ಜನವಾಹಿನಿ NEWS ಮಡಿಕೇರಿ : ಜಗತ್ತಿನ ಎಲ್ಲಾ ನಿಘಂಟಿನಲ್ಲಿ ತ್ಯಾಗ ಎಂಬ ಪದದ ಸಮನಾರ್ಥಕ ಪದವೇ ಮಹಾತ್ಮ ಗಾಂಧಿ ಆಗಿದೆ ಎಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಬಣ್ಣಿಸಿದ್ದಾರೆ.
ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಕಛೇರಿಯಲ್ಲಿ ಆಯೋಜಿಸಿದ ಮಹಾತ್ಮ ಗಾಂಧಿಯವರ 156 ನೇ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಯವರ 121 ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಭಾರತದಿಂದ ಬ್ರಿಟೀಷರನ್ನು ಹೊರಗಟ್ಟಲು ಲಕ್ಷಾಂತರ ಜನರು ಸಹಸ್ರಾರು ನಾಯಕರು ಹೋರಾಟ ಮಾಡಿದ್ದರೆ ಭಾರತವನ್ನು ಪ್ರಜಾಪ್ರಭುತ್ವ ರಾಷ್ಟವನ್ನಾಗಿ ರೂಪಿಸಲು ಮಹಾತ್ಮ ಗಾಂಧಿಯವರು ನೇರ ಕಾರಣ ಎಂದು ತಿಳಿಸಿದರು.ಗಾಂಧಿಯವರ ಪ್ರತಿನಿತ್ಯ ಮತ್ತು ಪ್ರತಿ ಕ್ಷಣ ಭಾರತೀಯರಲ್ಲಿ ಇರಬೇಕು ಎಂಬ ಕಾರಣದಿಂದಲೇ ಭಾರತ ಸರ್ಕಾರ ಭಾರತದ ಕರೆನ್ಸಿಯಲ್ಲಿ ಅವರ ಚಿತ್ರವನ್ನು ಅಳವಡಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಮುಂದಿನ ಪೀಳಿಗೆಗೆ ಮಹಾತ್ಮ ಗಾಂಧಿಯವರ ಸಾಧನೆಗಳನ್ನು, ಚಿಂತನೆಗಳನ್ನು ತಿಳಿಸುವ ಕೆಲಸ ನಮ್ಮಿಂದ ಆಗಬೇಕಿದೆ ಎಂದು ಮನವಿ ಮಾಡಿದರು.
ರೈಲು ಅಪಘಾತದ ಹೊಣೆ ಹೊತ್ತು ಮಂತ್ರಿ ಪದವಿ ತ್ಯಜಿಸಿದ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಯವರು ಜಗತ್ತಿಗೆ ನೈತಿಕತೆಯ ಪಾಠ ಕಲಿಸಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್ ರವರು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಯವರು ಕಾಂಗ್ರೆಸ್ ಪಕ್ಷದ ಮೂಲಕ ಮುನ್ನಲೆಗೆ ಬಂದು ರಾಷ್ಟ್ರದ ನಾಯಕರಾಗಿದ್ದು ಕಾಂಗ್ರೆಸ್ ಕಾರ್ಯಕರ್ತರು ಹೆಮ್ಮೆ ಪಡುವ ವಿಷಯ ಎಂದು ಹೇಳಿದರು.
ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ ಹಾಗೂ ಮಾಜಿ ನಗರ ಸಭೆ ಅಧ್ಯಕ್ಷೆ ಜುಲೇಕಾಬಿ ರವರು ಕಾರ್ಯಕ್ರಮದ ಕುರಿತು ಮಾತನಾಡಿದರು.
ನಗರ ಸಭಾ ಸದಸ್ಯ ಮಂಡಿರ ಸದಾ ಮುದ್ದಪ್ಪ,ಮೂಡಾ ಸದಸ್ಯೆ ಮೀನಾಜ್ ಪ್ರವೀಣ್,ಸುದಯ್ ನಾಣಯ್ಯ,ಪ್ರಮುಖರಾದ ಬೊಳ್ಳಿಯಂಡ ಗಣೇಶ್,ಕಲೀಲ್ ಬಾಷ,ಶ್ರೀಮತಿ ಶಶಿ,ಮಮ್ತಾಜ್ ಬೇಗಂ,ಮುನೀರ್ ಮಾಚರ್,ಕೆ.ಜಿ.ಪೀಟರ್,ರಿಯಾಸುದ್ದೀನ್,ಶೇಖ್ ಅಹಮ್ಮದ್, ಹಬೀಬ್,ರಾಣಿ,ಉಷಾ,ಎಮ್.ಎ.ಆಯುಬ್,ಗಣೇಶ್,ಕೆ.ಜಿ.ವಿಠಲ್, ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.







