Breaking News :

ತೋಳುರುಶೆಟ್ಟಳ್ಳಿಯಲ್ಲಿ ಅದ್ದೂರಿ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವ 

 


ಜನವಾಹಿನಿ NEWS ಸೋಮವಾರಪೇಟೆ : ಸಮೀಪದ ತೋಳುರುಶೆಟ್ಟಳ್ಳಿಯ ಶುಭಾಸ್ ನಗರದಲ್ಲಿ ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ 9ನೇ ವರ್ಷದ ಗೌರಿ ಗಣೇಶ ಮೂರ್ತಿಯನ್ನು ಅದ್ದೂರಿಯಾಗಿ ವಿಸರ್ಜಿಸಲಾಯಿತು.

ಡಿಜೆ ಸೌಂಡ್ ಹಾಗೂ ಗೊಂಬೆ ಕುಣಿತದೊಂದಿಗೆ ವಿದ್ಯುತ್ ದೀಪಾಲಂಕಾರಗೊಂಡ ವಾಹನದಲ್ಲಿ ಗೌರಿ ಗಣೇಶ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಮೆರವಣಿಗೆ ನಡೆಸಿ, ತೋಳುರುಶೆಟ್ಟಲ್ಲಿಯ ಬಸವೇಶ್ವರ ದೇವಸ್ಥಾನದ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.

ಈ ಸಂದರ್ಭ ಯುವಕ ಸಂಘದ ಅಧ್ಯಕ್ಷ ಟಿ.ಏನ್.ಬಸವರಾಜು, ಕಾರ್ಯದರ್ಶಿ ಕೆ.ಎಸ್.ನಂದೀಶ್, ಖಜಾಂಚಿ ಸತೀಶ್ (ದಾಮು), ಟಿ.ವಿ.ಅಭಿಜಿತ್, ಚಂದನ್, ರಾಜೇಶ್, ದರ್ಶನ್ ಮತ್ತು ಅರ್ಚಕ ಸುಧಾಕರ್ ಜೈನ್ ಮುಂತಾದವರು ಉಪಸ್ಥಿತರಿದ್ದರು.

 

Share this article

ಟಾಪ್ ನ್ಯೂಸ್

More News