಿಷೇಕ, ೧೨.೧೫ಕ್ಕೆ ಮಹಾಪೂಜೆ ನಡೆಯಲಿದೆ. ಎಂದು ತಿಳಿಸಿದರು.

ದೇವಾಲಯ ಆಡಳಿತ ಮಂಡಳಿ ಸದಸ್ಯರಾದ ನಂದೇಟಿರ ಗಣಪತಿ, ಎ.ಮಹೇಶ್, ಮರಾಠಿ ದೇವಪ್ಪ, ಬಿ.ಎಸ್.ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿದ್ದರು.

 

 

 

Share this article

ಟಾಪ್ ನ್ಯೂಸ್

More News