Breaking News :

ತೋಟಂ ಕೊಚ್ಚಿ ಕಾಲೋನಿಯಲ್ಲಿ ಮನೆಗೋಡೆ ಕುಸಿದು ಹಾನಿ

 


ಜನವಾಹಿನಿ NEWS ಮಡಿಕೇರಿ : ಕಳೆದೆರಡು ದಿನಗಳಿಂದ ಸುರಿದ ಗಾಳಿ ಮಳೆಗೆ ಗಡಿ ಗ್ರಾಮ ಕರಿಕೆಯ ತೋಟಂ ಕೊಚ್ಚಿ ಕಾಲೋನಿ ನಿವಾಸಿ ಬೆಳ್ಳಚ್ಚಿ ಎಂಬುವವರ ಮನೆ ಮೇಲ್ಚಾವಣಿ ಬಿದ್ದು ಅಡಿಗೆ ಕೋಣೆ ಸಂಪೂರ್ಣ ಹಾನಿಯಾಗಿದೆ.

ಮಕ್ಕಳು ಸೇರಿದಂತೆ ಏಳು ಮಂದಿ ವಾಸವಿದ್ದು , ಎಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ. ಬಡತನದಲ್ಲಿರುವ ತಮ್ಮ ಮನೆ ದುರಸ್ತಿ ಪಡಿಸುವಂತೆ ಒತ್ತಾಯಿಸಿ ಪಂಚಾಯಿತಿಗೆ ಹಲವು ಬಾರಿ ಮನವಿ ಸಲ್ಲಿಸಿದರು ಮನೆ ಮಂಜೂರು ಮಾಡಲಿಲ್ಲ ಎಂದು ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.

ಕರಿಕೆ ಹೆಲ್ಪ್ ಲೈನ್ ಸಂಸ್ಥಾಪಕ ಶಿವಗಿರಿ ರಾಜೇಶ್ ತನ್ನ ಸ್ವಂತ ಖರ್ಚಿನಲ್ಲಿ ಈ ಬಡ ಕುಟುಂಬಕ್ಕೆ ಊಟದ ವ್ಯವಸ್ಥೆ ಮಾಡಿದ್ದಾರೆ.

Share this article

ಟಾಪ್ ನ್ಯೂಸ್

More News