ತರಬೇತಿ ಮುಗಿಸಿ ಸ್ವಗ್ರಾಮಕ್ಕೆ ಆಗಮಿಸಿದ ಯೋಧನ ಊರಲ್ಲಿ ಹಬ್ಬದ ವಾತಾವರಣ
ಕುಶಾಲನಗರ : ಭಾರತಾಂಬೆಯ ಸೇವೆ ಸಲ್ಲಿಸಲು ಸೈನಿಕನಾಗಿ ಪ್ಯಾರಾ ಕಮಾಂಡೋ PARA COMMANDO (SPECIAL FORCE) ಗೆ ಆಯ್ಕೆಯಾಗಿ ತರಬೇತಿ ಮುಗಿಸಿ ಸ್ವಗ್ರಾಮಕ್ಕೆ ಆಗಮಿಸಿದ ಪಿರಿಯಾಪಟ್ಟಣ ತಾಲೂಕಿನ ಚೆನ್ನನಹಳ್ಳಿ ಕೊಪ್ಪಲು ಗ್ರಾಮದ ಯೋಧ ಪ್ರಮೋದ್.ಸಿ.ಎಸ್ ಅವರಿಗೆ ಕುಟುಂಬದವರು ಮತ್ತು ಸ್ನೇಹಿತರು ವಿಶೇಷವಾಗಿ ಸ್ವಾಗತಿಸಿದರು, ದೇಶದ ಹೆಮ್ಮೆಯ ಮಗನಿಗೆ ಪ್ರೀತಿಯಿಂದ ಹಾರೈಸಿದ ಸ್ನೇಹಿತರ ಬಳಗವು ಗ್ರಾಮಸ್ಥರಿಗೆ ಭೋಜನ ವ್ಯವಸ್ಥೆ ಮಾಡುವ ಮೂಲಕ ಯೋಧನಿಗೆ ಶುಭಕೋರಿದರು








